ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ಸ್ಪೀಕರ್‌ ವಿರುದ್ಧ ರಾಜ್ಯಪಾಲರಿಗೆ ದೂರು

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿ­ದಂತೆ ಕಳೆದ ಎಂಟು ದಿನಗಳಿಂದ ಒಡಿಶಾ ವಿಧಾನಸಭೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತು ಸ್ಪೀಕರ್‌ ನಿರ್ಧಾರದ ವಿರುದ್ಧ ಆಕ್ರೋಶ­ಗೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಶನಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಸಂವಿಧಾನದ ಪಾವಿತ್ರ್ಯ ಕಾಪಾ­ಡಲು ಕೂಡಲೇ ಮಧ್ಯಪ್ರವೇಶಿಸ­ಬೇಕೆಂದು ರಾಜ್ಯ­ಪಾಲ ಎಸ್‌.ಸಿ. ಜಮೀರ್‌ ಅವ­ರನ್ನು ಒತ್ತಾಯಿಸ­ಲಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರು ಆಡಳಿತ ಪಕ್ಷ ಬಿಜೆಡಿ ಮತ್ತು ಸ್ಪೀಕರ್‌ ವಿರುದ್ಧ ಪ್ರತ್ಯೇಕವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಎರಡು ಕಂಪೆನಿ ವಿರುದ್ಧ ಪ್ರಕರಣ ದಾಖಲು
ಕೋಲ್ಕತ್ತ (ಐಎಎನ್‌ಎಸ್‌):
ಬಹು­ಕೋಟಿ ರೂಪಾಯಿಗಳ ಶಾರದಾ ಹಗ­ರ­ಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಪೊಲೀಸರು ಶುಕ್ರವಾರ ಶಾರದಾ ಚಿಟ್‌ಫಂಡ್‌ ಕಂಪೆನಿಗೆ ಸಂಬಂಧವಿಲ್ಲದ ಎರಡು ಕಂಪೆನಿಗಳ ಹಾಗೂ ಅವರ ನಿರ್ದೇಶಕರುಗಳ ವಿರುದ್ಧ  ಪ್ರಕರಣ ದಾಖಲಿಸಿದ್ದಾರೆ.

ಸುಪ್ರೀಂಕೋರ್ಟ್‌ ಮೇ 9ರಂದು ನೀಡಿದ ಆದೇಶದಂತೆ ಸಿಬಿಐ ಪೊಲೀಸರು ರಮೆಲ್‌ ಇಂಡಸ್ಟ್ರೀಸ್‌, ಅನ್ನೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ವಿರುದ್ಧ ಸಿಬಿಐ ಪೊಲೀ­ಸರು ಪ್ರಕರಣಗಳನ್ನು ದಾಖಲಿಸಿ­ದ್ದಾರೆ. ಕಂಪೆನಿಗಳ ನಿರ್ದೇ­ಶಕ­ರು­ಗಳ ವಿರುದ್ಧ  ವಿಶ್ವಾಸದ್ರೋಹ, ಮೋಸ, ಅಪರಾಧ ಪಿತೂರಿ, ಚಿಟ್‌ ಹಣ ಹಂಚಿಕೆ ಯೋಜನೆ ನಿಷೇಧ ಕಾಯಿದೆ ಉಲ್ಲಂಘನೆ ಪ್ರಕರಣ ದಾಖಲಾ­ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT