ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಇಲೆವೆನ್‌ ಸವಾಲಿನ ಮೊತ್ತ

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ತಂಡದ ಪ್ರಮುಖ ಆಟಗಾರ ಎಸ್. ಅರವಿಂದ್‌ ಒಡಿಶಾ ಎದುರಿನ ಪಂದ್ಯದಲ್ಲಿ ಮಿಂಚಿದರು. ಆದರೆ, ಎಡಗೈ ವೇಗಿ ಗಮನ ಸೆಳೆದದ್ದು ಬೌಲಿಂಗ್‌ನಿಂದ ಅಲ್ಲ. ಬದಲಾಗಿ ಬ್ಯಾಟಿಂಗ್‌ನಿಂದ. ಇವರ ಅರ್ಧಶತಕದ ಬಲದಿಂದ ಕೆಎಸ್‌ಸಿಎ ಇಲೆವೆನ್‌ ತಂಡ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.

ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ 119 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 335 ರನ್‌ ಗಳಿಸಿದ್ದ ಇಲೆವೆನ್‌ ಒಟ್ಟು 478 ರನ್ ಕಲೆ ಹಾಕಿತು. ಅರವಿಂದ್‌ ಔಟಾಗದೆ 79 ರನ್‌ ಗಳಿಸಿದರು. ಎರಡನೇ ಇನಿಂಗ್ಸ್ ಆರಂ ಭಿಸಿರುವ ಒಡಿಶಾ  57 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 135 ರನ್‌ ಗಳಿಸಿದೆ.

ಪಾಟೀಲ್‌ ತಂಡಕ್ಕೆ ಜಯ: ಆಂಧ್ರ ತಂಡವನ್ನು ಎರಡೂ ಇನಿಂಗ್ಸ್‌ಗಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಡಿ.ವೈ. ಪಾಟೀಲ್‌ ಅಕಾಡೆಮಿ ಮೂರೇ ದಿನದಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಪಾಟೀಲ್‌ ಅಕಾಡೆಮಿ ಮೊದಲ ಇನಿಂಗ್ಸ್‌ನಲ್ಲಿ 370 ರನ್ ಗಳಿಸಿತ್ತು. ಅಂಧ್ರ 133 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 47.4 ಓವರ್‌ಗಳಲ್ಲಿ ಕೇವಲ 123 ರನ್‌ಗೆ ಆಲೌಟ್‌ ಆಯಿತು. ಇನಿಂಗ್ಸ್‌ ಹಾಗೂ 114 ರನ್‌ಗಳ ಜಯ ಪಡೆದ ಪಾಟೀಲ್‌ ಅಕಾಡೆಮಿ ಏಳು ಪಾಯಿಂಟ್ಸ್‌ ಪಡೆದುಕೊಂಡಿತು.

ಸಂಕ್ಷಿಪ್ತ ಸ್ಕೋರು: ಆರ್‌ಎಸ್‌ಐ ಕ್ರೀಡಾಂಗಣ: ಒಡಿಶಾ ಮೊದಲ ಇನಿಂಗ್ಸ್‌ 195 ಹಾಗೂ 57 ಓವರ್‌ಗಳಲ್ಲಿ 4 ವಿಕೆಟ್‌ಗೆ 135 (ಗಿರಿಜಾ ರಾವತ್‌ 40, ಪ್ರತೀಕ್‌ ದಾಸ್‌; 21; ರೋನಿತ್‌ ಮೋರೆ 2ಕ್ಕೆ18). ಕೆಎಸ್‌ಸಿಎ ಇಲೆವೆನ್‌ ಪ್ರಥಮ ಇನಿಂಗ್ಸ್‌ 149.4 ಓವರ್‌ಗಳಲ್ಲಿ 478 (ಪವನ್‌ ದೇಶಪಾಂಡೆ 26, ಜೆ. ಸುಚಿತ್ 25, ಎಸ್‌. ಅರವಿಂದ್‌ ಔಟಾಗದೆ 79; ಅಲೋಕ್ ಚಂದ್ರ ಸಾಹು 2ಕ್ಕೆ78).

ಕೆಎಸ್‌ಸಿಎ ಕ್ರೀಡಾಂಗಣ: ಡಿ.ವೈ. ಪಾಟೀಲ್‌ ಅಕಾಡೆಮಿ ಪ್ರಥಮ ಇನಿಂಗ್ಸ್‌ 370. ಆಂಧ್ರ 133 ಹಾಗೂ ಎರಡನೇ ಇನಿಂಗ್ಸ್‌ 47.4 ಓವರ್‌ಗಳಲ್ಲಿ 123 (ಜಿ. ಶಂಕರ್ ರಾವ್ 27, ಮಹಮ್ಮದ್ ಕೈಫ್‌ 20; ಇಕ್ಬಾಲ್‌ ಅಬ್ದುಲ್ಲಾ 5ಕ್ಕೆ47, ಸ್ವಪ್ನಿಲ್‌ ಸಿಂಗ್‌ 3ಕ್ಕೆ50). ಫಲಿತಾಂಶ: ಪಾಟೀಲ್‌ ಅಕಾಡೆಮಿಗೆ ಇನಿಂಗ್ಸ್‌ ಹಾಗೂ 114 ರನ್ ಗೆಲುವು.

ಆಲೂರು ಕ್ರೀಡಾಂಗಣ–3:  ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್‌ 413.  ಅಸ್ಸಾಂ 139 ಮತ್ತು ಎರಡನೇ ಇನಿಂಗ್ಸ್‌ 66 ಓವರ್‌ಗಳಲ್ಲಿ 4 ವಿಕೆಟ್‌ಗೆ 184  (ತರ್ಗಿಂದರ್‌ ಸಿಂಗ್‌ 55, ಕೆ.ಬಿ. ಅರುಣ್‌ ಕಾರ್ತಿಕ್‌ ಬ್ಯಾಟಿಂಗ್‌ 50).

ಆಲೂರು ಕ್ರೀಡಾಂಗಣ–1: ಬಂಗಾಳ  288 ಹಾಗೂ ಎರಡನೇ ಇನಿಂಗ್ಸ್ 15 ಓವರ್‌ಗಳಲ್ಲಿ 1 ವಿಕೆಟ್‌ಗೆ 23. ತ್ರಿಪುರ ಮೊದಲ ಇನಿಂಗ್ಸ್‌ 152.1 ಓವರ್‌ಗಳಲ್ಲಿ 281 (ಅಭಿಜಿತ್‌ 51, ಎ. ಕುಶಾಲ್‌ 74, ತುಷಾರ್ ಸಹಾ 63; ವೃತಿಕ್‌ ಚಟರ್ಜಿ 4ಕ್ಕೆ61).

ಆಲೂರು ಕ್ರೀಡಾಂಗಣ–2: ಕೆಎಸ್‌ಸಿಎ ಕೋಲ್ಟ್ಸ್‌  340 ಹಾಗೂ ಎರಡನೇ ಇನಿಂಗ್ಸ್ 60.4 ಓವರ್‌ಗಳಲ್ಲಿ 196 (ಕೆ.ಸಿ. ಅವಿನಾಶ್‌ 72, ಎಸ್‌.ಎಲ್‌. ಅಕ್ಷಯ್‌ 27; ಅಮಿರ್‌ ಗಣಿ 7ಕ್ಕೆ60). ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ 163 ಹಾಗೂ ಎರಡನೇ ಇನಿಂಗ್ಸ್‌ 58 ಓವರ್‌ಗಳಲ್ಲಿ 5 ವಿಕೆಟ್‌ಗೆ 223 (ಅಂಕುಶ್‌ ಬೈನ್ಸ್ 57, ವಾಷಿಂಗ್ಟನ್‌ ಸುಂದರ್ ಬ್ಯಾಟಿಂಗ್ 105)

ಐಎಎಫ್‌ ಕ್ರೀಡಾಂಗಣ:  ಹರಿಯಾಣ 377 ಹಾಗೂ ದ್ವಿತೀಯ ಇನಿಂಗ್ಸ್‌ 207. ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ 240 ಹಾಗೂ ಎರಡನೇ ಇನಿಂಗ್ಸ್‌ 27 ಓವರ್‌ಗಳಲ್ಲಿ 3ಕ್ಕೆ58.

ಗಂಗೋತ್ರಿ ಗ್ಲೇಡ್ಸ್‌ (ಮೈಸೂರು): ತಮಿಳುನಾಡು ಮೊದಲ ಇನಿಂಗ್ಸ್‌ 121.3 ಓವರ್‌ಗಳಲ್ಲಿ 357. ವಿದರ್ಭ ಪ್ರಥಮ ಇನಿಂಗ್ಸ್‌ 56 ಓವರ್‌ಗಳಲ್ಲಿ 5 ವಿಕೆಟ್‌ಗೆ 184. ಜೆಸಿಇ: ಗುಜರಾತ್‌ ಪ್ರಥಮ ಇನಿಂಗ್ಸ್ 143.3 ಓವರ್‌ಗಳಲ್ಲಿ 497. ಕೇರಳ ಮೊದಲ ಇನಿಂಗ್ಸ್‌ 25 ಓವರ್‌ಗಳಲ್ಲಿ 3ಕ್ಕೆ99.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT