ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯವೈಖರಿ ಬದಲಾಗಲಿ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಲಮಂಡಳಿಯ ಲೋಪ ದೋಷಗಳನ್ನು ಪ್ರಸ್ತಾಪಿಸಿ ದಕ್ಷತೆಯಿಂದ ಕೆಲಸ ಮಾಡಲು ಆದೇಶಿಸಿದ್ದರೂ, ಜಲಮಂಡಳಿ ತನ್ನ ಕಾರ್ಯ ವೈಖರಿಯನ್ನು ಬದಲಾಯಿಸಲೇ ಇಲ್ಲ.

ಇದಕ್ಕೆ ನಿದರ್ಶನ ಕೃಷ್ಣರಾಜಪುರ ವ್ಯಾಪ್ತಿಯಲ್ಲಿ ಅನೇಕರು ಕಳೆದ 1–2 ವರ್ಷಗಳಿಂದ ಮೀಟರ್‌ಗಳನ್ನು ಅಳವಡಿಸಿಕೊಳ್ಳದೇ ರಾಜಾರೋಷವಾಗಿ ನೀರು ಪಡೆಯುತ್ತಿದ್ದಾರೆ. ಮೀಟರ್‌ ಹಾಕಿಸಿಕೊಂಡವರು ಸಹ ಅವರೇ ಮೀಟರ್‌ ಎಷ್ಟು ಓಡಿದೆ ಎಂದು ಬರೆದುಕೊಂಡು ಹೋಗಿ ದುಡ್ಡು ಕಟ್ಟಬೇಕು.

ಮೀಟರ್‌ ಹಣ  ಕಟ್ಟದಿದ್ದರೂ ಯಾರೂ ಕೇಳುವುದಿಲ್ಲ. ಅನೇಕ ಕಡೆ ನೀರು ಸೋರಿಕೆ ಆಗುತ್ತಿದ್ದರೂ ಸಿಬ್ಬಂದಿ ಕೊರತೆಯಿಂದ ಕುಡಿಯುವ ನೀರಿನ ಸೋರಿಕೆ ತಡೆಯಲು ಆಗುತ್ತಿಲ್ಲ. ನಮ್ಮ ಮನವಿ ಜಲಮಂಡಳಿಯವರು ಈ ತೊಂದರೆಯನ್ನು ಸರಿಪಡಿಸಿ ನಂತರ ತಮ್ಮ ದರ ಹೆಚ್ಚಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT