ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೋರಿದ ಗೂಗಲ್‌

Last Updated 4 ಜೂನ್ 2015, 6:01 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಇಂಟರ್‌ನೆಟ್‌ನ ಗೂಗಲ್‌ ಹುಡುಕು ತಾಣದಲ್ಲಿ ಟಾಪ್‌ 10 ಅಪರಾಧಿಗಳ ಚಿತ್ರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರ ಇರುವುದರ ವಿವಾದಕ್ಕೆ ಸಂಬಂಧಿಸಿದಂತೆ  ಗೂಗಲ್‌ ಕಂಪೆನಿ ಕ್ಷಮೆ ಕೋರಿದೆ.

ಟಾಪ್‌ 10 ಅಪರಾಧಿಗಳು ಎಂದು ಗೂಗಲ್‌ನ ಹುಡುಕುತಾಣದಲ್ಲಿ ಟೈಪಿಸಿದರೆ ಅಪರಾಧಿಗಳ ಚಿತ್ರಗಳಲ್ಲಿ ಮೋದಿ ಚಿತ್ರವು ಬರುತ್ತಿತ್ತು. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದು ಪ್ರಧಾನಮಂತ್ರಿಯವರಿಗೆ ತೋರಿಸಿದ ಅಗೌರವ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಈ ವಿವಾದಕ್ಕೆ ಸಂಬಂಧಿಸಿದಂತೆ ಗೂಗಲ್‌ ಕಂಪೆನಿಯು ಕ್ಷಮೆ ಕೋರಿದೆ. ಇದು ತಾಂತ್ರಿಕ ಸಮಸ್ಯೆಯಿಂದ ಉಂಟಾದ ಲೋಪ ಎಂದು ಗೂಗಲ್‌ ಕಂಪೆನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT