ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಸ್ವಚ್ಛತೆಗೆ ಆದ್ಯತೆ

ಗಂಗಾ ಶುದ್ಧೀಕರಣ: ಹೊಸ ಕ್ರಮಕ್ಕೆ ನಿರ್ಧಾರ
Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಂಗಾನದಿ ಶುದ್ಧೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಹೊಸ ಕ್ರಮಗಳನ್ನು ಅಳವಡಿಸಿ­ಕೊಳ್ಳಲು ನಿರ್ಧರಿಸಿದೆ. ನದಿಯನ್ನು ಕಲುಷಿತ­ಗೊಳಿಸುವ ಒಳಚರಂಡಿಗಳ ಸ್ವಚ್ಛತೆಯತ್ತ ಮೊದಲು ಗಮನಹರಿಸ­ಲಾ­ಗು­ತ್ತದೆ. ಗಂಗಾ ಶುದ್ಧೀಕರಣದ ಸಂದೇ­ಶಗಳನ್ನು ದೇಶದಾದ್ಯಂತ ಹರ­ಡಲು ‘ಗಂಗಾ ವಾಹಿನಿ’ ಪಡೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.

ಗುಜರಾತ್‌ನ ಸಬರಮತಿ ನದಿ ದಂಡೆಯ ಅಭಿವೃದ್ಧಿ ಮಾಡಿ, ಪ್ರವಾಸಿ ತಾಣವಾಗಿ ರೂಪಿಸಿದ ಮಾದರಿ­ಯ­ಲ್ಲಿಯೇ ಗಂಗಾನದಿಯ ದಡದಲ್ಲಿ­ರುವ ನಗರ ಮತ್ತು ಪಟ್ಟಣಗಳಲ್ಲಿ ನದಿ ದಂಡೆ ಅಭಿವೃದ್ಧಿ ನಡೆಸ­ಲಾಗುವುದು. ಕಡಿಮೆ ಅವಧಿಯಲ್ಲಿ ಅವಧಿಯಲ್ಲಿ ಅನು­ಷ್ಠಾನಗೊಳಿಸಬಹುದಾದ ಕ್ರಮಗ­ಳನ್ನು ಮುಂದಿನ 45 ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

‘ಮೊದಲಿಗೆ ನದಿಗೆ ಕೊಳಚೆ ನೀರು ಸೇರಿಸುವ ಒಳಚರಂಡಿಗಳತ್ತ ಗಮನ­ಹರಿ­­ಸ­­ಲಾಗುವುದು. ಗಂಗೋ­ತ್ರಿ­­ಯಿಂದ ಗಂಗಾ ಸಾಗರದವರೆಗೆ 140 ಒಳ­ಚರಂಡಿ­ಗ­ಳಿವೆ. ಇವುಗಳಿಂದ ಅಪಾರ ಪ್ರಮಾಣದ ಕೊಳಚೆ ನೀರು ಗಂಗಾನದಿ ಸೇರುತ್ತಿದೆ. ನದಿ ಸೇರುವ ಹಲವು ಉಪನದಿ­ಗಳೂ ಸಹ ಚರಂಡಿ­ಯಂತೆಯೇ ಆಗಿವೆ’ ಎಂದು ಕೇಂದ್ರ ಜಲಸಂಪನ್ಮೂಲ ಮತ್ತು ಗಂಗಾನದಿ ಶುದ್ಧೀಕರಣ ಖಾತೆ ಸಚಿವೆ ಉಮಾ ಭಾರತಿ  ತಿಳಿಸಿದ್ದಾರೆ.

ಗೋಮುಖ್ ಪ್ರದೇಶದಿಂದ ಗಂಗಾ­ಸಾಗರದವರೆಗೆ ಹಸಿರೀಕರಣಕ್ಕೆ ಸರ್ಕಾರ ಮುಂದಾಗಿದೆ. ಒಳಚರಂಡಿಗೆ ರಾಸಾ­ಯ­ನಿಕ ಮತ್ತು ಕೈಗಾರಿಕಾ ತ್ಯಾಜ್ಯ ಬಿಡು­ವುದನ್ನು ತಡೆಯಲು ಕ್ರಮ ಕೈಗೊಳ್ಳ­ಲಾ­ಗುವುದು ಎಂದು ಅವರು ಹೇಳಿದರು. ರೆಡ್‌ ಕ್ರಾಸ್‌ ಮಾದರಿಯಲ್ಲಿಯೇ ‘ಗಂಗಾ ವಾಹಿನಿ’ ಎಂಬ ರಾಷ್ಟ್ರೀಯ ಸ್ವಯಂಸೇವಕರ ಪಡೆ­ಯನ್ನು ಸ್ಥಾಪಿಸ­ಲಾ­ಗು­ವುದು. ಈ ಪಡೆಯಲ್ಲಿ ಯುವ­ಕರು, ವಿದ್ಯಾರ್ಥಿಗಳು, ಮಾಜಿ ಯೋಧರು ಮತ್ತಿತ­ರರು ಗಂಗಾನದಿ ಶುದ್ಧೀಕರಣದ ಸಂದೇಶ­ಗಳನ್ನು ದೇಶ­ದಾ­ದ್ಯಂತ ಹರಡಲಿದ್ದಾರೆ ಎಂದು ಅವರ  ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT