ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ವಿಕಾಸ, ಕೃಷಿಗೆ ಒತ್ತು

ಬ್ಯಾಂಕ್‌ಗಳಿಗೆ ಸಿಎಂ ಕರೆ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಗೆ ಎಲ್ಲ ಬ್ಯಾಂಕುಗಳೂ ಒತ್ತು ನೀಡಬೇಕು’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಇಲ್ಲಿನ ಬಹುಮಹಡಿ ಕಟ್ಟಡದಲ್ಲಿ ಮಂಗಳವಾರ ಸಿಂಡಿಕೇಟ್‌ ಬ್ಯಾಂಕ್‌ನ ಶಾಖೆ ಉದ್ಘಾಟಿಸಿ ಅವರು ಮಾತ ನಾಡಿದರು.

ಸರ್ಕಾರದ ಕಾರ್ಯಕ್ರಮಗಳು ಪರಿ ಣಾಮಕಾರಿಯಾಗಿ ಎಲ್ಲರನ್ನೂ ತಲು ಪಲು ಬ್ಯಾಂಕ್‌ನ ಸಹಕಾರ ಮುಖ್ಯ. ಬ್ಯಾಂಕ್‌ನ ಸೇವೆ, ಆರ್ಥಿಕ ಸಹಾಯ ಎಲ್ಲವೂ ಸಮಾಜದ ವ್ಯವಸ್ಥೆಗೆ ಅನು ಗುಣವಾಗಿರಬೇಕು. ಕೃಷಿ ಕ್ಷೇತ್ರಕ್ಕೆ ಹೆಚ್ಚು ಸಾಲ ನೀಡಬೇಕು. ಆ ಮೂಲಕ ಸಮಾಜದಲ್ಲಿ ಬದಲಾವಣೆ ಕಾರಣ ರಾಗಬೇಕು ಎಂದರು.

ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯವಹಾರ ಭಾಷೆಯಾಗ ಬೇಕು. ಬೇರೆ ರಾಜ್ಯದ ಅಧಿಕಾರಿಗಳು ಸ್ಥಳೀಯರೊಂದಿಗೆ ವ್ಯವಹಾರ ಮಾಡು ವಷ್ಟು ಕನ್ನಡವನ್ನು ಕಲಿಯಬೇಕು ಎಂದ ಅವರು, ‘ನೀವು ಕನ್ನಡಿಗ ರೊಂದಿಗೆ ವ್ಯವಹಾರ ಮಾಡುತ್ತಿದ್ದೀರಿ ಎಂಬ ಅರಿವಿರಬೇಕು’ ಎಂದರು.

ವಿಧಾನಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ, ಸಿಂಡಿಕೇಟ್‌ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಆಂಜನೇಯ ಪ್ರಸಾದ್‌, ಬ್ಯಾಂಕ್‌ನ ನಿರ್ದೇಶಕ ನಜೀರ್‌ ಅಹಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT