ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥ ಮರು ನಿರ್ಮಾಣಕ್ಕೆ ಯೋಜನೆ

Last Updated 31 ಮೇ 2014, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ಕೇದಾರ­ನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವುದಾಗಿ ಶನಿವಾರ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್‌ ರಾವತ್  ಹೇಳಿದ್ದಾರೆ.ಕೇದಾರನಾಥ ಮತ್ತು ಸುತ್ತ­ ಮುತ್ತ­ಲಿನ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿ­ಷ್ಕರಿಸಿ ಪುನರ್ ನಿರ್ಮಾಣ ಮಾಡ­ಲಾ­ಗುವುದು. ದೇವಾಲಯ ಸೇರಿದಂತೆ ದೇವಾ­ಲಯದ ಸುತ್ತಮುತ್ತಲಿನ ರಕ್ಷಣಾ ಗೋಡೆಯನ್ನೂ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಉತ್ತರಾ­ಖಂಡ ಮತ್ತು ಹಿಮಾಲಯದ ಪ್ರದೇಶ­ಗಳಿಗೆ ಭೇಟಿ ನೀಡಿದ ನಂತರ ಸುದ್ದಿ­ಗಾರ­­ರೊಂದಿಗೆ ಮಾತನಾಡಿದ ಹರೀಶ್, ಎರಡು ಹಂತಗಳಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನೈಸರ್ಗಿಕ ವಿಕೋಪದಿಂದ ದೇವಾಲ­ಯ­ವನ್ನು ರಕ್ಷಿಸಲು ದೇವಾಲಯದ ಸುತ್ತ ರಕ್ಷಣಾ ಗೋಡೆಗಳನ್ನು ನಿರ್ಮಿ­ಸಲಾಗುವುದು. ಮುಂದಿನ 45 ದಿನಗ­ಳಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಮಂದಾಕಿನಿ ಮತ್ತು ಸರಸ್ವತಿ ನದಿಗಳ ಪುನಶ್ಚೇತನ ಮತ್ತು ಲಿನ್‌ಚೌಲಿ ಪಟ್ಟಣ­ವನ್ನು ಪುನರ್ ನಿರ್ಮಾಣ ಮಾಡಲಾಗು­ವುದು. ಲೋಕೋಪ­ಯೋಗಿ ಇಲಾಖೆಗೆ ಈಗಾ­ಗಲೇ ನದಿಗಳ ಪುನಶ್ಚೇತನ ಕಾರ್ಯ ವಹಿಸಲಾಗಿದೆ. ಪ್ರವಾ­ಸೋದ್ಯಮ­ವನ್ನು ಪುನಶ್ಚೇತನ­ಗೊಳಿ­ಸಲು ಚಾರ್‌­ಧಾಮ್ ಸೇರಿದಂತೆ ಇತರ ಪ್ರದೇಶ­ಗಳಲ್ಲಿ ವರ್ಷಪೂರ್ತಿ ಪ್ರವಾಸಿ­ಗ­­ರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT