ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಮುಂಗಾರು ಪ್ರವೇಶ

ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲೂ ಮಳೆ
Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ತಿರುವನಂತಪುರ: ‘ಕೇರಳದ 13 ಮತ್ತು ಕರ್ನಾಟಕದ ಒಂದು ಮಳೆ ಮಾಪನ ಕೇಂದ್ರದಲ್ಲಿ 2 ದಿನ­ಗಳ ಅವಧಿಯಲ್ಲಿ 2.5 ಮಿ.ಮಿ ಮಳೆ ದಾಖ­ಲಾಗಿದೆ. ಇದರ ಆಧಾರ­­ದಲ್ಲಿ ಮುಂಗಾರು ಕಾಲಿಟ್ಟಿರು­ವು­ದನ್ನು ಘೋಷಿ­ಸಿ­­ದ್ದೇವೆ’ ಎಂದು ಭಾರ­ತೀಯ ಹವಾ­ಮಾನ ಇಲಾಖೆಯ (ಐಎಂಡಿ) ಪ್ರಧಾನ ನಿರ್ದೇಶಕ ಎಲ್‌.­ಎಸ್‌. ರಾಥೋಡ್‌ ಶುಕ್ರವಾರ ತಿಳಿಸಿದರು.

ಮುಂಗಾರು ಸಂಪೂರ್ಣವಾಗಿ ಕೇರಳ­ವನ್ನು ಆವರಿಸಿಕೊಳ್ಳಲಿದೆ. ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ‘ಕೆಲ ಸಲ ಮುಂಗಾರು ಪ್ರವೇಶ­ದೊಂ­ದಿಗೆ ಭಾರಿ ಮಳೆ ಆರಂಭವಾ­ಗು­ತ್ತದೆ. ಕೆಲವು ಬಾರಿ ಆರಂಭದಲ್ಲಿ ಸಾಧಾ­ರಣ ಮಳೆ­ಯಾಗಿ ನಂತರ ತೀವ್ರ­ಗೊಳ್ಳು­­ತ್ತದೆ.  ಇದು ಸಾಧಾ­ರಣ ಪ್ರಕ್ರಿಯೆ’ ಎಂದು ತಿರು­ವನಂತಪುರದ ಹವಾ­­ಮಾನ ಇಲಾ­ಖೆಯ ಹಿರಿಯ ಅಧಿಕಾರಿ ತಿಳಿಸಿದರು.

ಸೋಮವಾರ­ದವರೆಗೆ ಕೇರಳದ ಹಲ­ವೆಡೆ ಮಳೆಯಾ­ಗ­ಲಿದೆ. ಒಂದೆ­ರಡು ದಿನ­­ಗಳಲ್ಲಿ ತೀವ್ರ ಸ್ವರೂಪ ಪಡೆ­ದುಕೊಂಡು ರಾಜ್ಯ­ದಾ­­ದ್ಯಂತ ಆವ­ರಿಸಿ­­ಕೊಳ್ಳಲಿದೆ.  ಕಳೆದ ನಾಲ್ಕು ವರ್ಷ­ಗಳಲ್ಲಿ ದೇಶ­ದಾ­ದ್ಯಂತ ಸಾಧಾ­ರಣ ಮತ್ತು ಸಾಧಾ­ರ­ಣ­­ಕ್ಕಿಂತ ಹೆಚ್ಚು ಮಳೆ­ಯಾ­ಗಿದ್ದು, ಈ ಬಾರಿ ಮುಂಗಾರು ಮಳೆ ಸಾಧಾರಣ­ಕ್ಕಿಂತ ಸ್ವಲ್ಪ ಕಡಿಮೆ­ಯಾಗುವ ಸಾಧ್ಯತೆ ಇದೆ. ಶೇ 95ರಷ್ಟು ಮಳೆ­ಯಾಗ­ಬ­ಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಲಕ್ಷಣಗಳು
ಪಶ್ಚಿಮದಿಂದ ಪ್ರತಿ ಗಂಟೆಗೆ 30­ರಿಂದ 40 ಕಿಲೋಮೀಟರ್‌ ವೇಗ­ದಲ್ಲಿ ಗಾಳಿ ಬೀಸು­ವಿಕೆ ಮತ್ತು 48 ಗಂಟೆ ನಿರಂತರವಾಗಿ ಮಳೆ ಸುರಿ­ಯು­ವುದು ಮುಂಗಾರು ಬಂದಿ­ರು­ವುದರ ಲಕ್ಷಣಗ­ಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT