ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೆಲೆಯಲ್ಲಿ ಇಳಿಕೆ

Last Updated 31 ಅಕ್ಟೋಬರ್ 2014, 11:24 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿಯುತ್ತಿರುವ ಪರಿಣಾಮ ಶುಕ್ರವಾರ ದೇಶದ ರಾಜಧಾನಿಯಲ್ಲೂ ಚಿನ್ನದ ಬೆಲೆ 10ಗ್ರಾಂಗೆ 600ರೂ ಕಡಿಮೆಯಾಗಿದ್ದು, ರೂ26,500ಕ್ಕೆ ಇಳಿಕೆ ಕಂಡಿದೆ.

ಬೆಳ್ಳಿ ಕೆ.ಜಿಗೆ  ರೂ1,700ರಷ್ಟು ಇಳಿಕೆಯಾಗಿ 36,150 ತಲುಪಿದೆ. ಅಮೆರಿಕದ ಆರ್ಥಿಕ ಹಿಂಜರಿತ ಹಾಗೂ ಡಾಲರ್‌ ಮೌಲ್ಯದ ಇಳಿಕೆಯು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ ಎಂದು ಚಿನ್ನದ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮಂದಾಗಿರುವುದು ಕೂಡ ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT