ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾದಲ್ಲಿ ಪಕ್ಷಿಗಳ ಸಮೀಕ್ಷೆ ಫೆ.15ಕ್ಕೆ

Last Updated 9 ಜನವರಿ 2015, 8:56 IST
ಅಕ್ಷರ ಗಾತ್ರ

ಕಾರವಾರ: ಪರಿಸರ ಉಸ್ತುವಾರಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವು ‘ಕೈಗಾ ಬರ್ಡ್ ಮ್ಯಾರಥಾನ್‌’ ನಾಲ್ಕನೆಯ ಆವೃತ್ತಿಯನ್ನು ಆಯೋಜಿಸುತ್ತಿದೆ. ಪಕ್ಷಿ ಸಂಕುಲದ ಸಮೀಕ್ಷೆ ಕೈಗಾದ ಸುತ್ತಮುತ್ತ ಫೆಬ್ರುವರಿ 15ರಂದು ನಡೆಯಲಿದೆ.

ಕೈಗಾ ಅಣು ಸ್ಥಾವರದ ವಲಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿನ ಜೈವಿಕ ವೈವಿಧ್ಯತೆಯ ವೈಜ್ಞಾನಿಕ ಅಧ್ಯಯನ, ಆವಾಸ ಸ್ಥಾನದ ಸುಧಾರಣೆ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಎನ್‌ಪಿಸಿಐಎಲ್‌ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದೆ.

ಪ್ರತಿ ಸಮೀಕ್ಷೆಯಲ್ಲೂ ದಕ್ಷಿಣ ಭಾರತದ ಎಲ್ಲಾ ಮೂಲೆಗಳಿಂದ ನೂರಾರು ಪಕ್ಷಿ ವೀಕ್ಷಕರು ಪಾಲ್ಗೊಳ್ಳುತ್ತಿದ್ದಾರೆ. 2011ರಲ್ಲಿ ಆರಂಭಗೊಂಡ ಈ ಸಮೀಕ್ಷೆಯಲ್ಲಿ 142 ಪಕ್ಷಿಗಳು ಪತ್ತೆಯಾಗಿದ್ದು, ನಾಲ್ಕನೆಯ ಆವೃತ್ತಿಯ ಸಮೀಕ್ಷೆಯಲ್ಲಿ 229 ಬಗೆಯ ಪಕ್ಷಿಗಳು ಕಂಡುಬಂದಿವೆ.

ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ kaigabm@gmail.com ಇಲ್ಲಿಗೆ ಜ. 20 ಒಳಗಾಗಿ ಇ–ಮೇಲ್ ಕಳುಹಿಸಬಹುದು ಅಥವಾ ಮೊ: 9448991753 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT