ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಖಿಂಡಿ ಕೊಳಲಿಗೆ ತಲೆದೂಗಿದ ಪ್ರೇಕ್ಷಕರು

Last Updated 24 ಅಕ್ಟೋಬರ್ 2014, 6:29 IST
ಅಕ್ಷರ ಗಾತ್ರ

ರಾಣಿ ಚನ್ನಮ್ಮ ವೇದಿಕೆ(ಕಿತ್ತೂರು): ಕಿತ್ತೂರು ಉತ್ಸವದ ಅಂಗವಾಗಿ ಗುರು­ವಾರ ರಾತ್ರಿ  ಪ್ರವೀಣ ಗೋಡ್ಖಿಂಡಿ ಪ್ರಸ್ತುತ ಪಡಿಸಿದ  ಕೊಳಲು ವಾದನಕ್ಕೆ ತಲೆದೂಗಿದ ಪ್ರೇಕ್ಷಕರು ಕರತಾಡನ ಮಾಡಿ, ಶಿಳ್ಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು..

ಸ್ವರಗಳ ಜೊತೆ ಮೈಮರೆತು ಹಾಡಿದ ಕೊಳಲು ಮಾಂತ್ರಿಕನ ಶೈಲಿಗೆ ಮರು­ಳಾದ ಸಭಿಕರು ಅವರು ನುಡಿಸಿದ ಚಿತ್ರಗೀತೆಗಳನ್ನು ಮೈಮರೆತು ಕೇಳಿ ಆನಂದಿಸಿದರು.

ಯಮನ ರಾಗದಿಂದ ಕಾರ್ಯಕ್ರಮ ಆರಂಭಿಸಿದ ಅವರು ಮಿಶ್ರ ಪಹಾಡಿ ರಾಗ ಪ್ರಸ್ತುತ ಪಡಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಇವೆರಡು ರಾಗದೊಂದಿಗೆ ಹಳೇ ಮತ್ತು ಹೊಸ ಚಿತ್ರಗೀತೆಗಳ ಸಂಬಂಧ ವಿವರಿ­ಸಿದ ಅವರು, ಅವುಗಳನ್ನೂ ನುಡಿಸಿ ಪ್ರೇಕ್ಷಕರನ್ನು ಗಂಧರ್ವಲೋಕಕ್ಕೆ ಕರೆದುಕೊಂಡು ಹೋದರು.

ಮಿಶ್ರಪಹಾಡಿಯಾ ರಾಗದ ಜನಪ್ರಿಯ ಚಿತ್ರಗೀತೆಗಳಾದ ಮೂಡಲ ಮನೆಯಾ ಮುತ್ತಿನ ಹನಿಯಾ.., ದೋಣಿ ಸಾಗಲಿ ಮುಂದೆ ಹೋಗಲಿ... ಹಳೇ ಕಾಲದ ಗೀತೆಗಳನ್ನು ನುಡಿಸಿದರು.

ಸ್ವರ ಒಂದೇ ಆದರೂ ಅವು ಸ್ಫುರಿ­ಸುವ ಭಾವ ಬೇರೆಯಾಗಿರುತ್ತದೆ. ಬೇರೆ, ಬೇರೆ ಗೀತೆಗಳು ಈ ರಾಗ­ದೊಂದಿಗೆ ಮೂಡಿ ಬಂದಿವೆ ಎಂದು ನುಡಿದರು.

ಇದಕ್ಕೂ ಮೊದಲು  ಎಸ್‌. ಬಾಲೇಶ್ ಶಹನಾಯಿ ವಾದನ ಪ್ರಸ್ತುತ ಪಡಿಸಿದರು. ಹಾಸ್ಯ ಕಲಾವಿದರಾದ ಮಹಾ­ದೇವ ಸತ್ತಿಗೇರಿ, ರವಿ ಭಜಂತ್ರಿ ಮತ್ತು ಇಂದುಮತಿ ಸಾಲಿಮಠ ಅವರ ಹಾಸ್ಯ ಕಾರ್ಯಕ್ರಮವನ್ನು ಪ್ರೇಕ್ಷಕರು ಆನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT