ಬಳ್ಳಾರಿ: ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಓದುಗ ಸ್ನೇಹಿಯಾದ ಇ –ಪುಸ್ತಕ ಲೋಕವೊಂದು ಶೀಘ್ರ ಅನಾವರಣ ಗೊಳ್ಳಲಿದೆ. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಪೈಕಿ ಇ–ಲೈಬ್ರರಿ ಸಾಫ್ಟ್ವೇರ್ ಅಳವಡಿಸಿಕೊಂಡ ಮೊದಲ ಸಾರ್ವಜನಿಕ ಗ್ರಂಥಾಲಯವಾಗಿಯೂ ದಾಖಲೆ ನಿರ್ಮಿಸಲಿದೆ.

ಗ್ರಂಥಾಲಯದಲ್ಲಿರುವ ಪುಸ್ತಕಗಳ ಸಮಗ್ರ ಮಾಹಿತಿಯ ಕಂಪ್ಯೂಟರಿಗೆ ಅಳವಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಹಳೇ ಗ್ರಂಥಾಲಯವು ಇ–ಗ್ರಂಥಾಲಯವಾಗಿ ಬಾಗಿಲು ತೆರೆಯಲಿದೆ.

ಓದುಗರು ತಮಗೆ ಬೇಕಾದ ಪುಸ್ತಕವು ಗ್ರಂಥಾಲಯದಲ್ಲಿ ಇದೆಯೇ ಅಥವಾ ಬೇರೊಬ್ಬರು ಅದನ್ನು ಓದಲು ಪಡೆದಿರುವರೇ ಎಂಬ ಬಗ್ಗೆ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಪುಸ್ತಕಕ್ಕಾಗಿ ರ್್ಯಾಕ್ಗಳಲ್ಲಿ ಹುಡುಕಾಡುವ ಕೆಲಸಕ್ಕೆ ಕಡಿವಾಣ ಬೀಳಲಿದೆ. ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ. ಒಂದು ಗಂಟೆ ಅಥವಾ ಒಂದು ದಿನದ ಅವಧಿಯಲ್ಲಿ ಎಷ್ಟು ಪುಸ್ತಕಗಳನ್ನು ಎಷ್ಟು ಮಂದಿ ಪಡೆದರು ಎಂಬ ಮಾಹಿತಿಯೂ ಸಿಬ್ಬಂದಿಯ ಬೆರಳ ತುದಿಯಲ್ಲೇ ಲಭ್ಯವಿರಲಿದೆ.

ಬಾರ್ಕೋಡಿಂಗ್: ಇನ್ನು ಕೆಲವು ಸಾವಿರ ಪುಸ್ತಕಗಳಿಗೆ ಚೀಟಿ ಅಂಟಿಸಬೇಕಾಗಿದೆ ಎನ್ನುತ್ತಾರೆ ಮುಖ್ಯ ಗ್ರಂಥಾಲಯಾಧಿಕಾರಿ ರಾಮಯ್ಯ. ಪುಸ್ತಕದ ಹೆಸರು, ಪ್ರಕಾರ, ಲೇಖಕರು, ಪ್ರಕಾಶಕರು, ಪ್ರಕಟಣೆಯ ವರ್ಷ ಸೇರಿದಂತೆ ಸಮಗ್ರ ಮಾಹಿತಿಯ ದಾಖಲೀಕರಣದ ಕೆಲಸ ಪೂರ್ಣಗೊಂಡರೆ, ಇಡೀ ಗ್ರಂಥಾಲಯದ ನಿರ್ವಹಣೆ ಯನ್ನು ಓದುಗ ಸ್ನೇಹಿಯಾಗಿ ರೂಪಿಸುವುದು ಬಹಳ ಸುಲಭವಾಗುತ್ತದೆ ಎನ್ನುತ್ತಾರೆ ಅವರು.

ಸಾಫ್ಟ್ವೇರ್: ಗ್ರಂಥಾಲಯ ಪ್ರಾಧಿಕಾರದ ನೇತೃತ್ವದಲ್ಲಿ ಸ್ಥಳೀಯವಾಗಿಯೇ ಹಣವನ್ನು ಕೂಡಿಸಿ ಇ–ಲೈಬ್ರರಿ ಸಾಫ್ಟ್ವೇರ್ ಅನ್ನು ಅಳವಡಿಸಲಾಗುತ್ತಿದೆ. ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಹಿಂದಿನ ಅವಧಿಯ ಮೇಯರ್ ರಮೇಶ್ ಸಹಕಾರ ಸ್ಮರಣೀಯ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರನ್ನು ಹೊರತುಪಡಿಸಿದರೆ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇ–ಲೈಬ್ರರಿ ಸಾಫ್ಟ್ ವೇರ್ ಅಳವಡಿಕೆ ಯಾಗಿಲ್ಲ. ಕೆಲವೆಡೆ ಅಳವಡಿಸುವ ಕೆಲಸ ಶುರುವಾಗಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ, ಪೂರ್ಣ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಗ್ರಂಥಾಲಯವಾಗಿ ಈ ಗ್ರಂಥಾಲಯವು ಗಮನ ಸೆಳೆಯಲಿದೆ ಎಂದರು.

ಸ್ವಾಗತಾರ್ಹ: ಇ–ಸೌಲಭ್ಯ ಅಳವಡಿಸುತ್ತಿರುವುದು ಸ್ವಾಗತಾರ್ಹ ಕಾರ್ಯ. ಅದರಿಂದ ಓದುಗರಿಗೆ ಹೆಚ್ಚಿನ ಅನುಕೂಲವಾಗಬೇಕಷ್ಟೆ ಎಂದು ಪದವಿ ವಿದ್ಯಾರ್ಥಿಗಳಾದ ರಾಮಾಂಜಿ, ನರೇಶ್, ಸ್ವಾತಿ, ನಿರ್ಮಲಾ, ಗುರುದತ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.