ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಶೇಖರಪ್ಪ ಉಡೇಹಳ್ಳಿ ಅವರು ತಮ್ಮ ತೋಟದಲ್ಲಿ 13 ವರ್ಷಗಳ ಹಿಂದೆ ಎಲೆ ಬಳ್ಳಿ ಹಾಕಿದ್ದಾಗ ಅದು ಅವರ ಪಾಲಿಗೆ ಕಾಮಧೇನು ಆಗುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ.

50 ಸಾವಿರ ರೂಪಾಯಿ ವೆಚ್ಚದಲ್ಲಿ ಹಾಕಿರುವ ವೀಳ್ಯದೆಲೆ ಬಳ್ಳಿಗಳು ಇಂದು ಅವರ ಬೊಕ್ಕಸವನ್ನು ತುಂಬಿಸುತ್ತಿವೆ, ಲಕ್ಷಾಂತರ ರೂಪಾಯಿ ವ್ಯವಹಾರ ಕುದುರಿಸುತ್ತಿದೆ. ತಮ್ಮಲ್ಲಿರುವ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಬಾಳೆ ಹಾಕಿದ್ದಾರೆ. ಮತ್ತೆರಡರಲ್ಲಿ ಅಡಿಕೆ ಮತ್ತು ವೀಳ್ಯದೆಲೆ ಬೆಳೆದಿದ್ದಾರೆ. ಆದರೆ ಅಡಿಕೆಗಿಂತ ಹೆಚ್ಚಿನ ಆದಾಯವನ್ನು ಅವರಿಗೆ ವೀಳ್ಯದೆಲೆ ಕೃಷಿಯೇ ಒದಗಿಸಿಕೊಟ್ಟಿದೆ. ‘ಅಡಿಕೆ ನೆಡುವ ಬದಲು ವೀಳ್ಯವನ್ನು ಬೆಳೆದರೆ ಹೇಗೆ ಎಂಬ ಚಿಕ್ಕ ಯೋಚನೆ ನನ್ನ ಜೀವನದ ತೀರುವನ್ನೇ ಬದಲಾಯಿಸಿ ಈಗ ಅಕ್ಷಯ ಪಾತ್ರೆಯಾಗಿದೆ’ ಎನ್ನುತ್ತಾರೆ ಶೇಖರಪ್ಪ.

ಸದಾ ಬೇಡಿಕೆ
‘ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇದ್ದದ್ದೇ. ಚಿಲ್ಲರೆ ವ್ಯಾಪಾರಿ ಸೇರಿದಂತೆ ದೊಡ್ಡ ಮಟ್ಟದ ವ್ಯಾಪಾರಿಗಳು ಹೊಲಕ್ಕೆ ಬಂದು ಎಲೆಯನ್ನು ಖರೀದಿಸುತ್ತಾರೆ. ಮಳೆಗಾಲದಲ್ಲಿ ತುಸು ವ್ಯಾಪಾರ ಕಮ್ಮಿ ಎನಿಸಿದರೂ ಉಳಿದ ದಿನಗಳಲ್ಲಿ ಭಾರಿ ಲಾಭ ಮಾಡಿಕೊಳ್ಳಬಹುದು’ ಎನ್ನುವುದು ಶೇಖರಪ್ಪನವರ ಅನುಭವದ ನುಡಿ.

ಕಾಲಕ್ಕೆ ತಕ್ಕಂತೆ ಅಗತ್ಯ ಗೊಬ್ಬರ ನೀಡುವುದರ ಜೊತೆಗೆ ಸಕಾಲಕ್ಕೆ ನೀರು ಒದಗಿಸಲು ಒಂದು ಬೋರ್ವೆಲ್ ಇದ್ದರೆ ಸಾಕು. ವೀಳ್ಯದೆಲೆ ಬಳ್ಳಿಯನ್ನು ಸೊಂಪಾಗಿ ಬೆಳೆಸಬಹುದು.

ಒಳ್ಳೆಯ ಲಾಭ ಪಡೆಯಲು ಕನಿಷ್ಠ ಒಂದು ಎಕರೆ ಜಮೀನಿನಲ್ಲಿ ಈ ಕೃಷಿ ಕೈಗೊಳ್ಳುವ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಎಕರೆ ಎಲೆ ಬೆಳೆಯಲು ಎರಡರಿಂದ ಮೂರು ಲಕ್ಷ ಬಂಡವಾಳ ಹೂಡಬೇಕು. ಪ್ರಾರಂಭದಲ್ಲಿ ಇದರಿಂದ ಯಾವುದೇ ಲಾಭವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಅದು ಒಂದು ಹಂತಕ್ಕೆ ಬಂದು ಎಲೆ ಬಿಡಲು ಸುಮಾರು 10 ರಿಂದ 15 ತಿಂಗಳ ಕಾಲ ಹಿಡಿಯುತ್ತದೆ. ಆದರೆ ಒಂದು ಸಲ ಎಲೆ ಬಿಡಲು ಪ್ರಾರಂಭಿಸಿದರೆ ಸುಮಾರು 40 ವರ್ಷಗಳ ತನಕ ಈ ಬೆಳೆ ಬೆಳೆಯಬಹುದಾಗಿದೆ. ಕೊಟ್ಟಿಗೆ ಗೊಬ್ಬರ, ನೀರಿನ ಅನುಕೂಲ, ಜೊತೆಗೆ ಒಂದಿಷ್ಟು ನಿರ್ವಹಣೆ ಇದ್ದರೆ ಇದು ಜೀವನಪೂರ್ತಿ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ.

ಪ್ರಾರಂಭದ ಹಂತಗಳು
ಈ ಕೃಷಿ ಕೈಗೊಳ್ಳುವ ಮುನ್ನ ಜಮೀನನ್ನು ಸಮತಟ್ಟಾಗಿ ಹದ ಮಾಡಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ ಹಾಕಬೇಕು. ಬಳ್ಳಿಗೆ ಆಧಾರದ ಅವಶ್ಯಕತೆ ಇರುವ ಕಾರಣ, ಮೊದಲು ನುಗ್ಗೆ, ಚೂಗಚಿ, ಹಾಲಿವನ್ನಂತಹ ಕಡಿಮೆ ಬೇರುಗಳನ್ನು ಬೀಡುವ ಮರಗಳನ್ನು ಆಯ್ದು ಜಮೀನಿನಲ್ಲಿ ಮಡಿಗಳನ್ನು 20/4 ಅಡಿ ಅಳತೆಯಲ್ಲಿ ಮಡಿ ಮಾಡಿಕೊಂಡು 4/4 ಅಡಿ ಅಂತರದಲ್ಲಿ ಗಿಡಗಳನ್ನು ನಾಟಬೇಕು. ಈ ಗಿಡಗಳು ಒಂದು ಹಂತಕ್ಕೆ ದೊಡ್ಡದಾದ ನಂತರ ಎಲೆಬಳ್ಳಿ ನಾಟಬೇಕು. ಬಳ್ಳಿ ಕ್ರಮೇಣ ಬೆಳೆದು 10–15 ತಿಂಗಳಿನಲ್ಲಿ ಆದಾಯ ನೀಡಲು ಪ್ರಾರಂಭಿಸುತ್ತವೆ.

ವೀಳ್ಯದ ಎಲೆ ಬಳ್ಳಿಯನ್ನು ಪ್ರತಿನಿತ್ಯ ನಿರ್ವಹಣೆ ಮಾಡಲು ಒಬ್ಬ ವ್ಯಕ್ತಿಯ ಅವಶ್ಯಕತೆ ಇದೆ. ಪ್ರತಿ ತಿಂಗಳು ಎಲೆ ಕೊಯ್ಯುವಾಗ, ಗೊಬ್ಬರ ಹಾಕುವ ಸಂದರ್ಭದಲ್ಲಿ ಆಳು ಕಾಳುಗಳ ಅವಶ್ಯವಿದೆ. ತೇವಾಂಶ ಆರದಂತೆ ವಾರದಲ್ಲಿ ಮೂರು ಬಾರಿ ನೀರು ಹಾಯಿಸಬೇಕು. 2–3 ತಿಂಗಳಿಗೊಮ್ಮೆ ಕುರಿ ಮತ್ತು ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.

ರೋಗಬಾಧೆ
ಮಳೆ ಮತ್ತು ಚಳಿಗಾಳದಲ್ಲಿ ಇಬ್ಬನಿಯು ಎಲೆ ಮೇಲೆ ಬೀಳುವುದರಿಂದ ಎಲೆ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಇದರ ಜೊತೆ ಬೂದಿ ರೋಗ ಇದಕ್ಕೆ ಸಾಮಾನ್ಯ. ಇವಕ್ಕೆಲ್ಲ ಸೂಕ್ತ ಕಾಲದಲ್ಲಿ ಔಷಧಿಗಳನ್ನು ಸಿಂಪಡಿಸಬೇಕು.

ಹೀಗೆ ಮಾಡಿದರೆ ಪ್ರತಿ ತಿಂಗಳು ಎಕರೆಗೆ 25 ರಿಂದ 30 ಪೆಂಡಿ ಎಲೆ ಕೊಯ್ಲು ಮಾಡಬಹುದು. ಮಳೆಗಾಲದಲ್ಲಿ ಪ್ರತಿ ಪೆಂಡಿಗೂ 3,500 ರೂಪಾಯಿ ಹಾಗೂ ಉಳಿದ ದಿನಗಳಲ್ಲಿ ಪ್ರತಿ ಪೆಂಡಿಗೂ 5000 ರೂಪಾಯಿವರೆಗೆ ಆದಾಯ ನಿರೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.