ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಮುಖ ‘ಹುಲಿ ಅಭಯಾರಣ್ಯ’: ಆತಂಕ

Last Updated 13 ಆಗಸ್ಟ್ 2014, 19:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸ್ಥಳೀಯರ ವಿರೋಧದ ನಡು­ವೆಯೂ ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾ­ನದ ಅರಣ್ಯ ಪ್ರದೇಶವನ್ನು ’ಹುಲಿ ಯೋಜ­ನೆ’ಗೆ ಒಳಪಡಿಸಿ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿರುವುದು,  ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಹುತೇಕ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ.

ಆದರೆ, ಸೂಕ್ತ ಪರಿಹಾರದ ನಿರೀಕ್ಷೆ­ಯಲ್ಲಿದ್ದು ಸ್ವಯಂಪ್ರೇರಿತವಾಗಿ ಸ್ಥಳಾಂತ­ರಕ್ಕೆ ಸಿದ್ಧವಿದ್ದ ಸಂತ್ರಸ್ತ ಕುಟುಂಬಗಳು ನಿಟ್ಟುಸಿರುಬಿಟ್ಟಿವೆ.

2011ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ­ವನ್ನು ಹುಲಿ ಯೋಜನೆಗೆ ಒಳಪಡಿಸುವ ಪ್ರಸ್ತಾವನೆ ಸಿದ್ಧ­ಪಡಿಸಿ, 2012ರಲ್ಲಿ ಅಧಿಸೂಚನೆ ಹೊರಡಿ­ಸಲಾಗಿತ್ತು. ಹುಲಿ ಯೋಜನೆಗೆ ಸೇರಿಸುವುದ­ರಿಂದ ರಾಷ್ಟ್ರೀಯ ಉದ್ಯಾನದ ಸುತ್ತಲಿನ 6 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್‌ ಜೋನ್ ನಿಗದಿಪಡಿಸಿ ಹಲವು ನಿರ್ಬಂಧ ವಿಧಿಸುವುದರಿಂದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು.

ಆರಂಭದಲ್ಲಿ ಈ ಪ್ರದೇಶವನ್ನು ಹುಲಿ ಯೋಜನೆಗೆ ಒಳಪಡಿಸಲು ರಾಷ್ಟ್ರೀಯ ಉದ್ಯಾನದೊಳಗಿದ್ದ ಸಂತ್ರ­ಸ್ತರೂ ವಿರೋಧಿಸಿದ್ದರು. ಆದರೆ, ಕಳೆದ ಒಂದು ವರ್ಷದ ಈಚೆಗೆ ಕೆಲ ಸಂತ್ರಸ್ತ ಕುಟುಂಬಗಳೇ ಸ್ವಯಂ­ಪ್ರೇರಿ­ತವಾಗಿ ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಈ ಪ್ರದೇಶವನ್ನು ಹುಲಿ ಯೋಜನೆಗೆ ಸೇರ್ಪಡೆ ಮಾಡಿ ನ್ಯಾಯಯುತ ಪರಿಹಾರ ನೀಡುವಂತೆ ಒತ್ತಾಯಿಸಿದ್ದವು.

ಸಂರಕ್ಷಣಾ ಪ್ರಾಧಿಕಾರದ ಒಪ್ಪಿಗೆ
ನವದೆಹಲಿ (ಪಿಟಿಐ): ಕರ್ನಾ­ಟ­ಕದ ಕುದುರೆ­ಮುಖ  ಸೇರಿ­ದಂತೆ ದೇಶದ ಮೂರು ಅಭ­ಯಾ­ರ­ಣ್ಯಗ­ಳನ್ನು ‘ಹುಲಿ ಸಂರ­ಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿ­ಸಲು ರಾಷ್ಟ್ರೀಯ ಹುಲಿ ಸಂರ­ಕ್ಷಣಾ ಪ್ರಾಧಿ­ಕಾ­ರದ ಒಪ್ಪಿಗೆ ದೊರೆತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಧ್ಯಪ್ರದೇಶ ಮತ್ತು ಒಡಿಶಾ­ದಲ್ಲಿ ಎರಡು ಹೊಸ ಹುಲಿ  ಸಂರಕ್ಷಿತ ಅಭಯಾ­ರಣ್ಯ ಸ್ಥಾಪ­ನೆಗೂ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT