ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಾಥ್‌ ಲೋಕಸಭೆಯ ಪ್ರತಿಪಕ್ಷ ನಾಯಕ?

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶದ ಚಿಂಡ್ವಾರ್‌ದಿಂದ ಸತತ ಒಂಬತ್ತು ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಹಿರಿಯ  ಸಂಸದ ಕಮಲನಾಥ್ ಅವರನ್ನು ಲೋಕ­ಸಭೆ­­ಯಲ್ಲಿ  ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಿರುವ ಕಾಂಗ್ರೆಸ್‌ ಪಕ್ಷದ   ನಾಯಕರಾಗಲು  ಸೋನಿಯಾ ಗಾಂಧಿ  ಹಾಗೂ ರಾಹುಲ್‌ ಗಾಂಧಿ  ಅಷ್ಟಾಗಿ ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ರಾಹುಲ್‌ ಗಾಂಧಿ ಅವರಿಗೆ ಆಪ್ತರಾಗಿರುವ ಹಾಗೂ ಮೋದಿ ಅಲೆಯ ನಡುವೆಯೂ 9ನೇ ಬಾರಿ   ಗೆದ್ದಿರುವ ಕಮಲನಾಥ್‌ ಅವರಿಗೆ ಲೋಕಸಭೆಯ   ವಿರೋಧ ಪಕ್ಷದ ನಾಯಕನ ಪಟ್ಟ ಕಟ್ಟಲು ಕಾಂಗ್ರೆಸ್‌ ಹೈಕಮಾಂಡ್‌ ಯೋಚಿಸಿದೆ.

ಮೋದಿ ಅವರನ್ನು ಎದುರಿಸಲು ಕಮಲನಾಥ್‌ ಅರ್ಹ ವ್ಯಕ್ತಿ ಎಂಬುವುದು ಹೈಕಮಾಂಡ್‌ ನಿಲುವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ವಾರಾಂತ್ಯದಲ್ಲಿ ಸಭೆ ಸೇರಲಿರುವ ಕಾಂಗ್ರೆಸ್‌ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ ಸಂಸದೀಯ ಪಕ್ಷದ  ನಾಯಕಿಯಾಗಿ ಪುನರಾಯ್ಕೆ ಮಾಡುವ ಸಾಧ್ಯ್ಯತೆ ಇದೆ  ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT