ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರ ಸಂಘಟನೆ ಅನಿವಾರ್ಯ: ವೆರೋನಿಕಾ

Last Updated 2 ಮಾರ್ಚ್ 2015, 11:18 IST
ಅಕ್ಷರ ಗಾತ್ರ

ಉಡುಪಿ: ‘ಕ್ರೈಸ್ತ ಸಮುದಾಯವನ್ನು ರಾಜಕೀಯ­ದಲ್ಲಿ ಬಲಿಷ್ಠಗೊಳಿಸುವಲ್ಲಿ ಸಂಘಟ­ನಾತ್ಮ­­ಕವಾಗಿ ಕೆಲಸ ಮಾಡಬೇಕು’ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಹೇಳಿದರು.

ಲಕ್ಷ್ಮೀನರಸಿಂಹ ರೋಟರಿ ಕಲಾಮಂದಿರದಲ್ಲಿ  ಭಾನುವಾರ ನಡೆದ ಕೆಥೊಲಿಕ್ ಸಭಾ ಕುಂದಾ­ಪುರ ವಲಯ ಸಮಿತಿಯ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ­­­ದಲ್ಲಿ ಮಾಡಿದ ಸೇ­­ವೆ­­ಯ­­ನ್ನು ಗುರುತಿಸಿ ಅವರನ್ನು ಗೌರವಿಸಿದಾಗ ಅಂತಹ ಸಂಘಟನೆ ಯಶಸ್ವಿಯಾಗಿ ಮುಂದವರಿಯುತ್ತದೆ. ಕೆಥೊ­ಲಿಕ್ ಸಭಾ ದೀನದಲಿತರು ಹಾಗೂ ಅಶಕ್ತರನ್ನು ಗುರುತಿಸಿ ಅಂತಹವರಿಗೆ ಹೆಚ್ಚು ಸಹಾಯ ಮಾಡಬೇಕು ಎಂದು ಹೇಳಿದರು.

ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಎಲ್‌ರಾಯ್ ಕಿರಣ್ ಕ್ರಾಸ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ ೨೫ ವರ್ಷಗಳಲ್ಲಿ ವಲಯ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರಿಗೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಹಕಾರ ಸಂಸ್ಥೆಗಳ ನಿರ್ದೇಶಕರನ್ನು ಸನ್ಮಾನಿಸ­ಲಾಯಿತು.

ವಲಯ ಸಮಿತಿಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು.  ­ಕಾ­ರ್ಯ­ಕ್ರ­ಮ­­­ದಲ್ಲಿ ಕೆಥೊಲಿಕ್ ಸಭಾ ಮಂಗಳೂ­ರು ಧರ್ಮಪ್ರಾಂತ್ಯದ ಅಧ್ಯಕ್ಷೆ ಫ್ಲೇವಿ ಡಿಸೋಜಾ, ವಲಯ ಸಮಿತಿಯ ನಿರ್ದೇಶಕ ಅನಿಲ್ ಡಿಸೋ­ಜಾ, ಕಾರ್ಯದರ್ಶಿ ಮೇಬಲ್ ಡಿಸೋಜಾ, ಕೋಶಾಧಿ­ಕಾರಿ ಮೈಕಲ್ ಪಿಂಟೊ, ಸುವರ್ಣ ಸಮಿತಿಯ ಸಂಚಾಲಕ ಆಲ್ವಿನ್ ಕ್ವಾಡ್ರಸ್,

ನಿಯೋ­ಜಿತ ಅಧ್ಯಕ್ಷ ಪ್ಯಾಟ್ರಿಕ್ ಮೆಂಡೊನ್ಸಾ, ವಲೇರಿಯ­ನ್ ಮಿನೇಜಸ್, ವಿನೋದ್ ಕ್ರಾಸ್ತಾ ಉಪಸ್ಥಿತರಿ­ದ್ದರು. ರೆನಿಟಾ ಬಾರ್ನೆಸ್ ಹಾಗೂ ಫ್ಲೈವನ್ ಡಿಸೋಜಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT