ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಅಂತರ್ಜಾಲ ತಾಣ ಕೆಲ ತಾಸು ಸ್ಥಗಿತ

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ಕಾರ್ಯಾಲಯ ಸೇರಿದಂತೆ ಹಲವು ಸಚಿವಾಲ­ಯಗಳ ಅಂತರ್ಜಾಲ ತಾಣಗಳು ಬುಧವಾರ ಸಂಜೆ ಕೆಲ ಹೊತ್ತು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.

ಇದು ತಾಂತ್ರಿಕ ತೊಂದರೆಯೇ ಹೊರತು ಸೈಬರ್‌ ದಾಳಿ ಅಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಪ್ರಧಾನಿ ಕಚೇರಿಯ ವೆಬ್‌ಸೈಟ್‌ನ ಜೊತೆಗೆ, ಲೋಕಸಭೆ, ರಾಜ್ಯಸಭೆ, ರಕ್ಷಣೆ ಮತ್ತು ಹಣಕಾಸಿನಂತಹ ಪ್ರಮುಖ ಸಚಿವಾ­ಲಯಗಳ ವೆಬ್‌ಸೈಟ್‌ಗಳು ಬುಧವಾರ ಸಂಜೆ ಕೆಲವು ತಾಸು ಲಭ್ಯವಿರಲಿಲ್ಲ.

ವಾರ್ತಾ ಮಾಹಿತಿ ಮಂಡಲಿ (ಪಿಐಬಿ) ವೆಬ್‌ಸೈಟ್‌ ಕೂಡ ಆ ಸಮಯದಲ್ಲಿ ಸ್ಥಗಿತಗೊಂಡಿತ್ತು. ‘ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿ ಆಗಿಲ್ಲ ಅಥವಾ ಹ್ಯಾಕಿಂಗ್‌ ನಡೆದಿಲ್ಲ. ಕೆಲವು ಉಪಕರ­ಣಗಳ ಕಾರ್ಯಾಚರಣೆ ಸ್ಥಗಿತ­ಗೊಂಡಿ­ದ್ದರಿ­ಂ­ದಾಗಿ ಈ ಸಮಸ್ಯೆ ಉಂಟಾಗಿತ್ತು. ಉಪಕರಣಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯನ್ನು ರಾತ್ರಿ 9 ಗಂಟೆ ಹೊತ್ತಿಗೆ ಸರಿಪ­ಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ’ ಎಂದು ಪಿಐಬಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT