ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಯಿಕ್ಕೋಡ್‌: 2 ಹೊಸ ಸೈಬರ್‌ಪಾರ್ಕ್‌

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಿರುವನಂತಪುರದಲ್ಲಿ ಟೆಕ್ನೊಪಾರ್ಕ್‌ ಮತ್ತು ಕೊಚ್ಚಿಯಲ್ಲಿ ಇನ್ಫೊಪಾರ್ಕ್‌ ಸ್ಥಾಪನೆ ಮೂಲಕ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪೆನಿಗಳನ್ನು ಆಕರ್ಷಿಸಿದ ಕೇರಳ, ಈಗ ಕೋಯಿಕ್ಕೋಡ್‌ನಲ್ಲಿ ಹೊಸದಾಗಿ ಎರಡು ಸೈಬರ್‌ಪಾರ್ಕ್‌ ಆರಂಭಿಸುತ್ತಿದೆ.

ಇಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇರಳದ ಮಾಹಿತಿ ತಂತ್ರಜ್ಞಾನ ಸಚಿವ ಪಿ.ಕೆ.ಕುನ್ಹಾಲಿಕುಟ್ಟಿ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎಚ್‌.ಕುರಿಯನ್‌, ಐ.ಟಿ ಕಂಪೆನಿಗಳಿಗೆ ಮೂಲ ಸೌಕರ್ಯ ಒದಗಿಸಿ ಉತ್ತೇಜಿಸಲೆಂದೇ ಕೋಯಿಕ್ಕೋಡ್‌ನಲ್ಲಿ ಒಟ್ಟು 68 ಎಕರೆಗಳಲ್ಲಿ ರೂ1000 ಕೋಟಿಗೂ ಅಧಿಕ ವೆಚ್ಚದಲ್ಲಿ ಎರಡು ಸೈಬರ್‌ಪಾರ್ಕ್‌ ಅಭಿವೃದ್ಧಿ­ಪಡಿಸಲಾಗು­ತ್ತಿದೆ. ಸರ್ಕಾರದಿಂದ 42 ಎಕರೆಗಳಲ್ಲಿ ಕೆಎಸ್‌ಐಟಿ ಸೈಬರ್‌ಪಾರ್ಕ್‌ ಹಾಗೂ ಉರಲುಂಗಲ್‌ ಗುತ್ತಿಗೆ ಕಾರ್ಮಿಕರ ಸಹಕಾರ ಸಂಘದಿಂದ 26 ಎಕರೆಗಳಲ್ಲಿ ಯುಎಲ್‌ ಸೈಬರ್‌ಪಾರ್ಕ್‌ ನಿರ್ಮಿಸ­ಲಾಗು­ತ್ತಿದೆ. ಯೋಜನೆ   ಪೂರ್ಣ­ಗೊಂಡ ನಂತರ 25 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಹಲವು ವರ್ಷಗಳ ಪ್ರಯತ್ನದ ನಂತರ 2006ರಲ್ಲಿ ತಿರುವನಂತಪುರದಲ್ಲಿ ಇನ್ಫೊಸಿಸ್‌ನದೊಂದು ಕಚೇರಿ ಆರಂಭಿಸಲು ಸಾಧ್ಯವಾಯಿತು. ಈಗ ನಾಲ್ಕನೇ ಹಂತದ ವಿಸ್ತರಣೆ ಕಾಮಗಾರಿ ನಡೆದಿದೆ ಎಂದು ಕಂಪೆನಿಯ ಮಾಜಿ ಸಿಇಒ ಕ್ರಿಸ್‌ ಗೋಪಾಲಕೃಷ್ಣನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT