ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಬಾಯಿ ಬೇನೆ: ಜಾನುವಾರುಗಳಿಗೆ ಲಸಿಕೆ

Last Updated 17 ಸೆಪ್ಟೆಂಬರ್ 2014, 6:58 IST
ಅಕ್ಷರ ಗಾತ್ರ

ಹಾವೇರಿ: ಜಾನುವಾರುಗಳ ಕಾಲು ಬಾಯಿ ಬೇನೆ ಸಾಂಕ್ರಾಮಿಕ ರೋಗ. ಇದು ತುಂಬಾ ಹಾನಿ ಮಾಡುತ್ತದೆ. ರೋಗ ಹತೋಟಿಗೆ ಲಸಿಕೆ ಹಾಕಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಜೀವ ಕೂಲೇರ ಮನವಿ ಮಾಡಿದರು.

ತಾಲ್ಲೂಕಿನ ಕಾಟೇನಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಜಾನುವಾರುಗಳಿಗೆ ಪಲ್ಸ್‌ ಪೋಲಿಯೊ ಮಾದರಿಯಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು. ಈವರೆಗೆ 45 ಗ್ರಾಮಗಳಲ್ಲಿ 39,320 ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಲಾಗಿದೆ ಎಂದು ಅವರು ವಿವರ ನೀಡಿದರು.

ತಾ.ಪಂ ಗಂಗವ್ವ ಹಿತ್ತಲಮನಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಬಸವರಾಜ ಅರಬಗೊಂಡ, ಪಶು ವೈದ್ಯರಾದ ಡಾ. ಕಟಗಿಹಳ್ಳಿಮಠ, ಡಾ. ಎಚ್.ಬಿ ಸಣ್ಣಕ್ಕಿ, ಡಾ. ಕಿರಣ ಕೊಪ್ಪದ, ಡಾ. ಅಮೃತರಾಜ, ಡಾ. ನಿಂಗಪ್ಪ ಓಲೇಕಾರ, ಡಾ. ಆಶಾ, ಸಿಬ್ಬಂದಿ ಕರಯಪ್ಪನವರ, ಆಡೂರ, ಹೊನ್ನಪ್ಪನವರ, ಕೂಡಲ, ಕೂಸನೂರ, ಬಸಲಿಂಗಪ್ಪ, ಬಾರಿಗಿಡದ, ದೊಡ್ಡಮನಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT