ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿ: ಸಂಪುಟ ಒಪ್ಪಿಗೆ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೈಗಾರಿಕಾ ಕಾಯ್ದೆ ಸೇರಿ ಕಾರ್ಮಿಕರಿಗೆ ಸಂಬಂ­ಧಿ­ಸಿದ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾವಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಆದರೆ, ಈ ನಿರ್ಧಾರವನ್ನು ಕಾರ್ಮಿಕರ ಒಕ್ಕೂಟಗಳು ಖಂಡಿಸಿವೆ.

1961ರ ಅಪ್ರೆಂಟಿಸ್‌ ಕಾಯ್ದೆ ಮತ್ತು 1988ರ ಕಾರ್ಮಿಕ ಕಾಯ್ದೆ­ಗಳಿಗೆ (ಲೆಕ್ಕಪತ್ರ ಸಲ್ಲಿಕೆಗೆ ಮತ್ತು ಕೆಲವು ಉದ್ದಿಮೆಗಳಿಗೆ ಇರುವ ದಾಖಲೆ ಪುಸ್ತಕ ನಿರ್ವಹಣಾ ವಿನಾಯ್ತಿ) ತಿದ್ದುಪಡಿ ತರುವ ಪ್ರಸ್ತಾವ ಉದ್ದೇಶಿತ ಮಸೂದೆ­ಯಲ್ಲಿದೆ. ಕಾರ್ಖಾನೆಗಳಲ್ಲಿ ರಾತ್ರಿ ಪಾಳಿ­ಯಲ್ಲಿ ದುಡಿಯುವ ಮಹಿಳೆ­ಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಹಾಗೂ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ 1948ರ ಕೈಗಾ­ರಿಕಾ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.

ಇನ್ನಿತರ ಪ್ರಸ್ತಾವಗಳು: ಕಾರ್ಮಿಕರ ಸುರಕ್ಷತೆಯಲ್ಲಿ ಸುಧಾರಣೆ, ಕೆಲವು ಉದ್ದಿಮೆಗಳಲ್ಲಿ ಹೆಚ್ಚುವರಿ ಕೆಲಸದ ಅವಧಿಯನ್ನು 50 ಗಂಟೆಯಿಂದ 100 ತಾಸುಗಳಿಗೆ ಮತ್ತು ಅಗತ್ಯ ಸಾರ್ವಜನಿಕ ಸೇವೆಯ ಉದ್ದಿಮೆಗಳು ಹಾಗೂ ಇನ್ನಿತರ ಕೈಗಾರಿಕೆಗಳಲ್ಲಿರುವ 75 ತಾಸು­ಗಳ ಹೆಚ್ಚುವರಿ ಕೆಲಸ ಅವಧಿ­ಯನ್ನು 125 ಗಂಟೆಗಳಿಗೆ ಹೆಚ್ಚಳ.

ಈಗಿನ ಕಾಲಕ್ಕೆ ಸೂಕ್ತ ಮತ್ತು ಹೆಚ್ಚು ಸಮಂಜಸವಾದ ಹಾಗೂ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಪ್ರಸ್ತಾವಗಳು ಇರುವ ಈ ತಿದ್ದುಪಡಿ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆ ಇದೆ ಎಂದು ಕಾರ್ಮಿಕ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದರು.

ಆದರೆ, ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿ ತರುವುದನ್ನು ಕಾರ್ಮಿಕರ ಒಕ್ಕೂಟಗಳು ವಿರೋಧಿಸಿವೆ.
‘ಸರ್ಕಾರ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿದೆ. ಇದನ್ನು ಒಪ್ಪ­ಲಾಗದು. ತಿದ್ದುಪಡಿ  ಕುರಿತು ಕಾರ್ಮಿ­ಕರಿಗೆ ಯಾವುದೇ ಮಾಹಿತಿ ನೀಡದಿರು­ವುದು ಖಂಡನೀಯ’ ಎಂದು ಸಿಐ­ಟಿಯು ಅಧ್ಯಕ್ಷ ಎ.ಕೆ.ಪದ್ಮನಾಭನ್‌ ಹೇಳಿದ್ದಾರೆ.

‘ಕಾಯ್ದೆಗಳ ಯಾವ ಯಾವ ಭಾಗಗಳಿಗೆ ತಿದ್ದುಪಡಿ ತರಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಕಾರ್ಮಿಕರು ಮತ್ತು ಒಕ್ಕೂಟಗಳ ಜೊತೆಗೆ ಚರ್ಚೆ ಮಾಡಿಲ್ಲ. ಈ ವಿಷಯವನ್ನು ಕಾರ್ಮಿಕ ಸಚಿವರ ಗಮನಕ್ಕೂ ತಂದಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT