ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಸ್ಟ್ರೀಟ್‌ ಸ್ಫೋಟ ಪ್ರಕರಣ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಚರ್ಚ್‌ಸ್ಟ್ರೀಟ್‌ ಸ್ಫೋಟ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾದಳ (ಎನ್‌ಐಎ), ಸೋಮವಾರ  ದೋಷಾರೋಪ ಪಟ್ಟಿ ಸಲ್ಲಿಸಿದೆ.

ನಗರದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾದಳ, ಬಂಧಿತ ಆರೋಪಿ  ಅಲಮ್‌ ಜೆಬ್‌ ಅಫ್ರಿದಿ ಅಲಿಯಾಸ್‌ ಮೊಹಮ್ಮದ್‌ ರಫೀಕ್‌ ಅಲಿಯಾಸ್‌ ಜಾವೀದ್‌, ಸ್ಫೋಟ ಕೃತ್ಯ ದಲ್ಲಿ ಪಾಲ್ಗೊಂಡಿದ್ದ ಎಂದು ಹೇಳಿದೆ.

ಘಟನೆಯ ವಿವರ:  2014ರ ಡಿಸೆಂಬರ್‌ 28ರಂದು ಚರ್ಚ್‌ಸ್ಟ್ರೀಟ್‌ನ ಕೊಕೊನಟ್‌ ಗ್ರೊವ್‌ ಬಾರ್‌ ಅಂಡ್‌ ರೆಸ್ಟೊರಂಟ್‌ ಎದುರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಗೊಂಡಿತ್ತು. ಘಟನೆಯಲ್ಲಿ ಮಹಿಳೆ ಯೊಬ್ಬರು ಮೃತಪಟ್ಟು, ಇತರ ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದರು.

ಆರಂಭದಲ್ಲಿ ಬೆಂಗಳೂರು ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ(ಹೈದರಾಬಾದ್‌ ವಿಭಾಗ) ಕೈಗೆತ್ತಿಕೊಂಡಿತ್ತು.

ತೀವ್ರತರ ತನಿಖೆಯ ಬಳಿಕ ಕಳೆದ  ಜನವರಿಯಲ್ಲಿ ಆರೋಪಿ ಅಲಮ್‌ ಜೆಬ್‌ ಅಫ್ರಿದಿಯನ್ನು ಬಂಧಿಸುವಲ್ಲಿ ಎನ್‌ಐಎ ಅಧಿಕಾರಿಗಳು ಯಶಸ್ವಿಯಾಗಿದ್ದರು. ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿಯು ತಪ್ಪು ಒಪ್ಪಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT