ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ತಾಣದಲ್ಲಿ ‘ಸ್ವರ್ಣಮಾರ್ಗ’

Last Updated 27 ಜನವರಿ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಾಮ­ರಾಜ­ಪೇಟೆಯ ಟಿಪ್ಪು ಸುಲ್ತಾನ್ ಅರಮನೆ­ಯಿಂದ ಸದಾಶಿವ­ನಗರದ ಅರಮನೆ ಮೈದಾನದವರೆಗೆ ಹಲವು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿರುವ ನಗರದ ವಾಸ್ತುತಜ್ಞರೊಬ್ಬರು, ಈ ಪ್ರದೇಶ­ವನ್ನು ‘ಪಾರಂಪರಿಕ ವಲಯ’ ಎಂದು ಘೋಷಿಸಲು ಸಲಹೆ ನೀಡಿದ್ದಾರೆ.

ಈ ವಲಯದಲ್ಲಿ ಸಂಚಾರದಟ್ಟಣೆ ಹೆಚ್ಚಾ­ಗಿದ್ದು, ದಾರಿಹೋಕರಿಗೆ ಯಾವುದೇ ಪಾರಂಪ­ರಿಕ ಕಟ್ಟಡವನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಪುರಾತನ ಕಟ್ಟಡಗಳನ್ನು ಜನ ಗಮನವಿಟ್ಟು ನೋಡಿದ್ದಾದರೆ ಮತ್ತೆ ಮತ್ತೆ ವೀಕ್ಷಿಸಬೇಕೆನ್ನುವ ಅಭಿಲಾಷೆ­ಯನ್ನು ಅವುಗಳು ಹುಟ್ಟುಹಾಕುತ್ತವೆ ಎನ್ನುತ್ತಾರೆ ವಾಸ್ತುತಜ್ಞ ನರೇಶ್‌ ನರಸಿಂಹನ್‌.

‘ಅರಮನೆಯಿಂದ ಅರಮನೆವರೆಗೆ’ ಹೆಸರಿ­ನಲ್ಲಿ ನರೇಶ್‌ ಅವರು ಈ ಸಮೀಕ್ಷೆ­ಯನ್ನು ನಡೆಸಿ­ದ್ದಾರೆ. ‘ಒಂದೊಂದು ತಾಣವೂ ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿದೆ’ ಎಂದು ಅವರು ಹೇಳುತ್ತಾರೆ. ನಿಜವಾಗಿ ಹೇಳುವು ದಾದರೆ ಟಿಪ್ಪು ಅರಮನೆ­ಗಿಂತ ತುಸು­ಹಿಂದೆ ಈ ವಲಯ ಶುರುವಾ­ಗುತ್ತದೆ. ಒಡೆಯರ್‌ ಅವರ ಅರಮನೆಯಿರುವ ಮೈದಾನದವರೆಗೂ ಅದು ವಿಸ್ತಾರ ಹೊಂದಿದೆ’ ಎಂದು ವಿವರಿಸುತ್ತಾರೆ.

‘ಸ್ವರ್ಣ ಮಾರ್ಗದಲ್ಲಿರುವ ಈ ಕಟ್ಟಡಗಳನ್ನು ವೀಕ್ಷಿಸುತ್ತಾ ಬಂದರೆ ಬೆಂಗಳೂರು ಹೇಗೆ ಬೆಳೆ­ಯುತ್ತಾ ಬಂತು ಎನ್ನುವುದೂ ಗೊತ್ತಾಗುತ್ತದೆ’ ಎಂದು ಹೇಳುತ್ತಾರೆ ನರೇಶ್‌.

ನಗರದ ಹಳೆಯ ಪ್ರದೇಶಗಳ ಕುರಿತು ವಿವರಿಸಿ, ‘ಅವೆನ್ಯೂ ರಸ್ತೆಯೂ ಪಾರಂಪರಿಕ ಮೌಲ್ಯ ಹೊಂದಿದ್ದು, ಅಲ್ಲಿನ ಕಟ್ಟಡಗಳನ್ನು ಜತನದಿಂದ ಕಾಪಾಡಿಕೊಳ್ಳುವ ಅಗತ್ಯವಿದೆ. ಪಾದಚಾರಿಗಳಿಗೆ ಮೀಸಲಾಗಿರುವ ಈ ಬೀದಿ ಸ್ವರೂಪವನ್ನು ಯಥಾರೀತಿಯಲ್ಲಿ ಮುಂದು­ವ­ರಿಸಿ­ಕೊಂಡು ಹೋಗುವ ಅಗತ್ಯವಿದೆ’ ಎನ್ನುತ್ತಾರೆ.

‘ಮುಂಬೈ, ಹೈದರಾಬಾದ್‌ ಮತ್ತು ಬಾರ್ಸಿ­ಲೋನಾದಂತಹ ನಗರಗಳಲ್ಲಿ ಪಾರಂಪರಿಕ ವಲಯವನ್ನು ಪ್ರತ್ಯೇಕ­ವಾಗಿ ಗುರುತಿಸಲಾಗಿದೆ. ಅವುಗಳ ರಕ್ಷಣೆಗೆ ಅಲ್ಲಿನ ಸರ್ಕಾರಗಳು ವಿಶೇಷ ಆದ್ಯತೆ ನೀಡುತ್ತವೆ. ಇಲ್ಲಿಯೂ ಅಂತಹ ಪ್ರಯತ್ನದ ಅಗತ್ಯವಿದೆ’ ಎಂದು ಹೇಳುತ್ತಾರೆ.

ಮಾಣಿಕ್ಯವೇಲು ಮ್ಯಾನ್ಶನ್‌ ಮತ್ತು ಸ್ವಾತಂತ್ರ್ಯ ಉದ್ಯಾನವನ್ನು ಸಾರ್ವ­ಜನಿಕರ ಉಪಯೋಗಕ್ಕೆ ತೆರೆದಿಟ್ಟದ್ದನ್ನು ಸ್ವಾಗತಿಸಿರುವ ಅವರು, ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಜನರಲ್ಲಿ ಜಾಗೃತಿ ಉಂಟು ಮಾಡಬೇಕು ಎನ್ನುವ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT