ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ಸ್ಥಾನಕ್ಕಾಗಿ ಭಾರತ ಹೋರಾಟ

ವಿಶ್ವ ಹಾಕಿ ಸೆಮಿಫೈನಲ್ಸ್‌: ಇಟಲಿ ಎದುರು ಇಂದು ಪೈಪೋಟಿ
Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಆ್ಯಂಟ್‌ವರ್ಪ್‌, ಬೆಲ್ಜಿಯಂ (ಪಿಟಿಐ): ಎರಡು ದಿನಗಳ ಹಿಂದೆ ವಿಶ್ವ ಹಾಕಿ ಲೀಗ್ ಸೆಮಿಫೈನಲ್‌ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಹಾಲೆಂಡ್‌ ಎದುರು ಸೋತಿರುವ ಭಾರತದ ವನಿತೆಯರು  ಗುರುವಾರ 5 ರಿಂದ 8ನೇ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇಆಫ್‌ ಪಂದ್ಯದಲ್ಲಿ ಇಟಲಿಯನ್ನು ಎದುರಿಸಲಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡವು 0–7 ಗೋಲುಗಳಿಂದ ನೆದರ್‌ ಲ್ಯಾಂಡ್ ಎದುರು ಸೋಲನುಭವಿಸಿತ್ತು.  ಟೂರ್ನಿಯಲ್ಲಿ ಐದನೇ ಸ್ಥಾನ ಪಡೆಯಲು ಇಟಲಿಯ ವಿರುದ್ಧ ಗೆಲ್ಲಬೇಕಿದೆ.  ವಿಶ್ವ ಚಾಂಪಿಯನ್ ನೆದರ್‌ಲ್ಯಾಂಡ್ ಎದುರಿನ ಪಂದ್ಯದಲ್ಲಿ ಭಾರತ ತಂಡದ ದೌರ್ಬಲ್ಯಗಳು ಬಹಿರಂಗವಾಗಿದ್ದವು.

ರಕ್ಷಣಾ ವ್ಯೂಹದಲ್ಲಿರುವ ಲೋಪ ಗಳನ್ನು ನೆದರ್‌ಲೆಂಡ್ಸ್‌ ಸಮರ್ಥವಾಗಿ ಬಳಸಿಕೊಂಡಿತ್ತು. ಇದೀಗ ರಕ್ಷಣಾ ವಿಭಾಗವನ್ನು ಬಲಪಡಿಸಿಕೊಂಡು ಆಡಲು ಭಾರತ ಸಿದ್ಧವಾಗಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಇಟಲಿ ತಂಡವು ಆಸ್ಟ್ರೇಲಿಯಾಕ್ಕೆ ತೀವ್ರ ಸ್ಪರ್ಧೆ ಒಡ್ಡಿತ್ತು. ಆದರೆ. ಆಸ್ಟ್ರೇಲಿಯಾ ತಂಡವು ತನಗೆ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಮೇಲುಗೈ ಸಾಧಿಸಿತ್ತು.

ಕಳೆದ ಡಿಸೆಂಬರ್‌ನಲ್ಲಿ  ಉಭಯ ತಂಡಗಳ ನಡುವಣ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತವು  ಒಂದು, ಇಟಲಿ ಎರಡು ಪಂದ್ಯಗಳನ್ನು ಗೆದ್ದಿದ್ದವು. ಎರಡು ಪಂದ್ಯಗಳು ಡ್ರಾ ಆಗಿದ್ದವು. ‘ಚುರುಕಾದ ಮತ್ತು ಚುಟುಕು ಪಾಸ್‌ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಿದೆ. ವೇಗದ ಆಟದಿಂದ ಅವರ ಯೋಜನೆ ಯನ್ನು ವಿಫಲಗೊಳಿಸಿದರೆ, ನಮ್ಮ ಹಾದಿ ಸುಲಭವಾಗುತ್ತದೆ.

ಈ ನಿಟ್ಟಿನಲ್ಲಿಯೇ ಆಟಗಾರ್ತಿಯರಿಗೆ ಮಾರ್ಗ ದರ್ಶನ ನೀಡಲಾಗುತ್ತಿದೆ’ ಎಂದು ತಂಡದ ಮುಖ್ಯ ಕೋಚ್ ಮಥಿಯಾಸ್ ಆರೆನ್ಸ್ ಹೇಳಿದ್ದಾರೆ.   ಟೂರ್ನಿಯಲ್ಲಿ ಅನುಭವಿಸಿರುವ ಸೋಲಿನಿಂದಾಗಿ ಮಾನಸಿಕವಾಗಿ ಆಟಗಾರ್ತಿಯರು ಕುಗ್ಗಿದ್ದಾರೆ. ಈ ಸವಾಲನ್ನು ಮೀರಿದರೆ ಇಟಲಿ ನಮಗೆ ಸುಲಭದ ತುತ್ತಾಗಲಿದೆ ಎಂದು ಆರೆನ್ಸ್  ಅಭಿಪ್ರಾಯಪಟ್ಟಿದ್ದಾರೆ.
*
ಸಮಬಲದ ಹಣಾಹಣಿ
ಆ್ಯಂಟ್‌ವರ್ಪ್‌, ಬೆಲ್ಜಿಯಂ: ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರತದ ರಕ್ಷಣಾ ವಿಭಾಗದ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಂಡ ಮಲೇಷ್ಯಾ ತಂಡ ವಿಶ್ವ ಹಾಕಿ ಸೆಮಿಫೈನಲ್ಸ್‌ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದ ಆರಂಭದಲ್ಲಿ ಮುನ್ನಡೆಯಲ್ಲಿ ಹಾದಿಯಲ್ಲಿ ಸಾಗಿತ್ತು.

ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಉಭಯ ತಂಡಗಳು 2–2 ಗೋಲುಗಳಿಂದ ಮುನ್ನಡೆ ಹೊಂದಿದ್ದವು. ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಸರ್ದಾರ್‌ ಸಿಂಗ್‌ ನಾಯಕತ್ವದ ಭಾರತ ತಂಡ ಆರಂಭದಲ್ಲಿ ಬೇಗನೆ ಮುನ್ನಡೆ ಪಡೆದುಕೊಂಡಿತಾದರೂ, ನಂತರ ಮಲೇಷ್ಯಾ ಹೋರಾಟದ ಮುಂದೆ ಮಂಕಾಯಿತು. ನಾಲ್ಕನೇ ಕ್ವಾರ್ಟರ್ ಪಂದ್ಯ ಮುಗಿಯಲು 12 ನಿಮಿಷದ ಆಟ ಬಾಕಿಯಿತ್ತು.

ಭಾರತ ತಂಡ ಲೀಗ್ ಹಂತದಲ್ಲಿ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿತ್ತು. ಪಾಕಿಸ್ತಾನದ ವಿರುದ್ಧ ಡ್ರಾ ಮಾಡಿಕೊಂಡಿತ್ತು. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತ ಈಗಾಗಲೇ ಅರ್ಹತೆ ಪಡೆದುಕೊಂಡಿದೆ.

ಆದ್ದರಿಂದ ಈ ಟೂರ್ನಿಯಲ್ಲಿ ಭಾರತದ ಮೇಲೆ ಯಾವ ಒತ್ತಡವೂ ಇಲ್ಲ. ಆರಂಭದಲ್ಲಿ ಮಲೇಷ್ಯಾ ಮುನ್ನಡೆ ಹೊಂದಿತ್ತು.ಆದರೆ, 49ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಭಾರತ ಗೋಲು ಕಲೆ ಹಾಕಿ ಸಮಬಲ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT