ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತರ ಪರ ಲಾಬಿ

ನ್ಯಾ.ಬಾಲಕೃಷ್ಣನ್‌ ವಿರುದ್ಧ ಕಟ್ಜು ಬಾಂಬ್‌
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌):  ನ್ಯಾಯ­­­ಮೂರ್ತಿ­ಗಳ ನೇಮಕದಲ್ಲಿ ಹಸ್ತಕ್ಷೇಪ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು  ಇದೀಗ ಸುಪ್ರೀಂಕೊರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ವಿರುದ್ಧ  ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

‘ಭ್ರಷ್ಟಾಚಾರ ಆರೋಪದ ಕೇಳಿಬಂದಿದ್ದ ನ್ಯಾಯಮೂರ್ತಿಯನ್ನು ಕಾಯಂಗೊಳಿಸಲು  ಆಗ ಸುಪ್ರೀಂ­ಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯಾಗಿದ್ದ ಬಾಲಕೃಷ್ಣನ್‌ ಶಕ್ತಿಮೀರಿ ಪ್ರಯತ್ನಿಸಿದ್ದರು’ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ.
‘ನಾನು ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ  ಆ ವ್ಯಕ್ತಿ ನ್ಯಾಯಮೂರ್ತಿಯಾಗಿದ್ದರು. ಹೀಗಾಗಿ ಅವರ ಭ್ರಷ್ಟಾಚಾರ ಹಿನ್ನೆಲೆ  ಚೆನ್ನಾಗಿ ಗೊತ್ತಿತ್ತು. ಇದನ್ನು ನಾನು ನ್ಯಾಯಮೂರ್ತಿಗಳ ನೇಮಕ ಶಿಫಾರಸು ಮಂಡಳಿ ಸದಸ್ಯರಾಗಿದ್ದ  ಕಪಾಡಿಯಾ ಅವರಿಗೆ ತಿಳಿಸಿದ್ದೆ’ ಎಂದು ಕಟ್ಜು ಹೇಳಿಕೊಂಡಿದ್ದಾರೆ.

‘ಆದರೆ, ನನ್ನ ಆಕ್ಷೇಪದ ಹೊರತಾ­ಗಿಯೂ ಆ ವ್ಯಕ್ತಿಯ ಹೆಸರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಯಿತು.  ಬಾಲಕೃಷ್ಣನ್‌ ಹಟಕ್ಕೆ ಬಿದ್ದು ಆ ವ್ಯಕ್ತಿಯನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮಾಡಿದರು’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT