ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಧಾರಣೆ ದಾಖಲೆ ಕುಸಿತ

Last Updated 22 ಮೇ 2014, 19:38 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸಲು ಚಿನ್ನದ ಆಮದಿನ ಮೇಲೆ ಹೇರಿದ್ದ ನಿರ್ಬಂಧ­­ಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಸಡಿಲಿಸಿದೆ. ಇದರಿಂದ ಗುರುವಾರ ಚಿನ್ನದ ಧಾರಣೆ ದಾಖಲೆ ಕುಸಿತ ಕಂಡಿದೆ. ನವದೆಹಲಿಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ800 ಕುಸಿದು ರೂ28,550ಕ್ಕೆ ಇಳಿಯಿತು. ಮುಂಬೈ­­ನಲ್ಲಿ ರೂ780 ಕುಸಿದು ರೂ28 ಸಾವಿರದ ಗಡಿ ಇಳಿದು, ರೂ27,690ರಲ್ಲಿ ಮಾರಾಟವಾ­ಯಿತು. ಬೆಂಗಳೂರಿನಲ್ಲಿ ರೂ806 ಇಳಿಕೆಯಾಗಿದ್ದು 28,250ಕ್ಕೆ  ಮಾರಾಟವಾಗಿದೆ.

2014ರಲ್ಲಿ ಇದುವರೆಗೆ ದಾಖಲಾ­ಗಿರುವ ದಿನವೊಂದರ ಗರಿಷ್ಠ ಬೆಲೆ ಕುಸಿತ ಇದಾಗಿದೆ.  ಬೆಳ್ಳಿ ಕೂಡ ನವದೆಹಲಿ­ಯಲ್ಲಿ ಕೆ.ಜಿಗೆ ರೂ50 ಅಲ್ಪ ಕುಸಿತ ಕಂಡು ರೂ41,650ಕ್ಕೆ ಇಳಿಯಿತು. ಮುಂಬೈನಲ್ಲಿ ರೂ85 ಏರಿಕೆ ಕಂಡು  ರೂ41,860ರಲ್ಲಿ ವಹಿವಾಟು ಕಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆ­ಯಲ್ಲೂ ಚಿನ್ನದ ಧಾರಣೆ ಗುರುವಾರ ಶೇ 0.19ರಷ್ಟು ಕುಸಿತ ಕಂಡು ಪ್ರತಿ ಔನ್ಸ್‌ಗೆ  1,291 ಡಾಲರ್‌ಗಳಿಗೆ ಇಳಿಕೆ ಕಂಡಿದೆ. 

ನಿರ್ಬಂಧ ಸಡಿಲಿಕೆ
ರಫ್ತು ಉದ್ದೇಶಕ್ಕಾಗಿ 20;80 ಅನುಪಾತದಲ್ಲಿ ಚಿನ್ನ ಆಮದು ಮಾಡಿಕೊಳ್ಳಲು ಆಯ್ದ ಬ್ಯಾಂ­ಕು­ಗಳಿಗೆ ‘ಆರ್‌ಬಿಐ’ ಈಗಾಗಲೇ ಪರವಾನಗಿ ನೀಡಿದೆ. ಇದೀಗ ವಿದೇಶಿ ವ್ಯಾಪಾರ ಮಹಾನಿರ್ದೇಶನಾ­ಲಯದಲ್ಲಿ (ಡಿಜಿಎಫ್‌ಟಿ) ನೋಂದಾ­ಯಿ­ಸಿಕೊಂಡಿ­ರುವ ಸ್ಟಾರ್‌ ಟ್ರೇಡಿಂಗ್‌ ಹೌಸಸ್ (ಎಸ್‌ಟಿಎಚ್‌) ಮತ್ತು ಪ್ರೀಮಿ­ಯರ್‌ ಟ್ರೇಡಿಂಗ್‌ ಹೌಸಸ್‌ (ಪಿಟಿಎಚ್‌) ಸಂಸ್ಥೆಗಳಿಗೂ ಈ ಅವಕಾಶ ನೀಡ­ಲಾಗಿದೆ.  ಆದರೆ, ಒಟ್ಟಾರೆ ಆಮದು ಮಾಡಿ­ಕೊಂಡ ಚಿನ್ನದಲ್ಲಿ ಶೇ 20­ರಷ್ಟನ್ನು ಕಡ್ಡಾ­ಯವಾಗಿ ರಫ್ತು ಉದ್ದೇಶಕ್ಕೆ ಬಳಸಬೇಕು ಎಂದೂ ‘ಆರ್‌ಬಿಐ’ ಪ್ರಕಟಣೆ ತಿಳಿಸಿದೆ. 

2013ರ ಜುಲೈನಲ್ಲಿ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿ­ದಾಗ ‘ಆರ್‌ಬಿಐ’ ಚಿನ್ನದ ಆಮದಿನ ಮೇಲೆ ನಿರ್ಬಂಧ ಹೇರಿತ್ತು. ಚಿನ್ನದ ಆಮದು ಸುಂಕವನ್ನು ಶೇ 10ಕ್ಕೆ ಹೆಚ್ಚಿಸಲಾಗಿತ್ತು. 

‘ಸಿಎಡಿ’ ಇಳಿಕೆ
2013–14ನೇ ಸಾಲಿ­ನಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಶೇ 40ರಷ್ಟು ತಗ್ಗಿದ್ದು, 3346 ಕೋಟಿ ಡಾಲರ್‌ಗಳಿಗೆ (ಸುಮಾರು ರೂ2.04 ಲಕ್ಷ ಕೋಟಿಗೆ) ಇಳಿಕೆ ಕಂಡಿದೆ. ಇದರಿಂದ ಚಾಲ್ತಿ ಖಾತೆ ಕೊರತೆ (ಸಿಎಡಿ) 3,200 ಕೋಟಿ ಡಾಲರ್‌­ಗಳಿಗೆ (ರೂ1.95 ಲಕ್ಷ ಕೋಟಿ) ಇಳಿಕೆ ಕಂಡಿದೆ.

‘ಆರ್‌ಬಿಐ’ ತೆಗೆದುಕೊಂಡಿರುವ ನಿರ್ಧಾರ ಸಕಾರಾತ್ಮಕವಾಗಿದೆ. ಒಟ್ಟಾರೆ ಚಿನ್ನಾ­ಭರಣ ಉದ್ಯಮಕ್ಕೆ ಇದು ಉತ್ತೇ­ಜನ ನೀಡಲಿದ್ದು, ಚಿನ್ನದ ಪೂರೈಕೆ ಮತ್ತು ಮಾರಾಟ ಹೆಚ್ಚಲಿದೆ’ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ (ಜಿಜೆಎಫ್‌) ಅಧ್ಯಕ್ಷ ಹರೀಶ್‌ ಸೋನಿ ಅಭಿಪ್ರಾಯ­ಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕ ತಗ್ಗಿಸಿದರೆ ರಫ್ತು ವಹಿವಾಟು ಕೂಡ ಚೇತರಿಸಿಕೊಳ್ಳಲಿದೆ  ಎಂದು ಅವರು ಹೇಳಿದ್ದಾರೆ.

ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸಲು ಚಿನ್ನದ ಆಮದಿನ ಮೇಲೆ ಹೇರಿದ್ದ ನಿರ್ಬಂಧ­­ಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಸಡಿಲಿಸಿದೆ. ಇದರಿಂದ ಗುರುವಾರ ಚಿನ್ನದ ಧಾರಣೆ ದಾಖಲೆ ಕುಸಿತ ಕಂಡಿದೆ.

ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆ
ಆಮದು ನಿರ್ಬಂಧಗಳನ್ನು ಸಡಿಲಗೊ­ಳಿಸಿ­ರುವು­ದರಿಂದ ಚಿನ್ನದ ಆಮದು ತಿಂಗಳಿಗೆ ಸರಾಸರಿ 10 ರಿಂದ 15 ಟನ್‌ಗಳಷ್ಟು ಹೆಚ್ಚಲಿದ್ದು ಬೆಲೆ ಇನ್ನಷ್ಟು ಇಳಿಕೆ ಕಾಣಲಿದೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ನಿರ್ದೇಶಕ ಬಚ್‌ರಾಜ್‌ ಬಮಲ್ವಾ ಹೇಳಿದ್ದಾರೆ.

ರೂಪಾಯಿ ಮೌಲ್ಯವರ್ಧನೆ :ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಗುರುವಾರ 30 ಪೈಸೆಗಳಷ್ಟು ಚೇತರಿಕೆ ಕಂಡಿದ್ದು 11 ತಿಂಗಳಲ್ಲೇ ಗರಿಷ್ಠ ಮಟ್ಟ­ವಾದ ರೂ 58.47ರಷ್ಟಾಗಿದೆ.  2013ರ ಜೂನ್‌ 17ರ ನಂತರ ದಾಖಲಾಗಿ­ರುವ ಗರಿಷ್ಠ ವಿನಿಮಯ ಮೌಲ್ಯ ಇದಾಗಿದೆ.  ಷೇರುಪೇಟೆ ಚೇತರಿಕ ಕಂಡಿರುವು­ದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆ­ದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿದೆ. ಇದರಿಂದ ರೂಪಾಯಿ ಮೌಲ್ಯವರ್ಧನೆ ಆಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT