ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ ಸುಧಾಕರನ್‌ ಹೇಳಿಕೆ

Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಯುಪಿಎ ಅಧಿ­ಕಾರದ ಅವಧಿಯಲ್ಲಿ ನೇಮಕ­ಗೊಂಡಿ­ರುವ ರಾಜ್ಯಪಾಲರು ರಾಜೀ­ನಾಮೆ ನೀಡಬೇಕೆಂಬ ಕಾಂಗ್ರೆಸ್‌ ಮುಖಂಡ ಪಂದಲಂ ಸುಧಾಕರನ್‌ ಅವರ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್‌ ಮತ್ತು ಮಿಜೋರಾಂ ರಾಜ್ಯಪಾಲ ವಕ್ಕಂ ಪುರು­ಷೋತ್ತಮನ್‌ ಅವರು ಕೇರಳದ ಕಾಂಗ್ರೆಸ್‌ ಮುಖಂಡ­ರಾಗಿ­ದ್ದಾರೆ. ಇವರಿಬ್ಬರೂ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇವರ ಅನುಭವವನ್ನು
ಪಕ್ಷ ಬಳಸಿಕೊಳ್ಳಬೇಕೆಂದು ಫೇಸ್‌­ಬುಕ್‌ನಲ್ಲಿ ಸಲಹೆ ಮಾಡಿದ್ದಾರೆ.

‘ಯುಪಿಎ ಅವಧಿಯಲ್ಲಿ ನೇಮಕ­ಗೊಂಡಿದ್ದ ರಾಜ್ಯಪಾಲರು ರಾಜೀನಾಮೆ ನೀಡಬೇಕು. ಹಿಂದಿನಿಂದ ಅನೌಪ­­ಚಾರಿಕವಾಗಿ ನಡೆದುಕೊಂಡು ಬಂದಿ­ರುವ ಸಂಪ್ರ­ದಾಯವನ್ನು ಪಾಲಿ­ಸ­­ಬೇಕು. ಕಾಂಗ್ರೆಸ್‌ ಪಕ್ಷದ ಅಂತಸ್ತಿನ ದೃಷ್ಟಿಯಿಂದ ಹುದ್ದೆಯನ್ನು ತೊರೆಯಬೇಕು’ ಎಂದೂ ಹೇಳಿದ್ದಾರೆ.

ಸುಧಾಕರನ್‌ ಅವರ ಹೇಳಿಕೆಗೆ ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ಹೇಳಿಕೆ ಬಗ್ಗೆ ಚರ್ಚೆ ಆರಂಭ­ವಾಗುತ್ತಿದ್ದಂತೆಯೇ ಸುಧಾಕರನ್‌ ಸಮರ್ಥನೆಯನ್ನೂ ನೀಡಿದ್ದಾರೆ. ‘ರಾಜ್ಯ­ಪಾಲರ ರಾಜೀ­ನಾಮೆಗೆ ಸಂಬಂ­ಧಿಸಿ ಬಿಜೆಪಿ ಮುಖಂಡರು ಹಗುರವಾಗಿ ಮಾತ­ನಾಡಿದ್ದರಿಂದ ಮನಸ್ಸಿಗೆ ನೋವಾಗಿತ್ತು. ಹೀಗಾಗಿ ಈ ರೀತಿಯ ಹೇಳಿಕೆ ನೀಡಿದ್ದೇನೆಯೇ ಹೊರತು ಬೇರೆ ಉದ್ದೇಶವಿರಲಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT