ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ನಿರ್ವಹಣಾ ಮಂಡಳಿ ರಚನೆಗೆ ಆಗ್ರಹ

Last Updated 3 ಜೂನ್ 2014, 20:38 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಜಾರಿಗೆ ತಕ್ಷಣವೇ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ತಮಿಳುನಾಡಿನ ಮುಖ್ಯ­ಮಂತ್ರಿ ಜೆ. ಜಯಲಲಿತಾ ಕೇಂದ್ರ ಸರ್ಕಾರವನ್ನು ಮಂಗಳವಾರ ಆಗ್ರಹಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಜಯಲಲಿತಾ, ನ್ಯಾಯ­ಮಂಡಳಿ ಐತೀರ್ಪಿನ ಅನ್ವಯ ತಮಿಳುನಾಡು, ಕರ್ನಾ­­ಟಕದ ನಡುವೆ ನ್ಯಾಯಸಮ್ಮತವಾಗಿ ನೀರಿನ ಹಂಚಿಕೆ ಆಗಬೇಕಾದರೆ ವಿಳಂಬ ಮಾಡದೆ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಒತ್ತಾಯಿಸಿದ್ದಾರೆ.

ಕಾವೇರಿ ನ್ಯಾಯಮಂಡಳಿ 2007ರ ಫೆ.5ರಂದು ಐತೀರ್ಪು ನೀಡಿದೆ. ತಮಿಳುನಾ­ಡಿನ ನಿರಂತರ ಒತ್ತಡ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯಪ್ರ­ವೇ­ಶ­­­ದಿಂದಾಗಿ ಕೇಂದ್ರ ಸರ್ಕಾರ 2013ರ ಫೆ.19­ರಂದು ಅಧಿ­ಸೂಚನೆ ಹೊರಡಿ­ಸಿದೆ. ನ್ಯಾಯ­ಮಂಡಳಿ ತೀರ್ಪು ಜಾರಿಯಾ­ಗಲು ನಿರ್ವ­ಹಣಾ ಮಂಡಳಿ, ಉಸ್ತುವಾರಿ ಸಮಿತಿ ರಚಿಸಬೇಕೆಂದು ಹೇಳಿದ್ದಾರೆ.

ತಾತ್ಕಾಲಿಕ ಉಸ್ತುವಾರಿ ಸಮಿತಿ: ಸದ್ಯ ಕೇಂದ್ರ ಸರ್ಕಾರ ನ್ಯಾಯ­ಮಂಡಳಿ ಐತೀರ್ಪು ಜಾರಿಗೆ ತಾತ್ಕಾಲಿಕವಾದ ಉಸ್ತುವಾರಿ ಸಮಿತಿ ರಚಿಸಿದೆ. ಈ ಸಮಿತಿ ಪರಿಣಾಮ­ಕಾರಿ­ಯಾಗಿ ಕಾರ್ಯ ನಿರ್ವಹಿ­ಸುತ್ತಿಲ್ಲ ಎಂದು ಜಯಲಲಿತಾ ಮೋದಿ ಅವರಿಗೆ ವಿವರಿಸಿದ್ದಾರೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅಗತ್ಯ ಕುರಿತು ಪ್ರಧಾನಿ ಅವರಿಗೆ ಮನವರಿಕೆ ಮಾಡಲಾಗಿದೆ. ತಾಳ್ಮೆಯಿಂದ ಎಲ್ಲ ವಿಷಯಗಳನ್ನು ಆಲಿಸಿದ ಪ್ರಧಾನಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಮಿಳು­ನಾಡು ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮೇ 26ರಂದು ಅಧಿಕಾರ ಸ್ವೀಕರಿಸಿದ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಜಯಲಲಿತಾ ದೂರ ಉಳಿದಿದ್ದರು. ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ ಬಗ್ಗೆ ಜಯಲಲಿತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಜಯಾ ಪ್ರಧಾನಿ ಅವರನ್ನು ಭೇಟಿ ಮಾಡಿ ಸುಮಾರು ಐವತ್ತು ನಿಮಿಷ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT