ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚು ಹಚ್ಚಿದ ತೊಗಾಡಿಯಾ

‘ಹಿಂದೂ ವಸತಿ ಪ್ರದೇಶದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ’
Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ರಾಜ್‌ಕೋಟ್‌: ಬಿಹಾರ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಬಳಿಕ ಇದೀಗ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ  ದ್ವೇಷ ಭಾಷಣ ಮಾಡಿ­ ದೊಡ್ಡ ವಿವಾದ ಹುಟ್ಟು ಹಾಕಿದ್ದಾರೆ.

‘ಹಿಂದೂಗಳು ವಾಸಿಸುವ ಪ್ರದೇಶ­ದಲ್ಲಿ  ಮುಸ್ಲಿ­ಮರು ಆಸ್ತಿ ಖರೀದಿಸ­ದಂತೆ  ನೋಡಿಕೊಳ್ಳಬೇಕು’ ಎಂದು ಗುಜರಾತ್‌ನ ಭಾವನಗರದಲ್ಲಿ ಶನಿ­ವಾರ ರಾತ್ರಿ ತೊಗಾಡಿಯಾ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್‌ ಮತ್ತಿತರ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಈ ನಡುವೆ ಚುನಾವಣಾ ಆಯೋ­ಗವು  ತೊಗಾಡಿಯಾ ಭಾಷ­ಣದ ಸಿ.ಡಿ ಪಡೆದು­ಕೊಳ್ಳು­ವುದಕ್ಕೆ ಮುಂದಾಗಿದೆ.

‘ಭಾಷಣದ ಧ್ವನಿ ಮುದ್ರಿಕೆಯನ್ನು ಆಲಿಸಿ ತೊಗಾಡಿಯಾ ವಿರುದ್ಧ  ಕೈಗೊಳ್ಳ­­­­ಬಹು­ದಾದ ಕ್ರಮವನ್ನು ನಿರ್ಧರಿ­­­ಸ­ಲಾಗುತ್ತದೆ’ ಎಂದು ಭಾವ­ನಗರ ಜಿಲ್ಲಾಧಿಕಾರಿ ಪಿ.ಕೆ.ಸೋಲಂಕಿ, ರಾಜಕೋಟ್‌ನಲ್ಲಿ ಹೇಳಿದ್ದಾರೆ. ‘ನಮ್ಮ ಸಮಾಜದಲ್ಲಿ ಇಂಥ ವ್ಯಕ್ತಿ­ಗಳಿಗೆ ಜಾಗವಿಲ್ಲ’ ಎಂದು ಎನ್‌ಡಿಎ ಅಂಗ ಪಕ್ಷ ಶಿರೋಮಣಿ ಅಕಾಲಿ ದಳ ಟೀಕಿಸಿದರೆ,   ಬಿಜೆಪಿ ತೊಗಾಡಿಯಾ ಬೆಂಬಲಕ್ಕೆ ನಿಂತಿದೆ.

‘ನಾನು ತೊಗಾಡಿಯಾ ಬಳಿ ಮಾತನಾ­ಡಿದೆ. ಅವರು ಇಂಥ ಹೇಳಿಕೆ ನೀಡಿಲ್ಲ­ವಂತೆ’ ಎಂದು ಬಿಜೆಪಿ ವಕ್ತಾರ ಪ್ರಕಾಶ್‌್ ಜಾವಡೇಕರ್‌್ ನವದೆಹಲಿ ಯಲ್ಲಿ ಸುದ್ದಿ­­ಗಾರರಿಗೆ ತಿಳಿಸಿದರು. ‘ತೊಗಾಡಿಯಾ ಈ ರೀತಿ ಹೇಳಿಲ್ಲ. ಇದರಲ್ಲಿ ಏನೋ ಸಂಚಿದೆ’ ಎಂದು ಆರ್‌ಎಸ್‌ಎಸ್‌ ವಕ್ತಾರ ರಾಮ್‌ ಮಾಧವ್‌ ಹೇಳಿದ್ದಾರೆ.

ತೊಗಾಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌, ಚುನಾ­ವಣಾ ಆಯೋಗವನ್ನು ಒತ್ತಾಯಿಸಿದೆ. ಬಂಧನಕ್ಕೆ ಆಗ್ರಹ: ಶಾಂತಿ ಕದಡಿದ್ದ­ಕ್ಕಾಗಿ ತೊಗಾಡಿಯಾ ಅವರನ್ನು ಬಂಧಿ­ಸ­ಬೇಕೆಂದು ಎಎಪಿ ಪಟ್ಟು ಹಿಡಿದಿದೆ. ಈ ವರದಿಯನ್ನು ಅಲ್ಲಗಳೆದಿ­ರುವ ತೊಗಾಡಿಯಾ, ಈ ಬಗ್ಗೆ ಕಾನೂನು ಕ್ರಮ ತೆಗೆದು­ಕೊಳ್ಳು­ವುದಾಗಿ ಎಚ್ಚರಿಕೆ ನೀಡಿದ್ದಾರೆ.

ಏನಿದು ಘಟನೆ: ಭಾವನಗರ  ಮೇಘನಿ ವೃತ್ತದ ಬಳಿ ಮುಸ್ಲಿಂ ಉದ್ಯಮಿ­ಯೊಬ್ಬರು ಖರೀದಿಸಿರುವ ಮನೆ ಮುಂದೆ ಶನಿವಾರ ರಾತ್ರಿ ವಿಎಚ್‌ಪಿ ಹಾಗೂ ಬಜರಂಗದಳದ  ಸದಸ್ಯರು ಧರಣಿ ಕೂತಿದ್ದರು. ಅಲ್ಲಿಗೆ ತೊಗಾಡಿಯಾ ಕೂಡ ಬಂದಿದ್ದರು.

ಹಿಂದೂಗಳು ವಾಸಿಸುವ ಪ್ರದೇಶ­ದಲ್ಲಿ ಮುಸ್ಲಿಮರು ಮನೆ ಖರೀದಿ­ಸದಂತೆ ನೋಡಿ­ಕೊಳ್ಳಲು ವಿಎಚ್‌ಪಿ ಇಲ್ಲಿ ‘ರಾಮ್‌್­­­ ಧುನ್‌’ ಹಾಗೂ ‘ರಾಮ್‌್ ದರ್ಬಾರ್‌’ ಇತ್ಯಾದಿ ಧಾರ್ಮಿಕ ಕಾರ್ಯ­­ಕ್ರಮಗಳನ್ನು ಆಗಾಗ ನಡೆಸು­ತ್ತಿದೆ. ಆದರೆ ಶನಿವಾರ ರಾತ್ರಿ ತೊಗಾ­­ಡಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂ ಉದ್ಯಮಿ ಮನೆ ವಶಕ್ಕೆ ತೆಗೆದುಕೊಂಡು ಅದರ ಮೇಲೆ ‘ಬಜ­ರಂಗ ದಳ’ದ ನಾಮ­ಫಲಕ ಹಾಕು­ವಂತೆ ಪ್ರತಿಭಟನಾ­ಕಾ­ರ­ರಿಗೆ ಕುಮ್ಮಕ್ಕು ನೀಡಿದರು.

ವಿಷ ಕಾರುವವರು
  ‘ತೊಗಾಡಿಯಾ ಯಾವಾಗಲೂ ವಿಷ ಕಾರುತ್ತಾರೆ. ಇಂಥವರ ಬಗ್ಗೆ ಏನು ಹೇಳಬೇಕು’
– ಕಪಿಲ್‌ ಸಿಬಲ್‌, ಕೇಂದ್ರ ಸಚಿವ

ಚಿಕಿತ್ಸೆ ಕೊಡಿಸಬೇಕು
‘ತೊಗಾಡಿಯಾಗೆ ತಲೆ ಸರಿ ಇಲ್ಲ. ಅವರಿಗೆ ಚಿಕಿತ್ಸೆ ಕೊಡಿಸಬೇಕು’
–ರಷೀದ್‌್ಅಲ್ವಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT