ಕೋಲಾರ:- ಖ್ಯಾತ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಸಾಹಿತ್ಯ ಸಪ್ತಾಹವನ್ನು ನಗರ ಹೊರವಲಯದ ತೇರಳ್ಳಿಯಲ್ಲಿರುವ ಅದಿಮ ಜೀವಕಲಾ ಗುರುಕುಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲದ ಪ್ರಮುಖರಾದ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸಂಸ್ಕೃತಿಯ ಸಂಕಥನದಲ್ಲಿ ರೂಪಿಸಿಕೊಳ್ಳಬೇಕಾದ ಪಠ್ಯಗಳ ಕುರಿತು ಮತ್ತು ಆಜೀವಕ ಗುರುಕುಲದ ಮೊದಲ ತಂಡದ ವಿದ್ಯರ್ಥಿಗಳಿಗೆ ನೂತನ ಪಠ್ಯ ಕ್ರಮ ಕಂಡುಕೊಳ್ಳಲು ಈ ಸಪ್ತಾಹವನ್ನು ಆಯೋಜಿಸಲಾಗಿದೆ. ಒಂದು ವಾರ ಕಾಲ ಪ್ರತಿ ನಿತ್ಯ ನಾಟಕ, ಸಿನಿಮಾ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮವನ್ನು ಅ.12 ರಂದು ಮಧ್ಯಾಹ್ನ 12 ಗಂಟೆಗೆ ಚಿತ್ರ ನಿರ್ದೇಶ ಗಿರೀಶ್ ಕಾಸರವಳ್ಳಿ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಡಿಕೆ.ರವಿ, ಚಿತ್ರನಟಿ ಗಿರಿಜಾ ಲೋಕೇಶ್, ಸಿನಿಮಾ ಚರಿತ್ರೆಕಾರ ಡಾ.ಕೆ.ಪುಟ್ಟಸ್ವಾಮಿ, ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ದಾಸ್, ಲೇಖಕ ದೇವನೂರು ಮಹದೇವ, ಬಂಜೆಗೆರೆ ಜಯಪ್ರಕಾಶ್, ಜಗನ್ನಾಥ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಲುವೇಲಮ್ಮ ಉಪಸ್ಥಿತರಿರುತ್ತಾರೆ. ಕೃಷ್ಣ ಆಲನಹಳ್ಳಿ ಅವರ ಒಡನಾಟದ ಕುರಿತು ಶಾಸಕ ಕೆ.ಆರ್.ರಮೇಶ್ ಕುಮಾರ್ ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.

ಮುಖ್ಯವಾಗಿ ಕೇರಳದಿಂದ ಹಲವು ಸಾಹಿತಿಗಳು ಆಗಮಿಸುತ್ತಿದ್ದು, ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸಹ ಬರಲು ಒಪ್ಪಿಗೆ ನೀಡಿದ್ದಾರೆ ಎಂದರು.

ಮೊದಲ ದಿನ ಕಾಡು ಕಾದಂಬರಿ ಕುರಿತು ಚರ್ಚೆ, ಕಾಡು ಸಿನಿಮಾ ವೀಕ್ಷಣೆ, ಅ.13ರಂದು ಭುಜಂಗಯ್ಯನ ದಶಾವತಾರ ಸಿನಿಮಾ ವೀಕ್ಷಣೆ ಮತ್ತು ಕಾಂದಬರಿ ಕುರಿತು ಸಂವಾದ, ಕರ್ವಾಲೋ ನಾಟಕ ಪ್ರದರ್ಶನ ನಡೆಯಲಿದೆ.

14ರಂದು ಶ್ರೀಕೃಷ್ಣ ಆಲನಹಳ್ಳಿ ಕಾವ್ಯ ಸಂವಾದ, ಫೀನಿಕ್ಸ್ ಸಿನಿಮಾ ಪ್ರದರ್ಶನ, ಅಜೀವಕ ತಂಡದಿಂದ ಕಿನ್ನೂರಿ ನುಡಿದೋ... ನಾಟಕವಿದೆ. 15ರಂದು ಶ್ರೀಕೃಷ್ಣ ಆಲನಹಳ್ಳಿ ನೀಳ್ಗವಿತೆಗಳ ಕುರಿತು ಸಂವಾದ, ಕುರುಬರ ಲಕ್ಕ ಸಿನಿಮಾ, ಎನ್.ಎಸ್.ಡಿ ಬೆಂಗಳೂರು ಅವರಿಂದ `ಈ ಕೆಳಗಿನವರು' ನಾಟಕವಿದೆ. 16 ರಂದು ಪರಸಂಗದ ಗೆಂಡೆತಿಮ್ಮ ಕಾದಂಬರಿಯ ಓದು, ಸಿನಿಮಾ ವೀಕ್ಷಣೆ, ಅ.17ರಂದು `ಗೀಜಗನಗೂಡು' ಸಿನಿಮಾ ಪ್ರದರ್ಶನ ಮತ್ತು ಸಂವಾದ, ಶ್ರೀಕೃಷ್ಣ ಆಲನಹಳ್ಳಿ ಆರಂಭದ ಕಥೆಗಳ ಕುರಿತು ಚರ್ಚೆ, ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳಿಂದ `ನೀರ ದೀಪಗಳ ದಿಬ್ಬಣ' ನಾಟಕ ಪ್ರದರ್ಶನಗೊಳ್ಳಲಿದೆ. 18 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ದಾಸಪ್ಪನವರಿಗೆ ಗದ್ದುಗೆ ಗೌರವ, ಆಜೀವಕ ತಂಡದಿಂದ ಸುಟ್ಟತಿಕದ ದೇವರು ರಂಗರೂಪ ನಡೆಯಲಿದೆ.

ಏಳು ದಿನವೂ ಪ್ರತಿ ಸಂಜೆ 6.-30ಕ್ಕೆ ನಾಟಕ ಪ್ರದರ್ಶನ, 8-.30 ರಿಂದ ಸಿನಿಮಾ ವೀಕ್ಷಣೆ, ಬೆಳಗ್ಗೆ 9 ಗಂಟೆಗೆ ಸಿನಿಮಾ ಕುರಿತ ಸಂವಾದ, 11 ಗಂಟೆಯಿಂದ ನೂತನ ಗೋಷ್ಠಿ ನಡೆಯಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್, ಜೆಪಿ ವಿಚಾರವೇದಿಕೆಯ ದಯಾನಂದ್, ರಂಗ ಸಂಶೋಧನಾ ಪ್ರತಿಷ್ಠಾನ, ಜನಸಂಸ್ಕೃತಿಯ ಸುರೇಶ್, ಪ್ರದೀಪ್ ಮಾಲ್ಗುಡಿ ಸಪ್ತಾಹಕ್ಕೆ ಕೈಜೋಡಿಸಿದ್ದಾರೆ ಎಂದರು. ಚಿಂತಕ ಪದ್ಮಾಲಯ ನಾಗರಾಜ್ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ತಲೆಮಾರು ಕುಟೀರದ ಪದ್ಮಾಲಯ ನಾಗರಾಜು, ಮುಳಬಾಗಿಲು ಕಸಾಪ ಅಧ್ಯಕ್ಷ ಡಾ.ಶಿವಪ್ಪ, ಚೌಕಿ ಸಂಸ್ಕೃತಿಯ ದೊಡ್ಡಯಲ್ಲಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.