ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಶಾಂತಿಗೆ ಭಾರತ–ಪಾಕ್‌ ಒಪ್ಪಿಗೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್/ನವದೆಹಲಿ (ಐಎಎನ್‌ಎಸ್‌): ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ಮಾಣವಾ­ಗಿ­ರುವ ಉದ್ವಿಗ್ನ ಪರಿಸ್ಥಿತಿ ಶಮನ­ಕ್ಕೆ ಭಾರತ, ಪಾಕಿಸ್ತಾನ ಸೇನೆ  ಮಂಗ-­ಳ­ವಾರ ಪರಸ್ಪರ ಒಪ್ಪಿಗೆ ಸೂಚಿಸಿವೆ.

ಪಾಕಿಸ್ತಾನ ಪದೇ ಪದೇ ಕದನ ವಿರಾಮ ಒಪ್ಪಂದ ಉಲ್ಲಂಘಿ­ಸುತ್ತಿರುವ ಬಗ್ಗೆಯೂ ಭಾರತ ಇದೇ ವೇಳೆ ಪ್ರತಿ­ಭಟನೆ ವ್ಯಕ್ತ­ಪಡಿಸಿತು.

ಮಂಗಳವಾರ ಬೆಳಿಗ್ಗೆ ಹಾಟ್‌ಲೈನ್‌ನಲ್ಲಿ ಮಾತ­­ನಾ­ಡಿದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾ­ಚರಣೆ ಮಹಾ ನಿರ್ದೇಶಕರು, ಗಡಿ­ಯಲ್ಲಿ ಉದ್ವಿಗ್ನ ಸ್ಥಿತಿ ತಿಳಿಗೊಳಿಸುವ ಒಪ್ಪಂ­ದಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಸೇನಾ ಸಾರ್ವಜನಿಕ ಸಂಪರ್ಕ ಅಧಿ­ಕಾರಿಗಳು ಉಭಯ ರಾಷ್ಟ್ರ­ಗಳ ಸೇನಾಧಿಕಾರಿಗಳ ಮಧ್ಯೆ ನಡೆದಿರುವ ಮಾತುಕತೆಯನ್ನು ದೃಢಪಡಿಸಿದ್ದಾರೆ.

ಕೇಳದ ಗುಂಡಿನ ಸದ್ದು
ಜಮ್ಮು (ಪಿಟಿಐ):
ಹದಿನೈದು ದಿನ ಗಳಿಂದ ಗುಂಡಿನ ಸದ್ದು  ಕೇಳುತ್ತಿದ್ದ ಜಮ್ಮು ವಲಯದ  ಗಡಿಯಲ್ಲಿ ಮಂಗಳ ವಾರ ಶಾಂತ ವಾತಾವರಣ ನೆಲೆಸಿತ್ತು.

ಪಾಕ್‌ ಪಡೆಗಳ ನಿರಂತರ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಮೃತ­ಪಟ್ಟು, 17 ಜನರಿಗೆ ಗಾಯವಾಗಿತ್ತು.

ಗಡಿಯಲ್ಲಿನ ಪ್ರಕ್ಷುಬ್ಧತೆಯಿಂದಾಗಿ ತಮ್ಮ ಗ್ರಾಮಗಳನ್ನು ತೊರೆದು ಬೇರೆಡೆ ಹೋಗಿದ್ದ ನಿವಾಸಿಗಳು ಮತ್ತೆ ತಮ್ಮ ಹಳ್ಳಿಗಳತ್ತ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT