ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಇತ್ತ ಗಮನ ಹರಿಸಲಿ

ಅಕ್ಷರ ಗಾತ್ರ

ಕೆಪಿಎಸ್‌ಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರು ಇತರೆ ಹುದ್ದೆಗಳನ್ನು ನೇಮಕಾತಿ ಮಾಡಲು ಆದೇಶ ಹೊರಡಿಸಿ ಅರ್ಜಿ ಕರೆದಿರುವುದು ಸರಿಯಷ್ಟೆ. ಶಿಕ್ಷಕರ ಹುದ್ದೆಗಳಿಗೆ ವಯೋಮಿತಿ, ಸಾಮಾನ್ಯ ಅಭ್ಯರ್ಥಿ­ಗಳಿಗೆ 38ವರ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1ಕ್ಕೆ 40 ವರ್ಷಗಳಿಗೆ ನಿಗದಿ ಮಾಡಿದೆ. ಆದರೆ ಸಾಮಾನ್ಯವಾಗಿ ಸಿ.ಇ.ಟಿ. ಸೆಲ್‌ನವರು ನಡೆಸುವ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ, ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ 1ಕ್ಕೆ 45 ವರ್ಷ ನಿಗದಿ ಮಾಡುತ್ತಾರೆ.

ಹೀಗಿರು­ವಾಗ ಕೆಪಿಎಸ್‌ಸಿಯು ಶಿಕ್ಷಕರ ಹುದ್ದೆಗೆ, ಸಾಮಾನ್ಯ ಅಭ್ಯ­ರ್ಥಿಗಳಿಗೆ, ಎಸ್‌ಸಿ., ಎಸ್‌ಟಿ, ಪ್ರವರ್ಗ 1ಕ್ಕೆ ಕ್ರಮವಾಗಿ, 38 ವರ್ಷ, 40 ವರ್ಷ ನಿಗದಿ ಮಾಡಿ, ಈಗ ವಯೋ­ಮಿತಿ 40 ವರ್ಷ ಮೀರಿರುವ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿ­ದ್ದಾರೆ, ಶಿಕ್ಷಕರ ಹುದ್ದೆಗಳಿಗೆ ಎಲ್ಲಾ ಪರೀಕ್ಷಾ ಮಂಡ­ಳಿ­­ಗಳೂ ಒಂದೇ ಸಮನಾದ ವಯೋಮಿತಿ ನಿಗದಿ ಮಾಡ­ಬೇಕು. ಈಗಾಗಲೇ ಅನುದಾನರಹಿತ ಶಾಲೆಗಳಲ್ಲಿ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಯುತ್ತಿರು­ವವರು ಕೆಪಿಎಸ್‌ಸಿಯವರ ಈ ಆದೇಶದಿಂದ ಡಿಸೆಂಬರ್‌­ನಲ್ಲಿ ನಡೆಯುವ ಪರೀಕ್ಷೆಯಿಂದ ವಂಚಿತರಾಗ­ಬೇಕಾಗು­ತ್ತದೆ. ಆದ್ದರಿಂದ ಕೆಪಿಎಸ್‌ಸಿ  ಕೂಡಲೇ ಇತ್ತ ಗಮನ­ಹರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT