ಬೆಂಗಳೂರು: ಜಯನಗರದ 5ನೇ ಹಂತದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊಸದಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಇ–ಗ್ರಂಥಾಲಯಕ್ಕೂ ಚಾಲನೆ ನೀಡಲಾಯಿತು.

ಒಟ್ಟು ₨ 1.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯ ಕಟ್ಟಡವು ಮೂರು ಮಹಡಿಗಳನ್ನು ಹೊಂದಿದೆ. ಅದರಲ್ಲಿ ಒಟ್ಟು 80,000 ಪುಸ್ತಕಗಳಿವೆ. ಕಥೆ, ಕಾದಂಬರಿ ಜತೆಗೆ ಇತಿಹಾಸದ ಅನೇಕ ಪುಸ್ತಕಗಳಿವೆ. ಐಎಎಸ್, ಐಪಿಎಸ್, ಬ್ಯಾಂಕ್ಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಪುಸ್ತಕಗಳಿವೆ. ಇ– ಗ್ರಂಥಾ ಲಯದಲ್ಲಿರುವ 20 ಕಂಪ್ಯೂಟರ್ನಲ್ಲಿ ಇಂಟರ್ನೆಟ್ ಸೌಲಭ್ಯವಿದ್ದು, ಅರ್ಧ ಗಂಟೆ ಬ್ರೌಸಿಂಗ್ಗೆ ₨ 5 ಶುಲ್ಕವಿದೆ.

ಶಾಸಕ ವಿಜಯಕುಮಾರ್, ‘ಗ್ರಂಥಾಲಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ವಿಭಾಗವಿದೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳ ಪ್ರತ್ಯೇಕ ವಿಭಾಗವೂ ಇದೆ’ ಎಂದು ಹೇಳಿದರು. ‘ಗ್ರಂಥಾಲಯದಲ್ಲಿಯೇ ಒಂದು ಅಧ್ಯಯನ ಕೇಂದ್ರವನ್ನು ಮಾಡಬೇಕೆಂಬ ಯೋಚನೆಯಿದೆ. ಇಲ್ಲಿ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಲಾಗುವುದು.

ಕನ್ನಡ, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್, ಜಪಾನ್ ಮುಂತಾದ ಭಾಷೆಗಳನ್ನು ಕಲಿಸಲು ಕೋರ್ಸ್ ಗಳನ್ನು ಆರಂಭಿಸಲಾಗುವುದು ’ ಎಂದು ವಿವರಿಸಿದರು. ‘ಮುಂದಿನ ದಿನಗಳಲ್ಲಿ ಇ–ಗ್ರಂಥಾಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸ ಲಾಗುವುದು. ಗೂಗಲ್ನಲ್ಲಿ ಒಂದೆಡೆ ಒಂದು ಮಾಹಿತಿ ಮಾತ್ರ ದೊರೆ ಯುತ್ತದೆ. ಎಂದು ಬೆಂಗಳೂರು ವಿವಿ ನಿವೃತ್ತ ಗ್ರಂಥಪಾಲಕ ಡಾ.ಪಿ.ವಿ. ಕೊನ್ನೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.