ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟು: ಜನತಾ ಪರಿವಾರ ಶಪಥ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯವಾಗಿ ಪ್ರಬಲ­ವಾ­ಗು­ತ್ತಿರುವ ಬಿಜೆಪಿ ವಿರುದ್ಧ ಪ್ರತಿ­ಭ­ಟಿಸಲು ಸೋಮವಾರ ಒಂದೇ ವೇದಿಕೆಗೆ ಬಂದ ಜನತಾ ಪರಿವಾರದ ನಾಯಕರು ಭಿನ್ನಾಭಿಪ್ರಾಯ ಮರೆತು ಒಗ್ಗೂಡುವ ಶಪಥ ಮಾಡಿದರು. ಹಳೆಯದನ್ನು ಮರೆತು ಹೊಸ ಅಧ್ಯಾಯ ಆರಂಭಿಸಲು ಜನತಾ ಪರಿ­ವಾ­ರದ ನಾಯಕರು ತೀರ್ಮಾನಿ­ಸಿದರು.

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌, ಆರ್‌ಜೆಡಿ ಮುಖಂಡ ಲಾಲು ಪ್ರಸಾದ್‌, ಜೆಡಿಯು ನಾಯಕ ನಿತೀಶ್‌ ಕುಮಾರ್ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತಿತರರು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರ­ದಿಂದ ಕಿತ್ತೊಗೆಯಲು ನಿರ್ಧರಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆ ವೇಳೆ ಕೊಟ್ಟಿರುವ ಭರವಸೆಗಳನ್ನು ಈಡೇರಿ­ಸಲು ವಿಫಲರಾಗಿದ್ದಾರೆ. ಕಪ್ಪು ಹಣ ತರುವುದಾಗಿ ನೀಡಿದ್ದ ವಾಗ್ದಾನ ಮರೆತಿದ್ದಾರೆ ಎಂದು ನಾಯಕರು ಟೀಕಿ­ಸಿ­ದರು. ವಿದೇಶಿ ಬ್ಯಾಂಕುಗಳ­ಲ್ಲಿರುವ ಕಪ್ಪು ಹಣ ತಂದರೆ ಪ್ರತಿಯೊಬ್ಬರ ಖಾತೆಗೂ ₨15 ಲಕ್ಷ ಜಮಾ ಮಾಡ­ಬ­ಹುದು ಎಂದು ನೀಡಿದ್ದ ಭರವಸೆ ಏನಾ­ಯಿತು ಎಂದು ಅವರು ಪ್ರಶ್ನಿಸಿದರು.

ಎನ್‌ಸಿಪಿ ಮುಖಂಡರಾದ ತಾರೀಖ್‌ ಅನ್ವರ್‌, ಡಿ.ಪಿ. ತ್ರಿಪಾಠಿ, ಇಂಡಿಯನ್‌ ನ್ಯಾಷನಲ್‌ ಲೋಕದಳದ ದುಶ್ಯಂತ್‌ ಚೌತಾಲಾ ಮೊದಲಾದ­ವರು ಭಾಗವ­ಹಿಸಿದ್ದ ಜನತಾ ಪರಿವಾ­ರದ ಧರಣಿ­ಯಲ್ಲಿ, ಹಿಂದೆ ಮೂರು ಸಲ ಕೇಂದ್ರದಲ್ಲಿ ಸರ್ಕಾರ ಮಾಡಿದ ಸಂದರ್ಭವನ್ನು ಮೆಲುಕು ಹಾಕಲಾ­ಯಿತು. ಮೋದಿ ಅವರಿಗೆ ಸಿಕ್ಕಿರುವುದು ಕೇವಲ ಶೇ 31ರಷ್ಟು ಮತಗಳು. ಜನ­ರಿಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇ­ರಿಸದಿದ್ದರೆ ಮನೆಗೆ ಹೋಗಬೇಕಾ­ಗುತ್ತದೆ ಎಂದು ಎಚ್ಚರಿಸಿದರು.

ಜನತಾ ಪರಿವಾರ ಮತ್ತೆ ಒಗ್ಗೂ­ಡುತ್ತಿದೆ. ನಾವೆಲ್ಲರೂ ಒಗ್ಗೂಡುವ ನಿಶ್ಚಯ ಮಾಡಿದ್ದೇವೆ. ಮುಲಾಯಂ ಸಿಂಗ್‌ ವಿಲೀನದ ವಿಧಿ ವಿಧಾನ ರೂಪಿ­ಸುತ್ತಿದ್ದಾರೆ. ಉಳಿದ ಪಕ್ಷಗಳನ್ನು ಒಳ­ಗೊಂಡು ಆಡಳಿತ ಪಕ್ಷಕ್ಕೆ ವಿರುದ್ಧವಾಗಿ ಪ್ರಬಲ ವಿರೋಧ ಪಕ್ಷ ಕಟ್ಟಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಿರಂತರ­ವಾಗಿ ‘ದಾಳಿ’ ಮಾಡು­ತ್ತಿದೆ ಎಂದು ದೂರಿ­ದರು. ನಿತೀಶ್‌ ಕುಮಾರ್‌ ಅವರ ಜತೆ ತಾವು ಭಿನ್ನಾ­ಭಿ­ಪ್ರಾಯ ಹೊಂದಿ­ರು­ವುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಆದರೆ, ನಾವಿಬ್ಬರೂ ಜತೆಗೂಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT