ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರು. ಮೊಯಿಲಿ ಅವರು ₨ 48.19 ಲಕ್ಷ ಚರಾಸ್ತಿ ಹೊಂದಿದ್ದರೆ, ಪತ್ನಿ ₨ 1.39 ಕೋಟಿ ಚರಾಸ್ತಿ ಹೊಂದಿದ್ದಾರೆ.

ಆಸಕ್ತಿಕರ ಸಂಗತಿಯೆಂದರೆ, ಮೊಯಿಲಿ ಹೆಸರಿಲ್ಲಿ ಒಂಚೂರು ಸ್ಥಿರಾಸ್ತಿಯಿಲ್ಲ. ಆದರೆ ಅವರ ಪತ್ನಿ ಹೆಸರಿನಲ್ಲಿ ₨ 11.02 ಕೋಟಿ ಸ್ಥಿರಾಸ್ತಿ ಇದೆ. ಅದರಲ್ಲಿ ಪಿತ್ರಾರ್ಜಿತವಾಗಿ ₨ 83.13 ಲಕ್ಷ ಸ್ಥಿರಾಸ್ತಿ ಒಳಗೊಂಡಿದೆ.

ಗುರುವಾರ ನಾಮಪತ್ರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆಸ್ತಿ ಕುರಿತು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರದ ಜೊತೆ ಪ್ರಮಾಣ ಪತ್ರ ಸಲ್ಲಿಸಿರುವ ಅವರು ತಮ್ಮ ಕುಟುಂಬದ ಆಸ್ತಿ ವಿವರ ನೀಡಿದ್ದಾರೆ.

ಸಾಲದ ವಿಷಯದಲ್ಲೂ ಪತ್ನಿಯವರೇ ಮುಂದಿದ್ದಾರೆ. ಮೊಯಿಲಿಯವರು ₨ 14.17 ಲಕ್ಷ ಸಾಲ ಹೊಂದಿದ್ದರೆ, ಅವರ ಪತ್ನಿ ₨ 3,80 ಕೋಟಿ ಸಾಲ ಹೊಂದಿದ್ದಾರೆ. ಮೊಯಿಲಿಯವರು ₨ 4.22 ಲಕ್ಷ ಮೌಲ್ಯದ ಟೊಯೊಟಾ ಇಟಿಯೊಸ್ ಲಿವಾ ವಾಹನ ಹೊಂದಿದ್ದರೆ, ಅವರ ಪತ್ನಿ ₨ 7.57 ಲಕ್ಷ ಮೌಲ್ಯದ ಹೊಂಡಾ ಅಕಾರ್ಡ್ ಕಾರು ಹೊಂದಿದ್ದಾರೆ.

ಅಷ್ಟೇ ಅಲ್ಲ, ಮೊಯಿಲಿ ₨ 1.87 ಲಕ್ಷ ಕಾರು ಸಾಲ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಮೊಯಿಲಿಯವರ ಪತ್ನಿ ₨ 14.87 ಲಕ್ಷ ರೂಪಾಯಿ ಮೌಲ್ಯದ 50 ತೊಲೆ ಚಿನ್ನ ಇದೆ. ಕೈಯಲ್ಲಿ ₨ 3,645 ಸಾವಿರ ನಗದು ಹೊಂದಿರುವ ಅವರು ನವದೆಹಲಿ ಮತ್ತು ಬೆಂಗಳೂರಿನ ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ನವದೆಹಲಿಯ ಕೆನರಾ ಬ್ಯಾಂಕ್‌ನಲ್ಲಿ ₨ 3,53 ಲಕ್ಷ , ಬೆಂಗಳೂರಿನ ಶೇಷಾದ್ರಿಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ₨ 3.96 ಲಕ್ಷ , ಬೆಂಗಳೂರಿನ ಆರ್.ಟಿ.ನಗರ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ₨ 2.42 ಲಕ್ಷ , ಬೆಂಗಳೂರಿನ ಆನಂದನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ₨ 77 ಸಾವಿರ , ನವದೆಹಲಿ ಕೆನರಾ ಬ್ಯಾಂಕ್‌ನಲ್ಲಿ ₨ 25.40 ಲಕ್ಷ ಮತ್ತು ವಿಜಯಾ ಬ್ಯಾಂಕ್‌ನಲ್ಲಿ ₨ 41 ಸಾವಿರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.