ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಬಾ ಶಿಬಿರ: ಗಾಂಧಿ ಜಯಂತಿ ಇಂದು

Last Updated 2 ಅಕ್ಟೋಬರ್ 2014, 6:17 IST
ಅಕ್ಷರ ಗಾತ್ರ

ಅರಸೀಕೆರೆ: ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆಯನ್ನು ಮರೆತಿದ್ದ ತಾಲ್ಲೂಕು ಆಡಳಿತ ಈ ಬಾರಿ ಗುರುವಾರ ಗಾಂಧಿ ಜಯಂತಿ ಆಚರಣೆಗೆ ಸಕಲ ರೀತಿಯಿಂದ ಸಜ್ಜುಗೊಂಡಿದೆ.

ಪಟ್ಟಣದ ಹೊರಭಾಗದ ಅರಸೀಕೆರೆ– ಮೈಸೂರು ರಸ್ತೆ ಬದಿ ಇರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ ಕಸ್ತೂರಬಾ ಶಿಬಿರದಲ್ಲಿ ಇರುವ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಥಳದ ಸಮೀಪ ಹಲವಾರು ಕಾರ್ಯಕ್ರಮಗಳನ್ನು ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದು ಭರದ ಸಿದ್ಧತೆಯಲ್ಲಿ ತೊಡಗಿದೆ.

ನವದೆಹಲಿಯ ರಾಜ್‌ಘಾಟ್‌ನಲ್ಲಿ ಗಾಂಧೀಜಿ ಸಮಾಧಿ ಇದ್ದರೆ, ಇಲ್ಲಿ ಅವರ ಚಿತಾಭಸ್ಮ ಸ್ಮಾರಕವನ್ನು ಕೇಂದ್ರ ಸಚಿವರಾಗಿದ್ದ ಯಶೋಧರಮ್ಮ ದಾಸಪ್ಪ ಅವರು ಇಲ್ಲಿ ಸ್ಥಾಪಿಸಿದ್ದರು.

ಆರಂಭದಲ್ಲಿ ಈ ಶಿಬಿರವು ಬಹಳ ಚಟುವಟಿಕೆಯಿಂದ ಕೂಡಿ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಅಲ್ಲದೆ ಮಹಿಳೆಯರಿಗೆ ವೃತ್ತಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಆದರೆ, ಈಚೆಗೆ ಯಾವುದೇ ಜನಪರ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳು ನಡೆಯದೇ ನಿರ್ಲಕ್ಷ್ಯಕ್ಕೆ ಒಳಗಾಗಿ ಹಾಳುಕೊಂಪೆಯಂತಾಗಿದೆ ಎಂದು ಜನರು ದೂರಿದ್ದಾರೆ.

ಕಳೆದ ವರ್ಷ ಗಾಂಧಿ ಜಯಂತಿಯಂದು ತಾಲ್ಲೂಕು ಆಡಳಿತ ಆಚರಣೆಯತ್ತ ಗಮಹರಿಸದೆ ಇರುವುದರ ಕುರಿತು ಈ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಆದರೆ, ಈ ಬಾರಿ ತಾಲ್ಲೂಕು ಆಡಳಿತ ಮುತುವರ್ಜಿ ವಹಿಸಿ ಗುರುವಾರ ಬೆಳಿಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾರ್ಯಕ್ರಮಕ್ಕೆ ಸರ್ವಧರ್ಮ ಗುರುಗಳನ್ನು ಆಹ್ವಾನಿಸಿದ್ದು, ಸಮಾರಂಭದಲ್ಲಿ ಭಗವದ್ಗೀತೆ, ಬೈಬಲ್‌ ಹಾಗೂ ಕುರಾನ್‌ನನ್ನು ಪಠಿಸಲಾಗುವುದು. ಭಜನಾ ತಂಡದವರು  ರಘುಪತಿ ರಾಘವ ರಾಜಾರಾಂ ಭಜನೆ ಹಾಡಲಿದ್ದಾರೆ. ಶಾಸಕರು ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಹಶೀಲ್ದಾರ್‌ ನಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT