ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ಮಾಡಿಸಿಕೊಂಡ ಮಹಿಳೆಯರನ್ನು ಕ್ಷಮಿಸಿ: ಪೋಪ್‌

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ವ್ಯಾಟಿಕನ್‌ ಸಿಟಿ (ಐಎಎನ್‌ಎಸ್‌): ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು  ಕ್ಷಮೆಗೆ ಅರ್ಹರು ಎಂದು ಪೋಪ್‌ ಫ್ರಾನ್ಸಿಸ್ ಮಂಗಳವಾರ ಹೇಳಿದ್ದಾರೆ. ಡಿಸೆಂಬರ್‌ 8, 2015 ರಿಂದ ನವೆಂಬರ್‌ 20, 2016ರ ವರೆಗಿನ ಪವಿತ್ರ ವರ್ಷದ ಅವಧಿಯಲ್ಲಿ  ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆ ಮತ್ತು ಇದಕ್ಕೆ ನೆರವು ನೀಡಿದವರಿಗೂ ಕ್ಷಮೆ ನೀಡಿ ಎಂದು ಪೋಪ್‌ ಹೇಳಿದ್ದಾರೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

‘ಹೆಚ್ಚಿನ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳದೆ ಬೇರೆ ವಿಧಿ ಇಲ್ಲ. ಮಹಿಳೆಯರು ಈ ನಿರ್ಧಾರ ತೆಗೆದುಕೊಳ್ಳಲು ಇರುವ ಒತ್ತಡಗಳ ಬಗ್ಗೆ ನನಗೆ ಅರಿವಿದೆ’ ಎಂದು ಮಂಗಳವಾರ ಪ್ರಕಟ ಗೊಂಡಿರುವ ಪೋಪ್‌ ಅವರ ಪತ್ರದಲ್ಲಿ ಹೇಳಲಾಗಿದೆ. ಕ್ಯಾಥೋಲಿಕ್‌ ಧರ್ಮಸಭೆ ಪವಿತ್ರ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕ್ಷಮೆ ನೀಡೋಣ ಎಂದು ಪೋಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT