ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್‌ಗೆ ಕೋರ್ಟ್‌ ಸಮನ್ಸ್‌

Last Updated 29 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌):  ಬಾಕಿ ಉಳಿದಿರುವ 21 ತಿಂಗಳ ₨52 ಲಕ್ಷ ವೇತನವನ್ನು ಕೊಡಿಸಬೇಕು ಎಂದು ಕೋರಿ ಕಾರ್ಯಾಚರಣೆ ಸ್ಥಗಿತಗೊಳಿಸಿ­ರುವ ಕಿಂಗ್‌­ಫಿಷರ್‌ ಏರ್‌ಲೈನ್ಸ್‌ನ ಮಹಿಳಾ ಪೈಲಟ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಾಲಯ­ವೊಂದು  ಏರ್‌ಲೈನ್ಸ್‌ಗೆ ಸಮನ್ಸ್‌ ಜಾರಿ ಮಾಡಿದೆ.

ಜೈಲು ಮುಖ್ಯಸ್ಥರ ಹಾಜರಿಗೆ ಸೂಚನೆ
ನವದೆಹಲಿ (ಪಿಟಿಐ):
ಭಾರತದ ವಿವಿದೆಡೆ ದಾಳಿ­ಗಳನ್ನು ನಡೆಸಿ ಈಗ ನ್ಯಾಯಾಂಗ ಬಂಧನದಲ್ಲಿರುವ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಉಗ್ರರಿಗೆ ತಿಹಾರ್‌ ಜೈಲಿನಲ್ಲಿ ಮೂಲಭೂತ ಸೌಲಭ್ಯ ನೀಡುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ನ್ಯಾಯಾಲಯ,  ಜೈಲಿನ ವರಿಷ್ಠಾಧಿಕಾರಿ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿದೆ.

ಆ್ಯಮ್‌ವೇ ಇಂಡಿಯಾ ಸಿಇಒ ಬಂಧನ
ಹೈದರಾಬಾದ್‌ (ಪಿಟಿಐ):
ವಂಚನೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ  ಬಂಧನಕ್ಕೆ ಒಳಗಾಗಿದ್ದ ಆ್ಯಮ್‌ವೇ ಇಂಡಿಯಾ ಸಿಇಒ ವಿಲಿಯಂ ಸ್ಕಾಟ್‌ ಪಿಂಕ್ನಿ ಅವರನ್ನು ಇದೀಗ ಖಮ್ಮಂ ಪೊಲೀಸರು ಬಂಧಿಸಿದ್ದಾರೆ.

ಆ್ಯಮ್‌ವೇ ಇಂಡಿಯಾ ವಿರುದ್ಧ ಆಂಧ ಪ್ರದೇಶದ ವಿವಿಧ ಕಡೆಗಳಲ್ಲಿ ಒಂಬತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕರ್ನೂಲ್‌ ಪೊಲೀಸರಿಂದ ಸೋಮವಾರ ಬಂಧನಕ್ಕೆ ಒಳಗಾಗಿದ್ದ ವಿಲಿಯಂ ಅವರನ್ನು ಕಡಪ ಜೈಲಿನಲ್ಲಿ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT