ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಎಸ್. ಗೆ ನಾಲ್ಕು ಅಡಿ ನೀರು

ಕಬಿನಿಗೂ ಒಳಹರಿವು ಹೆಚ್ಚಳ
Last Updated 1 ಜುಲೈ 2016, 23:30 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು ಕಾವೇರಿ ಕಣಿವೆಯ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕೆಆರ್ಎಸ್‌ ಜಲಾಶಯಕ್ಕೆ ನಾಲ್ಕು ಅಡಿ ನೀರು ಬಂದಿದ್ದು, ಶುಕ್ರವಾರ ಸಂಜೆ ವೇಳೆಗೆ ನೀರಿನ ಮಟ್ಟದ 80.30 ಅಡಿಗೆ ತಲುಪಿತ್ತು. ಒಳಹರಿವು 22,242 ಮತ್ತು ಹೊರಹರಿವು 2,981 ಕ್ಯುಸೆಕ್‌ ಇತ್ತು. ಕಬಿನಿಗೂ ನಾಲ್ಕು ಅಡಿ ನೀರು ಬಂದಿದ್ದು,  ನೀರಿನ ಮಟ್ಟ 2,260 ಅಡಿಗೆ ತಲುಪಿದೆ.

ಒಳಹರಿವು 15,500 ಮತ್ತು ಹೊರಹರಿವು 2 ಸಾವಿರ ಕ್ಯುಸೆಕ್‌ ಇತ್ತು. ಹಾರಂಗಿ ಜಲಾಶಯದಲ್ಲಿ  2,836.64 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು 459 ಕ್ಯುಸೆಕ್‌ ಇತ್ತು.

ಹೇಮಾವತಿ ಜಲಾಶಯದ ನೀರಿನ ಮಟ್ಟ 2873.39 ಅಡಿ ತಲುಪಿದ್ದು, ಒಳ ಹರಿವು 9,702 ಮತ್ತು ಹೊರ ಹರಿವು 125 ಕ್ಯುಸೆಕ್‌ ಇತ್ತು. ಕೊಡಗಿನ ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಹುದಿಕೇರಿ, ಶ್ರೀಮಂಗಲ, ಬಾಳೆಲೆ ಭಾಗಗಳಲ್ಲಿ ಮಳೆ ಸುರಿಯಿತು. ಲಕ್ಷ್ಮಣತೀರ್ಥ ನದಿ ಮೈದುಂಬಿ ಹರಿಯುತ್ತಿದೆ. ತಲಕಾವೇರಿಯ ಸುತ್ತ ಸಾಧಾರಣ ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಇಳಿದಿದೆ.

ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆ ತುಂತರು ಮಳೆಯಾಗಿದೆ. ಹಾಸನ ತಾಲ್ಲೂಕಿನಲ್ಲಿ 66.5 ಮಿ.ಮೀ, ಸಕಲೇಶಪುರದಲ್ಲಿ 82 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT