ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸುತ್ತಿರುವ ಕೆರೆ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಲಾಲ್‌ಬಾಗ್‌ ಕೆರೆ ಪರಿಸರ ಒಂದು ಕಾಲದಲ್ಲಿ ಹಚ್ಚ ಹಸಿರಿನಿಂದ ತುಂಬಿ ತುಳುಕು­ತ್ತಿತ್ತು. ನೋಡುಗರ ಕಣ್ಮನ ಸೆಳೆಯು­ತ್ತಿತ್ತು.  ಕೆರೆಯ ಏರಿ ಮೇಲಿರುವ ಬೆಂಚುಗಳ ಮೇಲೆ ಸಂಜೆ ಕುಳಿತಾಗ ತಂಪುಗಾಳಿ ಮನಸ್ಸಿಗೆ ಮುದ ನೀಡುತ್ತಿತ್ತು. ಕೆರೆ ತುಂಬಿದಾಗ ಕೋಡಿ ನೀರು ಪಕ್ಕದ ಕೃಂಬಿಗಲ್‌ ರಸ್ತೆ ಮೇಲೆ ಹರಿಯುತ್ತಿತ್ತು. 

ಆದರೆ, ಈಗಿನ ಪರಿಸ್ಥಿತಿಯೇ ಬೇರೆ. ಕೆರೆ­ಯಲ್ಲಿ ಸಾಕಷ್ಟು ನೀರು ಇಲ್ಲದೆ ಕೆರೆ ತುಂಬ ಕಸ–ಕಡ್ಡ,ಿ ತ್ಯಾಜ್ಯ ವಸ್ತುಗಳು ಹಾಗೂ ಹೂಳು ತುಂಬಿ­ಕೊಂಡಿದೆ. ನೀರು ಕಲುಷಿತ­ಗೊಂಡಿದೆ, ಕೆರೆ ಹಾಳಾಗಿದೆ. ಇದಕ್ಕೆ ಕಾರಣ ಕೆರೆಯ ನಿರ್ವ­ಹಣೆ ಸರಿಯಾಗಿಲ್ಲದಿರುವುದು. ನೀರು ಹರಿದು ಬರುತ್ತಿದ್ದ ಮೂಲಗಳು ಮುಚ್ಚಿಹೋಗಿವೆ. ಮುಂದಿನ ಬೇಸಿಗೆಗೆ ಕೆರೆ ಬತ್ತಿ ಹೋಗುವ ಸಾಧ್ಯತೆ­ಗಳು ಇವೆ.

ಆದ ಕಾರಣ ತೋಟ­ಗಾ­ರಿಕೆ ಇಲಾಖೆ ಅಧಿಕಾರಿ­ಗಳು ಕೆರೆಯಲ್ಲಿ ತುಂಬಿ­ರುವ ತ್ಯಾಜ್ಯ ವಸ್ತು­ಗಳನ್ನು ತ್ವರಿತವಾಗಿ ತೆಗೆಸಿ ಸ್ವಚ್ಛ­ಗೊಳಿಸಬೇಕು. ಮಳೆ ನೀರು ಕೆರೆಗೆ ಹರಿದು ಬರುವ ಮೂಲ­ಗಳನ್ನು ಗುರು­ತಿಸಿ ಕೆರೆ ಮೊದ­ಲಿ­ನಂತೆ ಕಂಗೊಳಿಸುವಂತೆ ಮಾಡ­ಬೇಕು.
  –ಲಕ್ಷ್ಮೀಪತಿ ಮಾವಳ್ಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT