ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಗಿಡಮೂಲಿಕೆ ‘ಟೈರಗಾನ್’

Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ಸೂರ್ಯಕಾಂತಿಯ ಆ್ಯಸ್ಟರ್ಏಷಿಯೇ (Asteraceae) ಕುಟುಂಬಕ್ಕೆ ಸೇರಿದ ಈ ಗಿಡಮೂಲಿಕೆ ಟೈರಗಾನ್ (Terragon). ಇದರ ವೈಜ್ಞಾನಿಕ ಹೆಸರು ‘ಆರ್ಟಿಮಿಷಿಯಾ ಡ್ರಾಕೂನ್ಕುಲಸ್ ಸಟೈವ’ (Artemisia Dracunculus Sativa). ಸಾಮಾನ್ಯವಾಗಿ  ಜಗತ್ತಿನಾದ್ಯಂತ ಎಲ್ಲೆಡೆ ಕಾಣಸಿಗುವ ಈ ಸಸ್ಯ ಮುಖ್ಯವಾಗಿ ಯುರೇಷಿಯಾ ಮತ್ತು ಉತ್ತರ ಅಮೆರಿಕದಲ್ಲಿ ದಟ್ಟವಾಗಿ ಕಂಡು ಬರುತ್ತದೆ. ಮೂಲತಃ ಮಧ್ಯ ಏಷ್ಯಾ, ಭಾಗಶಃ ಸೈಬೀರಿಯಾದಲ್ಲಿ ಉಗಮಗೊಂಡಿದೆ ಎನ್ನಲಾಗುತ್ತದೆ.

ಔಷಧೀಯ ಗುಣಗಳ ಸಾರವೇ ಅಡಗಿರುವ ಈ ಸಸ್ಯದ ಎಲೆಗಳು ಕಂದು ಹಸಿರು ಬಣ್ಣದ್ದಾಗಿದ್ದು ಚೂಪಾದ ತುದಿಯನ್ನು ಹೊಂದಿರುತ್ತವೆ. ಈ ಎಲೆಗಳು ಸೇವನೆಗೆ ಪೂರಕವಾಗಿವೆ. ಕರಾವಳಿ ತೀರದ ಆಹಾರಗಳಲ್ಲಿ, ಹಣ್ಣುಗಳ ಜೊತೆಗೆ, ಪೌಲ್ಟ್ರಿ ತಿನಿಸುಗಳಲ್ಲಿ, ಮೊಟ್ಟೆ ಮತ್ತು ವಿವಿಧ ತರಕಾರಿಗಳು ಹಾಗೂ ಮುಖ್ಯವಾಗಿ ವಿಧವಿಧವಾದ ಸಾಸ್‌ಗಳಲ್ಲಿ ಬಳಸಲಾಗುತ್ತದೆ. ತಾಜಾ ಎಲೆಗಳು ಪೋಷಕಾಂಶಗಳಿಂದ ಕೂಡಿದ್ದು ತಾಜಾ ಇರುವಾಗಲೇ ಬಳಸುವುದು ಸೂಕ್ತ. ಒಣಗಿದೆಲೆಗಳು ಸುವಾಸಿತವಾಗಿರದ ಕಾರಣ ಬಳಸಿದ ಆಹಾರ ವಿಶೇಷವಾಗಿರುವುದಿಲ್ಲ.

ಫ್ರೆಂಚ್ ಅಥವಾ ಜರ್ಮನಿಯಲ್ಲಿ ಸಿಗುವ ಟೈರಗಾನ್ ಸಿಹಿ ಹಾಗೂ ಸುವಾಸಿತವಾಗಿರುತ್ತದೆ. ರಷ್ಯಾದ ಟೈರಗಾನ್ ಸ್ವಲ್ಪ ಕಹಿ ರುಚಿ ಹೊಂದಿರುತ್ತದೆ. ಆಹಾರದಲ್ಲಿ ಫ್ರೆಂಚ್ ಮೂಲದ ಟೈರಗಾನ್ ಬಳಸುವುದೇ ಹೆಚ್ಚು. ಅದನ್ನು ‘ಡ್ರಾಗನ್ ವೋರ್ಟ್’(Dragon wort) ಎಂದು ಕರೆಯುತ್ತಾರೆ. ಈ ಮೂಲಿಕೆಯು ಆ್ಯಂಟಿ-ಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿರುವುದರಿಂದ ರೋಗ ಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.ಸುಮಾರು ಒಂದು ಮೀಟರ್‌ವರೆಗೂ ಬೆಳೆಯಬಲ್ಲ ಈ ಸಸ್ಯವು ಸೂರ್ಯನ ಬೆಳಕಿರುವೆಡೆ ಸಮೃದ್ಧವಾಗಿ ಬೆಳೆಯುತ್ತದೆ ಹಾಗೂ ಮರಳಿನಲ್ಲಿಯೂ ಬೆಳೆಯಬಲ್ಲದು. ಮೆಡಿಟರೇನಿ ಯನ್ ಪ್ರದೇಶದ ಟೈರಗಾನ್ ಉಳಿದ ವೆಲ್ಲವುಗಳಿಗಿಂತ ಹೆಚ್ಚು ಸುವಾಸಿತವಾಗಿರುತ್ತದೆ.

ಆರೋಗ್ಯವರ್ಧಕ ಟೈರಗಾನ್
ಟೈರಗಾನ್‌ನಲ್ಲಿ ಪ್ರಮುಖ ಆರೋಗ್ಯವರ್ಧಕ ಎಣ್ಣೆ ಅಂಶಗಳಾದ ‘ಎಸ್ಟ್ರಾಗೋಲ್’ (Methyl Chavicol), ಸಿನಿಯೋಲ್, ಓಸಿಮೀನ್ ಮತ್ತು ಫೆಲ್ಲಾಂಡ್ರೀನ್‌ಗಳಿವೆ.ಈ ಹಿಂದೆ ಇದನ್ನು ಹಸಿವನ್ನು ಪ್ರಚೋದಿಸುವ ಅಂಶವಾಗಿ ಬಳಸಲಾಗುತ್ತಿತ್ತು. ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಕಂಡುಕೊಂಡ ಅಂಶಗಳೆಂದರೆ ಟೈರಗಾನ್ ನಲ್ಲಿರುವ ‘ಪಾಲಿಫಿನಾಲಿಕ್ ಸಂಯುಕ್ತಗಳು’ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಗೊಳಿಸುತ್ತವೆ ಎನ್ನಲಾಗಿದೆ.

ತಾಜಾ ಟೈರಗಾನ್ ಮೂಲಿಕೆಯು ಅತಿ ಹೆಚ್ಚು  ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದ ಆಹಾರ ವಾಗಿದೆ. 100ಗ್ರಾಂ ಟೈರಗಾನ್‌ನಲ್ಲಿ 15,542 TE (trolex equivalents) ಯಷ್ಟು ORAC (Oxygen Radical Absorbance Capacity)ನ್ನು ಹೊಂದಿದೆ.ಲ್ಯಾಬೊರೇಟರಿ ಅಧ್ಯಯನಗಳು ಹೇಳುವಂತೆ ಟೈರಗಾನ್‌ನಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳನ್ನು ವರ್ಧಿಸುವ ಅಂಶಗಳಿವೆಯಂತೆ. ಆ ಮೂಲಕವಾಗಿ ಹೃದಯಾಘಾತವಾಗದಂತೆ ತಡೆಗಟ್ಟಲು ನೆರವಾಗಿದೆ.

ಈ ಮೂಲಿಕೆಯು ಜೀವಸತ್ವಗಳ ಕಣಿವೆಯಾಗಿದೆ. ಜೀವಸತ್ವ ‘ಸಿ’, ‘ಎ’, ‘ಬಿ’ ಕಾಂಪ್ಲೆಕ್ಸ್ ಗುಂಪಿನ ಫೋಲೇಟ್ಸ್, ಪೈರಿಡಿಕ್ಸಿನ್, ನಿಯಾಸಿನ್, ರೈಬೋಫ್ಲೇವಿನ್ ಇತ್ಯಾದಿ ಆ್ಯಂಟಿ ಆಕ್ಸಿಡೆಂಟ್‌ಗಳಾಗಿ ಹಾಗೂ ಕಿಣ್ವಗಳಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ.ಟೈರಗಾನ್‌ನಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಮೆಗ್ನೇಷಿಯಂ, ತಾಮ್ರ, ಪೊಟ್ಯಾಷಿಯಂ ಮತ್ತು ಸತು ಹೇರಳ ಪ್ರಮಾಣದಲ್ಲಿವೆ. ಇದರಲ್ಲಿನ ಮ್ಯಾಂಗನೀಸ್ ಆ್ಯಂಟಿ ಆಕ್ಸಿಡೆಂಟ್ ಕಿಣ್ವವಾಗಿ ಬಳಕೆಯಾಗುವುದಲ್ಲದೇ ಕಬ್ಬಿಣಾಂಶವು ಜೀವಕೋಶಗಳ ಉಸಿರಾಟಕ್ಕೆ ಮತ್ತು ರಕ್ತದಲ್ಲಿನ ಕೋಶಗಳ ಉತ್ಪಾದನೆಗೆ ಸಹಾಯಕವಾಗಿವೆ.


ಇದರಲ್ಲಿನ ‘ಯುಜೆನಾಲ್’ಎಣ್ಣೆ ಪದಾರ್ಥದಂತ ವೈದ್ಯಶಾಸ್ತ್ರದಲ್ಲಿ ಅರೆವಳಿಕೆಯಾಗಿ ಹಾಗೂ ನಂಜುನಿರೋಧಕ ವಾಗಿ ಬಳಕೆ ಮಾಡಲಾಗುತ್ತಿದೆ.ನಿದ್ರಾಹೀನತೆಗೆ ಟೈರಗಾನ್ ಟೀ ವರದಾನ ವಾಗಿದೆ. ಪಾರಂಪರಿಕ ಕ್ರಿಸ್ಮಸ್ ಬ್ರೆಡ್‌ಗಳಾದ ಪೋಟಿಕಾದಲ್ಲಿ ಇದನ್ನು ಬಳಸಲಾಗುತ್ತಿದೆ. ಫ್ರೆಂಚ್‌ನ ‘ಬಿಯರ್ ನೈಸ್’ ತಯಾರಿಕೆಯಲ್ಲಿ ಬಳಸುವ ಪ್ರಮುಖ ಅಂಶಗಳಲ್ಲಿ ಟೈರಗಾನ್ ಒಂದಾಗಿದೆ. ತಾಜಾ ಟೈರಗಾನ್‌ಅನ್ನು ಸಲಾಡ್‌ಗಳಲ್ಲಿ ಬಳಸಬಹುದಾಗಿದೆ. ತಾಜಾ ಮತ್ತು ಒಣಗಿದ ಎಲೆಗಳನ್ನು ಮೀನು, ಪೌಲ್ಟ್ರಿಗೆ ಸಂಬಂಧಿಸಿದ ಆಹಾರ ತಯಾರಿಕೆಯಲ್ಲಿ ಬಳಸಬಹುದು.

ತಾಜಾ ಟೈರಗಾನ್ ಮೂಲಿಕೆಯನ್ನು ಆಹಾರ ತಯಾರಿಕೆಯಲ್ಲಿ ಬಳಸುವ ಮುನ್ನ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ಅಡುಗೆಯ ಕೊನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಸಿ, ತಯಾರಿಸಿದ ಆಹಾರದ ಸ್ವಾದ, ರುಚಿ ಹೆಚ್ಚಿಸಬಹುದಾಗಿದೆ. ಟೈರಗಾನ್‌ನಲ್ಲಿ ಪ್ರಮುಖ ಎಣ್ಣೆ ಎಸ್ಟ್ರಾಗೋಲ್ (estragole) ಇರುವುದರಿಂದ ಇದು ಕೆಲವರಲ್ಲಿ ಚರ್ಮಸಂಬಂಧಿ ತೊಂದರೆಗಳನ್ನುಂಟು ಮಾಡುವ ಸಾಧ್ಯತೆ ಯಿರುವುದಿಂದ ಎಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT