ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ: ಅರಿವು ಮೂಡಿಸಿ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿ ಇಲ್ಲದೆ ಇರುವಂತಹ ಉಳಿತಾಯ ಖಾತೆಗಳು  ಇವೆ. ಇಂತಹ ಅನೇಕ ಖಾತೆಗಳಲ್ಲಿ ಕನಿಷ್ಠ ಬ್ಯಾಲನ್ಸ್ ಇಲ್ಲದೆ ಇರಬಹುದು. ಖಾತೆಯಲ್ಲಿ ಕನಿಷ್ಠ ಬ್ಯಾಲನ್ಸ್ ಉಳಿಸದೆ ಇರುವುದರಿಂದ ತಿಂಗಳಿಗೆ ₹ 35 ರಿಂದ ₹ 115ರ ವರೆಗೆ ಈ ಖಾತೆಗಳಿಗೆ ದಂಡ ಹಾಕಿ ಡೆಬಿಟ್‌ ಮಾಡುತ್ತಾರೆ.

ಪ್ರತಿ ತಿಂಗಳು ಹೀಗೆ ಡೆಬಿಟ್‌ ಮಾಡುತ್ತಾ ಹೋಗುವುದರಿಂದ ಸುಮಾರು ಖಾತೆಗಳು ದೊಡ್ಡ ಡೆಬಿಟ್‌ ಬ್ಯಾಲನ್ಸ್ ತೋರಿಸುತ್ತ ಇರುತ್ತವೆ. ಒಂದು ದಿನ ಇದ್ದಕ್ಕಿದ್ದಂತೆ ಬ್ಯಾಂಕುಗಳು ಇಂತಹ ಗ್ರಾಹಕರಿಂದ ಈ ಡೆಬಿಟ್‌ ಬ್ಯಾಲನ್ಸ್ ವಸೂಲಿ ಮಾಡಲು ಕ್ರಮ ತೆಗೆದುಕೊಂಡರೆ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ.

ಆದ್ದರಿಂದ ಬ್ಯಾಂಕುಗಳು ಅಥವಾ ಇಂಡಿಯನ್‌ ಬ್ಯಾಂಕ್‌ ಅಸೋಷಿಯೇಷನ್‌ ದಿನಪತ್ರಿಕೆಗಳಲ್ಲಿ ಒಂದು ನೋಟಿಸ್‌ ನೀಡಿ ‘ಇನಾಪರೇಟಿವ್‌ ಖಾತೆ’ಗಳನ್ನು ಸ್ಥಗಿತಗೊಳಿಸಬೇಕೆಂದು ತಿಳಿಸಬೇಕು. ಇದರಿಂದ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡುತ್ತದೆ.
-ಎನ್‌.ಸಿ. ಮಧುರಾನಾಥ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT