ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದ ವಿಶ್ವನಾಥ ಆಚಾರ್ಯಗೆ ಸನ್ಮಾನ

Last Updated 23 ಏಪ್ರಿಲ್ 2014, 9:15 IST
ಅಕ್ಷರ ಗಾತ್ರ

ಬ್ರಹ್ಮಾವರ: ‘ಸನ್ಮಾನ ಸ್ವೀಕರಿಸುವುದು ಸುಲಭ. ಆದರೆ ಆ ಸನ್ಮಾನಕ್ಕೆ ಉತ್ತರಿ­ಸುವುದು ಬಲು ಕಷ್ಟದ ಕೆಲಸ. ಬೇರೆ ಕಡೆ ಊಟ ಮಾಡುವುದಕ್ಕಿಂತ ನಮ್ಮ ಮನೆಯಲ್ಲಿ ತಾಯಿಯ ಕೈಯೂಟ ಹೇಗೆ ಹಿತವೆನಿಸುತ್ತದೆಯೋ ಹಾಗೆ ನಮ್ಮವರು ಗುರುತಿಸಿ ಗೌರವಿಸುತ್ತಿ­ರು­ವುದು ಅತೀ ಹೆಚ್ಚು ಖುಷಿ ನೀಡುತ್ತದೆ’ ಎಂದು ಯಕ್ಷಗಾನ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯ ಹೇಳಿದರು.

ಗುಂಡ್ಮಿಯ ಹದ್ದಿನಬೆಟ್ಟಿನಲ್ಲಿ ಇತ್ತೀ­ಚೆಗೆ ರಾಘವೇಂದ್ರ ಆಚಾರ್ಯ ಮತ್ತು ಅಂಗನವಾಡಿ ಮಿತ್ರರು ಏರ್ಪಡಿಸಿದ್ದ ನೀಲಾವರ ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಉದ್ಯಮಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಆನಂದ್ ಗುಂಡ್ಮಿ ಅಧ್ಯಕ್ಷತೆ   ವಹಿಸಿ­ದ್ದರು.

ಮಣೂರು ಶಾಲೆಯ ಅಧ್ಯಾಪಕ ಶ್ರೀಧರ ಶಾಸ್ತ್ರೀ, ಯಕ್ಷಗಾನ ಕಲಾಭಿ­ಮಾನಿ ದಿನೇಶ್ ಆಚಾರ್ಯ, ಉದ್ಯಮಿ ಪುಂಡಲೀಕ ಪೈ, ಅರಕ್ಷಕ ಸಿಬ್ಬಂದಿ ಅಶ್ರಫ್ ಮತ್ತು ಕಾರ್ಯಕ್ರಮ ಸಂಘ­ಟಕ ರಾಘವೇಂದ್ರ ಗುಂಡ್ಮಿ ವೇದಿಕೆ­ಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT