ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

ಆಹಾರ ಧಾನ್ಯಗಳ ಬೆಲೆ ಏರಿಕೆ: 16 ತಿಂಗಳ ಗರಿಷ್ಠ ಮಟ್ಟಕ್ಕೆ ಸಿಪಿಐ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಚಿಲ್ಲರೆ ಹಣದುಬ್ಬರವು ಸತತ ಆರನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದೆ. ಜನವರಿಯಲ್ಲಿ ಶೇ 0.8 ರಷ್ಟು ಅಲ್ಪ ಏರಿಕೆ ಕಂಡು, ಶೇ 5.69ಕ್ಕೆ ತಲುಪಿದೆ. 

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರವು 2015ರ ಡಿಸೆಂಬರ್‌ನಲ್ಲಿ ಶೇ 5.61ರಷ್ಟಿತ್ತು.

ಜನವರಿ ತಿಂಗಳ ಚಿಲ್ಲರೆ ಹಣದುಬ್ಬರವು  16 ತಿಂಗಳ ಗರಿಷ್ಠ ಮಟ್ಟದ್ದಾಗಿದೆ. ಈ ಮೊದಲು 2014ರ ಸೆಪ್ಟೆಂಬರ್‌ನಲ್ಲಿ ಶೇ 6.46ರಷ್ಟು ಗರಿಷ್ಠ ಮಟ್ಟದಲ್ಲಿತ್ತು.
ಏಕದಳಧಾನ್ಯದ ಬೆಲೆ ಶೇ 2.12 ರಿಂದ ಶೇ 2.19ಕ್ಕೆ ಏರಿಕೆಯಾಗಿದೆ.  ಮಾಂಸ ಮತ್ತು ಮೀನಿನ ಬೆಲೆಯೂ ಶೇ 8.23ರಷ್ಟು ಮತ್ತು ಮೊಟ್ಟೆ ಧಾರಣೆ ಶೇ 3.96ರಷ್ಟು ಹೆಚ್ಚಾಗಿದೆ.

ತರಕಾರಿಗಳು ಶೇ 6.39ರಷ್ಟು ತುಟ್ಟಿಯಾಗಿವೆ. ಇನ್ನು ಧಾನ್ಯಗಳ ಬೆಲೆ ಶೇ 42.32ರಷ್ಟು ಗರಿಷ್ಠ ಮಟ್ಟದಲ್ಲಿದೆ ಎಂದು ಕೇಂದ್ರ ಅಂಕಿ–ಅಂಶ ಇಲಾಖೆ ಮಾಹಿತಿ ನೀಡಿದೆ.

ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಹಣದುಬ್ಬರ ಶೇ 6.48ರಷ್ಟಿದ್ದು, ನಗರ ಪ್ರದೇಶದಲ್ಲಿ ಶೇ 48ರಷ್ಟಿದೆ. ಆಹಾರ ಹಣದುಬ್ಬರವು ಜನವರಿಯಲ್ಲಿ ಶೇ 6.85ರಷ್ಟಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಚಿಲ್ಲರೆ ಹಣದುಬ್ಬರ ಏರುಮುಖ ವಾಗಿರುವುದರಿಂದ ಆರ್ಥಿಕ ಪ್ರಗತಿ ಹಾದಿಗೆ ಅಡ್ಡಿಯಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT