ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿಗೆ ಚಕ್ಕರ್‌ ಸಿನಿಮಾಗೆ ಹಾಜರ್

Last Updated 17 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ರಾಮ್‌ಲೀಲಾ’ ಚಿತ್ರ ಬಿಡುಗಡೆಯ ಖುಷಿಯಲ್ಲಿರುವ ನಟ ಚಿರಂಜೀವಿ ಸರ್ಜಾ ‘ಶಿವಾರ್ಜುನ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಾಲೇಜಿಗೆ ಹೋಗುವಾಗ ಬೈಕ್‌ ಇಷ್ಟಪಡುತ್ತಿದ್ದ ಚಿರಂಜೀವಿ ಈಗಲೂ ಬೈಕ್‌ ಮೋಹಿಯಾಗಿದ್ದಾರೆ. ಸಿನಿಮಾ ಇಂಡಸ್ಟ್ರಿಯೊಂದಿಗಿನ ತಮ್ಮ ವ್ಯಾಮೋಹವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

*‘ರಾಮ್‌ಲೀಲಾ’ ನಂತರ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರಾ?
ರವಿ ಶ್ರೀವತ್ಸ ನಿರ್ದೇಶನದ ‘ಶಿವಾರ್ಜುನ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಜಾಕ್ ಮಂಜು ನಿರ್ಮಾಪಕರಾಗಿದ್ದಾರೆ. ಇದೊಂದು ವಿಭಿನ್ನ ಕಥೆಯಾಗಿದ್ದು, ಮಾಸ್‌ ಸಿನಿಮಾವಾಗಿದೆ. ಪಕ್ಕಾ ಕಮರ್ಷಿಯಲ್‌ ಚಿತ್ರವೆಂದಷ್ಟೇ ಹೇಳಬಹುದು.

*ಶೂಟಿಂಗ್‌ ಸಮಯದಲ್ಲಿ ನಿಮಗೆ ಕಷ್ಟವೆನಿಸುವುದು ಯಾವುದು?
ಯಾವ ಕೆಲಸ ಸುಲಭವಿದೆ? ಎಲ್ಲವೂ ಕಷ್ಟವೇ. ಕಷ್ಟಪಟ್ಟು ಮಾಡುವ ಕೆಲಸವೇ ಖುಷಿ ನೀಡುತ್ತದೆ ಹಾಗೂ ಸವಾಲಾಗುತ್ತದೆ.

*ನಿಮನ್ನು ಕಾಡುವ ಹಾಡು ಯಾವುದು?
ಇಂಥದ್ದೇ ಹಾಡು ಎಂದು ಹೇಳಲಾಗದು, ಆದರೆ ಖುಷಿಯಲ್ಲಿದ್ದಾಗ ಒಂದು ಥರದ ಹಾಡುಗಳು ಕಾಡಿದರೆ, ಬೇಜಾರಾದಾಗ ಮತ್ತೊಂದು ಬಗೆಯ ಹಾಡುಗಳು ನೆನಪಾಗುತ್ತವೆ.

*ಬೈಕ್‌ ಹಾಗೂ ಕಾರು ಯಾವುದಿಷ್ಟ?
ಕಾಲೇಜು ದಿನಗಳಲ್ಲಿ ಬೈಕ್‌ ಬಹಳ ಇಷ್ಟವಾಗುತ್ತಿತ್ತು, ಈಗಲೂ ಇಷ್ಟವಾಗುತ್ತದೆ. ನನ್ನ ಬಳಿ ಸ್ಕಾರ್ಪಿಯೊ, ಇಸುಝು ಎಂಯು 7 ಕಾರುಗಳಿವೆ.

*ಪುಸ್ತಕ ಓದುವ ಹವ್ಯಾಸವಿದೆಯಾ?
ಆ ಹವ್ಯಾಸವಂತೂ ಇಲ್ಲವೇ ಇಲ್ಲ. ಶಾಲೆ, ಕಾಲೇಜು ದಿನಗಳಲ್ಲೇ ಓದುವ ಹವ್ಯಾಸ ಇರಲಿಲ್ಲ, ಈಗ ಎಲ್ಲಿ ಓದಲಿ? (ನಗುತ್ತ) ಕಾಲೇಜಿಗೆ ಚಕ್ಕರ್‌ ಹಾಕಿ ಸ್ನೇಹಿತರೊಂದಿಗೆ ಸಿನಿಮಾ ನೋಡಲು ಹೋಗುತ್ತಿದ್ದೆವು, ಊರೂರು ಸುತ್ತುತ್ತಿದ್ದೆವು. ಇಂದಿನ ಕಾಲೇಜು ಹುಡುಗರು ಏನೆಲ್ಲಾ ಕೀಟಳೆ ಮಾಡುತ್ತಾರೋ ಅದನ್ನೇಲ್ಲಾ ಮಾಡಿದ್ದೇವೆ.

*ನಿಮ್ಮ ಜೀವನದಲ್ಲಿ ಬಹಳ ಖುಷಿಯಾದ ಗಳಿಗೆ?
ನನ್ನ ಮೊದಲ ಸಿನಿಮಾ ಬಿಡುಗಡೆಯಾದ ದಿನ. ಜನರ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗಿತ್ತು.

*ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾವ ನಟಿಯೊಂದಿಗೆ ಅಭಿನಯಿಸಲು ಇಷ್ಟ?
ಇಂಥವರೇ ಅಂಥ ಏನೂ ಇಲ್ಲ, ಅಲ್ಲಿ ದಿನಕ್ಕೊಬ್ಬರು ಹೊಸ ನಟಿಯರು ಬರುತ್ತಿದ್ದಾರೆ, ಅವಕಾಶ ಸಿಕ್ಕಮೇಲೆ ಯೋಚಿಸುತ್ತೇನೆ.

*ನಟರಾಗದಿದ್ದರೆ?
ತೆರೆ ಹಿಂದೆ ಕೆಲಸ ಮಾಡುತ್ತಿದ್ದೆ, ಅಂದರೆ ನಟನಾಗುವುದಕ್ಕೂ ಮುಂಚೆ ನಾನು ಸಹಾಯಕ ನಿರ್ದೇಶಕನಾಗಿದ್ದೆ. ಹಾಗಾಗಿ ನಟನಾಗದಿದ್ದರೂ ಇದೇ ಇಂಡಸ್ಟ್ರಿಯಲ್ಲೇ ಇರುತ್ತಿದ್ದೆ.

*ಯಾವ ಊಟ ನಿಮಗೆ ಇಷ್ಟವಾಗುತ್ತದೆ?
ಮಾಂಸಾಹಾರ ಊಟವೆಂದರೆ ಇಷ್ಟ.

*ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?
ಸಿನಿಮಾಗಳನ್ನು ನೋಡುತ್ತೇನೆ, ಸ್ನೇಹಿತರನ್ನು ಭೇಟಿಯಾಗುತ್ತೇನೆ. ಪ್ರವಾಸಿ ತಾಣಗಳಿಗೆ ಹೋಗುತ್ತೇನೆ.

*ನಿಮಗೆ ಬಹಳ ಇಷ್ಟವಾಗುವ ಪ್ರವಾಸಿ ಸ್ಥಳ?
ಇತ್ತೀಚೆಗೆ ಮಸಿನಗುಡಿ ಅರಣ್ಯ, ಗೋವಾಗೆ ಹೋಗಿದ್ದೆ. ಇಂಥದ್ದೇ ಅಂಥ ಯಾವ ಸ್ಥಳಗಳೂ ಇಲ್ಲ, ಎಲ್ಲಿಗೆ ಹೋಗಬೇಕು ಅನ್ನಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT