ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕ್ಕಿಂತ ಪಾತ್ರ ಮುಖ್ಯ: ಫ್ರೀಡಾ ಪಿಂಟೊ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ನಾಯಕಿ ಪ್ರಧಾನ ಚಿತ್ರವಿದ್ದರೆ ಸಾಲದು. ಆದರೆ ಇಂಥ ಚಿತ್ರ ಯಶಸ್ವಿಯಾಗಬೇಕಾದರೆ ಆಕೆಯ ಪಾತ್ರ ಅದರಲ್ಲಿ ಗಟ್ಟಿತನದಿಂದ ಕೂಡಿರಬೇಕು ಎಂದಿದ್ದಾರೆ ಅಮೆರಿಕದ ಭಾರತೀಯ ಮೂಲದ ನಟಿ ಫ್ರೀಡಾ ಪಿಂಟೊ.

‘ನಾನು ಸಿನಿಮಾಗಳಲ್ಲಿ ಸ್ತ್ರೀ ಪಾತ್ರಕ್ಕೆ ಪ್ರಾಶಸ್ತ್ಯ ನೀಡುತ್ತೇನೆ ನಿಜ. ಆದರೆ ಅದು ಪರಿಣಾಮಕಾರಿಯಾಗಿರಬೇಕು. ಇಲ್ಲದಿದ್ದರೆ ನಾಯಕಿ ಪ್ರಧಾನ ಚಿತ್ರವಾದರೂ ಪ್ರಯೋಜನ ಇಲ್ಲ’ ಎಂದಿದ್ದಾರೆ ಫ್ರೀಡಾ.

ಪ್ರಪಂಚದ ಅತ್ಯಂತ ಸೆಕ್ಸಿ ಮಹಿಳೆಯರ ಮೊದಲ ಹತ್ತು ಮಂದಿಯ ಸಾಲಿಗೆ ಈಚೆಗೆ ಸೇರಿರುವ ಫ್ರೀಡಾ ಮಂಗಳೂರು ಮೂಲದ ಮುಂಬೈ ಬೆಡಗಿ.   ‘ಸ್ಲಮ್ ಡಾಗ್ ಮಿಲಿಯನೇರ್’, ‘ಮೀರಲ್’, ಹಾಗೂ ‘ತ್ರಿಶಾ’ ಚಿತ್ರಗಳನ್ನು ಒಪ್ಪಿಕೊಂಡು ಅದನ್ನು ಯಶಸ್ಸಿನ ಉತ್ತುಂಗಕ್ಕೆ ಸೇರಿರುವ ಹಿಂದೆಯೂ ಇದೇ ಲಾಜಿಕ್‌ ಇದೆ ಎನ್ನುತ್ತಾರೆ ಅವರು.

ಕಳೆದ ಶನಿವಾರ ನಡೆದ 17ನೇ ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಿದ್ದ ಫ್ರೀಡಾ, ಪತ್ರಕರ್ತರ ಎದುರು ಈ ವಿಷಯ ತಿಳಿಸಿದ್ದಾರೆ. ‘90ರ ದಶಕದಲ್ಲಿ ನಾಯಕಿ ಪ್ರಧಾನ ಪಾತ್ರಗಳು ಚಿತ್ರಗಳು ಬಂದಿದ್ದೇ ಕಮ್ಮಿ. ಆದರೆ ಈಗ ಹಾಗಲ್ಲ.

ಅನೇಕ ನಿರ್ದೇಶಕರು ಇದರತ್ತ ಚಿತ್ರ ಹರಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಾಯಕಿಗೆ ಜೀವತುಂಬುವ ಕಾರ್ಯ ಇನ್ನೂ ಆಗಬೇಕಿದೆ. ಈ ವಿಷಯದಲ್ಲಿ ನಟಿಯರಷ್ಟೇ ಅಲ್ಲದೇ ನಿರ್ದೇಶಕರೂ ಮತ್ತೊಮ್ಮೆ ಚಿಂತನೆ ನಡೆಸಬೇಕಿದೆ.

ಪ್ರಿಯಾಂಕಾ ಛೋಪ್ರಾ ನಟಿಸಿರುವ ‘ಮೇರಿಕಾಂ’, ಕಂಗನಾ ರೌನಟ್‌ ನಟನೆಯ ‘ಕ್ವೀನ್‌’ನಂತಹ ಚಿತ್ರಗಳು ಇನ್ನಷ್ಟು ಬರಬೇಕಿದೆ’ ಎಂದಿದ್ದಾರೆ ಫ್ರೀಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT