ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುವವರಾರು?

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭಾಷಾ ಮಾಧ್ಯಮ ಕುರಿತಾದ ಸುಪ್ರೀಂ­ಕೋರ್ಟ್‌ ತೀರ್ಪು ಆತಂಕ ಮೂಡಿಸಿದೆ. ಕರ್ನಾಟಕ ಸರ್ಕಾರ, ಕನ್ನಡ ಸರ್ಕಾರ­ವಾಗಿ ಉಳಿದಿಲ್ಲ. ಕನ್ನಡಪರ ಸಂಘಟನೆಗಳು ಯಾಕೋ ಬಾಯಿ ಬಿಡುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾರು ಬಾಯಿ ಹೊಲಿ­ದಿ­ದ್ದಾರೊ ಗೊತ್ತಿಲ್ಲ. ಕನ್ನಡವನ್ನು ಕಾಯುವ­ವ­ರಾರು?

ಸರ್ಕಾರದ ಮಟ್ಟದಲ್ಲಿ ಸಂಪುಟ ವಿಸ್ತರಣೆ, ನಿಗಮ, ಮಂಡ­ಳಿ­­ಗಳಿಗೆ ನೇಮಕ ಸಂಬಂಧ ತೋರಿಸು­ತ್ತಿರುವ ಆಸಕ್ತಿ, ಮಾಡು­ತ್ತಿರುವ ಚರ್ಚೆ ಕನ್ನಡದ ­ಗಂಭೀರ ಸಮಸ್ಯೆಯ ಕುರಿತು ಆಗುತ್ತಿಲ್ಲ. ಸಾಮಾಜಿಕ ಸಮಾನತೆಯೆಡೆಗೆ ಸಾಗುವ ಮಾರ್ಗ­­ವಾಗ­ಬೇಕಿದ್ದ ಶಿಕ್ಷಣ ಇಂದು ಹಣ ಗಳಿಸಿಕೊಡುವ ಉದ್ಯಮ­ವಾಗಿದೆ. ಈ ಕ್ಷೇತ್ರದ ನೈತಿಕತೆ ಕುಸಿಯು­ತ್ತಿದೆ. 

ನುಡಿಗೆ ಕಿಡಿ ಬಿದ್ದಿರುವ ಈ ಸಂದರ್ಭ­ದಲ್ಲಿ ಸರ್ಕಾರ, ನಾವು ಆರಿಸಿ ಕಳಿಸಿದ ನಾಯಕರು ಏನು ಮಾಡುತ್ತಿ­ದ್ದಾರೆ? ರಾಷ್ಟ್ರದ ಯಾವುದೇ ಭಾಷೆಗೂ ಕನ್ನಡಕ್ಕೆ ಬಂದಿ­ರುವ ದುಃಸ್ಥಿತಿ ಬಂದಿಲ್ಲ. ಆಳು­ವವರ ಬದ್ಧತೆ ಕೇವಲ ಅಧಿ­ಕಾರ ಉಳಿಸಿ­ಕೊಳ್ಳು­
ವ­ತ್ತಲೇ ಇರುವುದು ನಿಜಕ್ಕೂ ದುರಂತ. ಸರ್ಕಾರ ತಕ್ಷಣ ಶಿಕ್ಷಣ ತಜ್ಞ­ರೊಂದಿಗೆ ಚರ್ಚಿಸಿ ಕನ್ನಡ ಮಾಧ್ಯ­ಮದ ಬಗ್ಗೆ ಸದೃಢ ನಿಲುವು ತಳೆಯಲಿ.

–ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT