ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ, ಗೇಲ್‌ ನೃತ್ಯದ ಖುಷಿ

ಎಬಿಡಿ ಪತ್ನಿಯ ಹಾಡಿಗೆ ಗಿಟಾರ್ ಬಾರಿಸಿದ ವ್ಯಾಟ್ಸನ್‌
Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್‌ ಒಂಬತ್ತನೇ ಆವೃತ್ತಿಯಲ್ಲಿ  ಐದು ಪಂದ್ಯಗಳನ್ನಾಡಿದ ಬಳಿಕ ಈಗ ವಿಶ್ರಾಂತಿಯ ಮೂಡ್‌ ನಲ್ಲಿರುವ ಆರ್‌ಸಿಬಿ ತಂಡದ ಆಟಗಾ ರರು ಉದ್ಯಾನನಗರಿಯಲ್ಲಿ ಏನು ಮಾಡುತ್ತಿದ್ದಾರೆ ಗೊತ್ತೇ?

ಶೇನ್‌ ವ್ಯಾಟ್ಸನ್‌, ಕೇನ್ ರಿಚರ್ಡ್‌ ಸನ್‌ ಮತ್ತು ವರುಣ್ ಆ್ಯರನ್ ಅವರು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾ ಗುತ್ತಿದ್ದರೆ, ಇನ್ನು ಕೆಲ ಆಟಗಾರರು ಮಾಲ್‌ಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ಗುರುವಾರ ಮಾತ್ರ ಆರ್‌ಸಿಬಿ ತಂಡದ ಆಟಗಾರರು ಹೋಟೆಲ್‌ ಬಿಟ್ಟು ಎಲ್ಲೂ ಕದಲಲಿಲ್ಲ.

ಆರ್‌ಸಿಬಿ ಫ್ರಾಂಚೈಸ್ ತಮ್ಮ ತಂಡದ ಆಟಗಾರರಿಗೆ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಕ್ರಿಸ್‌ ಗೇಲ್‌ ಮತ್ತು ವಿರಾಟ್‌ ಕೊಹ್ಲಿ ಅವರ ನೃತ್ಯವೇ ಆಕರ್ಷಣೆಯಾಗಿತ್ತು.

ಅಪ್ಪನಾದ ಖುಷಿಯಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್‌ ಗೇಲ್‌ ಔತಣ ಕೂಟ ಆರಂಭವಾದ ಕೆಲ ನಿಮಿಷಗಳ ಲ್ಲಿಯೇ ಭರ್ಜರಿ ನೃತ್ಯ ಮಾಡಿದರು. ಇವರಿಗೆ ನಾಯಕ ಕೊಹ್ಲಿ ಜೊತೆಯಾ ದರು.  ಮಗುವನ್ನು ನೋಡಲು ತವರಿಗೆ ತೆರಳಿದ್ದ ಗೇಲ್‌ ಎರಡು ದಿನಗಳ ಹಿಂದೆಯಷ್ಟೇ ನಗರಕ್ಕೆ ಮರಳಿದ್ದಾರೆ.

ಗೇಲ್‌–ಕೊಹ್ಲಿ  ಜತೆಯಾಗಿ ಸುಮಾರು ಐದು ನಿಮಿಷ ಹೆಜ್ಜೆ ಹಾಕಿ ದರು.  ಉಳಿದ ಆಟಗಾರರು ಮತ್ತು ಸಿಬ್ಬಂದಿಯಲ್ಲಿ ಖುಷಿಯ ಅಲೆ. ಇವರ ನಡುವೆ ಗಮನ ಸೆಳೆದಿದ್ದು ಶೇನ್‌ ವ್ಯಾಟ್ಸನ್‌.

ಎರಡು ದಿನಗಳ ಹಿಂದೆ ನಗರದಲ್ಲಿ ನಡೆದಿದ್ದ ಬೌಲ್‌ ಔಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವ್ಯಾಟ್ಸನ್‌ ‘ಬೆಂಗಳೂರಿನ ಜನರಿಂದ ಅಪಾರ ಪ್ರೀತಿ ಸಿಕ್ಕಿದೆ’ ಎಂದಿದ್ದರು. ಈ ಸಲದಿಂದ ಆರ್‌ಸಿಬಿ ತಂಡದಲ್ಲಿ ಆಡುತ್ತಿರುವ ವ್ಯಾಟ್ಸನ್‌ ಔತಣ ಕೂಟದಲ್ಲಿ ಗಿಟಾರ್ ಬಾರಿಸಿ ಗಮನ ಸೆಳೆದರು.

ಕಾರ್ಯಕ್ರಮವನ್ನು ರಂಗುರಂಗಾಗಿ ಆಯೋಜಿಸಲಾಗಿತ್ತು. ನೃತ್ಯ ಹಾಗೂ ಸಂಗೀತದ ಮಾಧುರ್ಯವನ್ನು ಉಣಬ ಡಿಸಲು ಕಲಾವಿದರ ತಂಡವೇ ನೆರೆದಿತ್ತು. ಕೊಹ್ಲಿ ಮತ್ತು ಗೇಲ್ ನೃತ್ಯ ಮಾಡುತ್ತಿ ದ್ದಷ್ಟು ಹೊತ್ತು ವ್ಯಾಟ್ಸನ್‌ ಕಲಾವಿದರ ನಡುವೆ ನಿಂತು ಗಿಟಾರ್ ಬಾರಿಸಿದರು. ವೇದಿಕೆ ಮೇಲೆ ಡಿವಿಲಿಯರ್ಸ್‌ ಪತ್ನಿ ಡಾನಿಯೆಲ್ ಹಾಡಿಗೂ ವ್ಯಾಟ್ಸನ್‌ ಗಿಟಾರ್‌ ನುಡಿಸಿದ್ದು ವಿಶೇಷ.

ಬೆಂಗಳೂರಿನಿಂದ ಹೊರಗಡೆ ಮೂರು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡ ಏಪ್ರಿಲ್‌ 30ರಂದು ಸನ್‌ರೈಸರ್ಸ್‌  ವಿರುದ್ಧ ಹೈದರಾಬಾದ್‌ ನಲ್ಲಿ ಪಂದ್ಯವಾಡಲಿದೆ.  ಮೇ 2ರಂದು   ನೈಟ್‌ ರೈಡರ್ಸ್ ಎದುರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT