ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ಉತ್ತರ ಭಾರತ ತತ್ತರ

ನಾಲ್ವರ ಸಾವು: ದೆಹಲಿಯಲ್ಲಿ ರೈಲು, ವಿಮಾನ ಸಂಚಾರ ವ್ಯತ್ಯಯ
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೆಹಲಿ ಸೇರಿ­ದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ಕಾರಣ ಜನಜೀವನ ಅಸ್ತವ್ಯಸ್ತ­ವಾಗಿದೆ. ಉತ್ತರ ಪ್ರದೇಶದಲ್ಲಿ ಮೂವರು ಸೇರಿ­ದಂತೆ ನಾಲ್ವರು ಚಳಿಯಿಂದ ಸಾವನ್ನಪ್ಪಿ­ದ್ದಾರೆ. ದೆಹಲಿಯಲ್ಲಿ ಸುಮಾರು 173 ವಿಮಾನಗಳು ಮತ್ತು 70 ರೈಲುಗಳ ಸಂಚಾರ ಅಡಚಣೆಯಾಗಿದೆ.

ಹಿಮಾಚಲ ಪ್ರದೇಶ, ಪಂಜಾಬ್‌, ಹರಿಯಾಣ, ರಾಜಸ್ತಾನ, ಉತ್ತರಾ­ಖಂಡ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಹಾಗೂ ದಕ್ಷಿಣದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಸೋಮವಾರ ಮುಂಜಾನೆ ದೆಹಲಿ­ಯಲ್ಲಿ ದಟ್ಟ  ಮಂಜು ಆವರಿಸಿತ್ತು.  ಕಳೆದ ಐದು ವರ್ಷ­ಗಳಲ್ಲಿಯೇ ಅತಿ  ಕನಿಷ್ಠ ತಾಪಮಾನ (4.2 ಡಿಗ್ರಿ ಸೆಲ್ಸಿಯಸ್‌) ದಾಖಲಾಗಿದೆ.

‘ಮಂಜು ಮುಸುಕಿದ ಕಾರಣ  ದೆಹಲಿಗೆ ಬರಬೇಕಿದ್ದ ಅನೇಕ  ರೈಲು­ಗಳು ಮೂರರಿಂದ ನಾಲ್ಕು ಗಂಟೆ ತಡವಾಗಿ ಬಂದವು. ಅಂತೆಯೇ ದೆಹಲಿಯಿಂದ ಇತರೆ ಭಾಗ­ಗಳಿಗೆ ಹೊರಡಬೇಕಿದ್ದ ರೈಲುಗಳ ಸಮಯ­ದಲ್ಲಿಯೂ ವ್ಯತ್ಯಾಸ­ವಾ­ಯಿತು. ದಟ್ಟ ಮಂಜಿನ ಕಾರಣ ನಿಧಾನ­ವಾಗಿ ಚಲಿಸು­ವಂತೆ ಚಾಲಕರಿಗೆ ಸೂಚನೆ ನೀಡ­ಲಾಗಿದೆ’ ಎಂದು ಉತ್ತರ ವಲಯ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇದೇ ಪರಿಸ್ಥಿತಿ ಇತ್ತು.  ಬೆಳಿಗ್ಗೆ 6 ತಾಸುಗಳ ಕಾಲ ವಿಮಾನಗಳ ಆಗಮನ ಹಾಗೂ ನಿರ್ಗಮನದಲ್ಲಿ ವ್ಯತ್ಯಯವಾಯಿತು.

ಜೈಪುರ ವರದಿ: ರಾಜಸ್ತಾನದಲ್ಲಿಯೂ ಶೀತದ ವಾತಾವರಣ ಮುಂದುವರಿ­ದಿದೆ. ಮೌಂಟ್‌ ಅಬುನಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.  ಶ್ರೀನಗರ: ಜಮ್ಮು ಮತ್ತು ಕಾಶ್ಮೀರ­ದಲ್ಲಿಯೂ ಶೀತಗಾಳಿ ಆವ­ರಿಸಿದೆ. ಶ್ರೀನಗರದಲ್ಲಿ ಅತಿ ಕಡಿಮೆ 1.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT