ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಿಗಾಗಿ ಸುದ್ದಿ:ಮಾಹಿತಿ ನೀಡದ ಆಯೋಗ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಲೋಕಸಭಾ ಚುನಾವಣೆ  ವೇಳೆ ಮಾಧ್ಯಮಗಳಲ್ಲಿ 694 ‘ಕಾಸಿಗಾಗಿ ಸುದ್ದಿ’ಗಳು ಪ್ರಕಟವಾಗಿವೆ ಎಂದು  ಕೇಂದ್ರ ಚುನಾವಣಾ ಆಯೋಗ ಹೇಳಿ ನಾಲ್ಕು ತಿಂಗಳಾದರೂ  ಈ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿಗೆ ಇದುವರೆಗೂ  ಅಧಿಕೃತ ಮಾಹಿತಿ ನೀಡಿಲ್ಲ.

‘ಲೋಕಸಭಾ ಚುನಾವಣಾ ಸಂದರ್ಭದಲ್ಲಿ 700 ‘ಕಾಸಿಗಾಗಿ ಸುದ್ದಿ ’ ಪ್ರಕರಣ ಪತ್ತೆಯಾಗಿರುವುದು ಮಾಧ್ಯಮಗಳ ವರದಿಯಿಂದ ತಿಳಿದಿತ್ತು.  ಆಯೋಗದ ಅಧಿಕೃತ ವರದಿ ಕೈ ಸೇರದ ಹೊರತು ತಪ್ಪಿತಸ್ಥ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವುದು ಅಥವಾ ಕಾರಣ ಕೇಳಿ  ನೋಟಿಸ್‌ ನೀಡುವುದು ಸಾಧ್ಯವಿಲ್ಲ’ ಎಂದು ಪತ್ರಿಕಾ ಮಂಡಳಿಯ ಅಧಿಕಾರಿ ಹೇಳಿದ್ದಾರೆ.

ಚುನಾವಣೆ ಮುಗಿದು ನಾಲ್ಕು ತಿಂಗಳಾದರೂ ವರದಿ ಕೈಸೇರದ ಕಾರಣ ಪತ್ರಿಕಾ ಮಂಡಳಿ ಕಳೆದ ವಾರ ಆಯೋಗಕ್ಕೆ ಜ್ಞಾಪನಾ ಪತ್ರ ಬರೆದಿದೆ. ಈ ಜ್ಞಾಪನಾ ಪತ್ರಕ್ಕೂ ಚುನಾವಣಾ ಆಯೋಗ ಇದುವರೆಗೂ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT