ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಮಾ ಯೋಜನೆ: ಬೆಳೆಗಳ ವಿವರ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ 10ರ ಸಹಾಯಧನ ಲಭ್ಯ
Last Updated 9 ಜುಲೈ 2015, 5:52 IST
ಅಕ್ಷರ ಗಾತ್ರ

ಹಾಸನ: ‘2015–-16ನೇ ಸಾಲಿನ ಮುಂಗಾರು ಹಂಗಾಮಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಹಾಸನ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಜಾರಿಗೊಳಿಸುವ ಸಲುವಾಗಿ ತಾಲ್ಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಭಾನುಪ್ರಕಾಶ್ ತಿಳಿಸಿದ್ದಾರೆ.

2015ರ ಮುಂಗಾರು ಹಂಗಾಮಿನಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಅಧಿಸೂಚಿತ ಹೋಬಳಿ ಮತ್ತು ಬೆಳೆಗಳ ಪಟ್ಟಿ ಇಂತಿದೆ.

ದುದ್ದ: ಭತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).

ಹಾಸನ: ಭತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).

ಕಟ್ಟಾಯ: ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ).

ಸಾಲಗಾಮೆ: ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).

ಶಾಂತಿಗ್ರಾಮ: ಭತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).

ಮಳೆಯಾಶ್ರಿತ ಮುಸುಕಿನ ಜೋಳ ಬೆಳೆಯನ್ನು ಹಾಸನ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ (ಕಸಬಾ ಹೋಬಳಿಯ ಸತ್ಯಮಂಗಲ ಗ್ರಾಮ ಪಂಚಾಯಿತಿ ಹೊರತುಪಡಿಸಿ) ಮತ್ತು ನೀರಾವರಿ ಮುಸುಕಿನ ಜೋಳದ ಬೆಳೆಯನ್ನು ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಮತ್ತು ಗೊರೂರು ಗ್ರಾಮ ಪಂಚಾಯಿತಿಗಳು ಹಾಗೂ ಶಾಂತಿಗ್ರಾಮ ಹೋಬಳಿಯ ಮಡೇನೂರು ಮತ್ತು ಸಾಲಗಾಮೆ ಹೋಬಳಿಯ ಯಲಗುಂದ ಪಂಚಾಯಿತಿ ಹೊರತುಪಡಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ತರಲಾಗಿದೆ.

ಬೆಳೆ ವಿಮಾ ಯೋಜನೆಯಡಿ ಒಳಪಡುವ ಎಸ್‌ಸಿ ಮತ್ತು ಎಸ್‌ಟಿಯ ಎಲ್ಲಾ ರೈತರಿಗೆ ವಿಮಾಕಂತಿನಲ್ಲಿ ಶೇ 90ರಷ್ಟನ್ನು ಕೃಷಿ ಇಲಾಖೆ ಭರಿಸುತ್ತದೆ ಹಾಗೂ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ 10ರ ಸಹಾಯಧನವನ್ನು ನೀಡಲಾಗುವುದು.

ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ಯಾವುದೇ ಯೋಜನೆಯ ಫಲಾನುಭವಿಗಳು (ಬೆಳೆ ಸಾಲ ಪಡೆಯದ ರೈತರು) ಅಂದಾಜು ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೆ ಪಾಲ್ಗೊಳ್ಳಬಹುದು. ಸದರಿ ಹೋಬಳಿ/ ತಾಲ್ಲೂಕು ವ್ಯಾಪ್ತಿಯ ಇಲಾಖೆ ಅಧಿಕಾರಿಯಿಂದ ಬೆಳೆ ವಿಮಾ ಯೋಜನೆಯ ಅರ್ಜಿಯನ್ನು ದೃಢೀಕರಿಸಿ, ಜಮೀನು ಹೊಂದಿರುವ ದಾಖಲೆಗಾಗಿ ಪಹಣಿಯನ್ನು ನೀಡಿ ಬ್ಯಾಂಕಿನಲ್ಲಿ ವಿಮಾ ಕಂತು ಕಟ್ಟಿ ಅರ್ಜಿ ಸಲ್ಲಿಬಹುದು.

ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಬಿತ್ತನೆಯಾದ 30 ದಿನದೊಳಗೆ ಅಥವಾ ನೊಂದಾಯಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನೋಂದಾಯಿಸಿದ ಆರ್ಥಿಕ ಸಂಸ್ಧೆಗಳಲ್ಲಿ ಬಿತ್ತನೆ ದೃಢೀಕರಣ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಬೇಕು ಹಾಗೂ ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT